ಟಾಟಾ ಗ್ರೂಪ್​ಗೆ ಸ್ಪೈಸ್​ಜೆಟ್ ಅಧ್ಯಕ್ಷರ ಅಭಿನಂದನೆ: ಆಗಸದಲ್ಲಿ ಮತ್ತೆ ಮಹಾರಾಜ ವಿಜೃಂಭಿಸಲಿ ಎಂದು ಹಾರೈಕೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 08, 2021 | 6:27 PM

ಏರ್ ಇಂಡಿಯಾ ಮಹಾರಾಜ ಮತ್ತೆ ಆಗಸದಲ್ಲಿ ವಿಜೃಂಭಿಸಲಿ ಎಂದು ಹೇಳಿದ್ದಾರೆ.

ಟಾಟಾ ಗ್ರೂಪ್​ಗೆ ಸ್ಪೈಸ್​ಜೆಟ್ ಅಧ್ಯಕ್ಷರ ಅಭಿನಂದನೆ: ಆಗಸದಲ್ಲಿ ಮತ್ತೆ ಮಹಾರಾಜ ವಿಜೃಂಭಿಸಲಿ ಎಂದು ಹಾರೈಕೆ
ಸ್ಪೈಸ್​ ಜೆಟ್​ ವಿಮಾನ
Follow us on

ದೆಹಲಿ: ಟಾಟಾ ಸನ್ಸ್​ ಉದ್ಯಮ ಸಮೂಹಕ್ಕೆ ಏರ್​ ಇಂಡಿಯಾ ಮತ್ತೆ ಸಿಗುವ ಘೋಷಣೆಗೆ ಸ್ಪೈಸ್​ಜೆಟ್ ವಿಮಾನಯಾನ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಸ್ವಾಗತಿಸಿದ್ದಾರೆ. ಏರ್ ಇಂಡಿಯಾದಿಂದ ಬಂಡವಾಳ ಹಿಂಪಡೆಯುವ ಸರ್ಕಾರದ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿರುವುದಕ್ಕೆ ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.

ಭಾರತ ಸರ್ಕಾರವು ಪಾರದರ್ಶಕ ಮತ್ತು ಅಗತ್ಯಕ್ಕೆ ತಕ್ಕಂತೆ ರೂಪಿಸುತ್ತಿರುವ ಸರಳ ಪ್ರಕ್ರಿಯೆಗಳು ಬಂಡವಾಳ ಹಿಂಪಡೆಯುವ ಪ್ರಯತ್ನಗಳಿಗೆ ಪೂರಕವಾಗಿವೆ. ನನ್ನ ಜೀವನವಿಡೀ ನಾನು ಏರ್ ಇಂಡಿಯಾ ಅಭಿಮಾನಿಯಾಗಿದ್ದೆ. ಮಹಾರಾಜ ಮತ್ತೆ ಆಕಾಶದಲ್ಲಿ ವಿಜೃಂಭಿಸಲಿ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.

ಬಿಡ್​ ಯಶಸ್ವಿಯಾಗಿರುವುದಕ್ಕೆ ಟಾಟಾ ಸಮೂಹವನ್ನು ನಾನು ಅಭಿನಂದಿಸುತ್ತೇನೆ. ಏರ್​ ಇಂಡಿಯಾ ಖರೀದಿಗೆ ಬಿಡ್ ಮಾಡಲು ನನಗೂ ಅವಕಾಶ ಸಿಕ್ಕಿತ್ತು. ನನ್ನ ಬಿಡ್ ಅನ್ನು ಸರ್ಕಾರ ಪರಿಗಣಿಸಿತ್ತು ಎನ್ನುವುದು ನನಗೆ ಹೆಮ್ಮೆಯ ಸಂಗತಿ. ಟಾಟಾ ಸಮೂಹವು ಏರ್​ ಇಂಡಿಯಾದ ಉನ್ನತಿಯನ್ನು ವೈಭವವನ್ನು ಮರುಸ್ಥಾಪಿಸುವ ಜೊತೆಗೆ ಭಾರತಕ್ಕೂ ಹೆಮ್ಮೆ ತಂದುಕೊಡುತ್ತಾರೆ ಎಂದು ಹೇಳಿದ್ದಾರೆ.

ಏರ್​ ಇಂಡಿಯಾಗೆ ರತನ್ ಟಾಟಾ ಭಾವುಕ ಸ್ವಾಗತ
ಏರ್​ ಇಂಡಿಯಾ ಬಿಡ್​ ಗೆಲುವನ್ನು ಟಾಟಾ ಸನ್ಸ್​ ಕಂಪನಿಯ ಅಧ್ಯಕ್ಷ ರತನ್ ಭಾವುಕ ಪತ್ರವೊಂದನ್ನು ಟ್ವೀಟ್ ಮಾಡಿ ಸ್ವಾಗತಿಸಿದ್ದಾರೆ. ‘Welcome Back, Air India’ (ಏರ್​ ಇಂಡಿಯಾ ನಿನಗೆ ಮತ್ತೆ ಸ್ವಾಗತ) ಎಂಬ ಆಪ್ತ ಸಾಲುಗಳೊಂದಿಗೆ ಪತ್ರವನ್ನು ಮುಗಿಸಿದ್ದಾರೆ. ಜೆಆರ್​ಡಿ ಟಾಟಾ ಅವರು ವಿಮಾನದ ಮುಂದೆ ನಿಂತಿರುವ ಐತಿಹಾಸಿಕ ಚಿತ್ರವನ್ನು ತಮ್ಮ ಪತ್ರದೊಂದಿಗೆ ಸೇರಿಸಿದ್ದಾರೆ.

ಟಾಟಾ ಸನ್ಸ್​ ತೆಕ್ಕೆಗೆ ಏರ್​ ಇಂಡಿಯಾ
ಸರ್ಕಾರದ ಅಧೀನದಲ್ಲಿರುವ ಏರ್ ಇಂಡಿಯಾ ಕಂಪನಿಯು ಯಾರ ಪಾಲಾಗಲಿದೆ ಎಂಬ ಬಗ್ಗೆ ಬಹುನಿರೀಕ್ಷಿತ ಪ್ರಶ್ನೆಗೆ ಇದೀಗ ಉತ್ತರ ದೊರೆತಿದೆ. ಬಂಡವಾಳ ಹಿಂಪಡೆತ ಹಾಗೂ ನಾಗರಿಕ ವಿಮಾನಯಾನ ಇಲಾಖೆಯ ಕಾರ್ಯದರ್ಶಿಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟಾಟಾ ಸನ್ಸ್​ ಕಂಪನಿಯು ಏರ್​ ಇಂಡಿಯಾ ಖರೀದಿಗೆ ಸಲ್ಲಿಸಿದ್ದ ಟೆಂಡರ್​ ಒಪ್ಪಿಗೆಯಾಗಿರುವುದನ್ನು ಘೋಷಿಸಿದರು.

ಇದನ್ನೂ ಓದಿ: Air India Bid Winner: ವೆಲ್​ಕಮ್ ಬ್ಯಾಕ್ ಏರ್​ ಇಂಡಿಯಾ: ಬಿಡ್ ವಿಜೇತ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಭಾವುಕ ಪತ್ರ

ಇದನ್ನೂ ಓದಿ: Air India Bid Winner: ವೆಲ್​ಕಮ್ ಬ್ಯಾಕ್ ಏರ್​ ಇಂಡಿಯಾ: ಬಿಡ್ ವಿಜೇತ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಭಾವುಕ ಪತ್ರ