ಟಿವಿಎಸ್ ಮೋಟಾರ್ ಇಂಡಿಯಾ ತನ್ನ ವಾಹನಗಳ ಮೇಲೆ ಉತ್ತಮ ಕೊಡುಗೆಗಳನ್ನು ನೀಡಿದೆ. ನೀವು ಹೆಚ್ಚು ಮೈಲೇಜ್ ಮತ್ತು ಅಗ್ಗದ ದ್ವಿಚಕ್ರ ವಾಹನವನ್ನು ಖರೀದಿಸಲು ಬಯಸಿದರೆ TVSನಲ್ಲಿ ಹಲವು ಆಯ್ಕೆಗಳಿವೆ. ಏಕೆಂದರೆ ಕಂಪನಿಯು ತನ್ನ XL 100 ನಲ್ಲಿ ಉತ್ತಮ ಆಫರ್ಗಳನ್ನು ನೀಡುತ್ತಿದೆ. ನೀವು ಈ ದ್ವಿಚಕ್ರ ವಾಹನವನ್ನು ಕೇವಲ 7,999 ರೂಗಳ ಡೌನ್ ಪೇಮೆಂಟ್ ಮೂಲಕ ಮನೆಗೆ ತೆಗೆದುಕೊಂಡು ಹೋಗಬಹುದು. ಆ ಬಳಿಕ EMI ಮೂಲಕ ಉಳಿದ ಮೊತ್ತವನ್ನು ಪಾವತಿಸಿದರೆ ಸಾಕು.
TVS XL 100 ನ ವಿಶೇಷತೆಗಳೇನು?
ಈ ದ್ವಿಚಕ್ರ ವಾಹನವು ಇತರ ವಾಹನಗಳಿಗಿಂತ 15 ಪ್ರತಿಶತ ಹೆಚ್ಚು ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದರೊಂದಿಗೆ, ಟಿವಿಎಸ್ ಇದರಲ್ಲಿ ಆನ್-ಆಫ್ ಸ್ವಿಚ್ ಕೂಡ ನೀಡಿದ್ದು, ಮೊಬೈಲ್ ಚಾರ್ಜಿಂಗ್ ಆಯ್ಕೆಯೂ ಲಭ್ಯವಿರುತ್ತದೆ. ಹಾಗೆಯೇ ಈ ದ್ವಿಚಕ್ರ ವಾಹನವು ಮಾರುಕಟ್ಟೆಯಲ್ಲಿ ಡ್ಯುಯಲ್ ಟೋನ್ ಬಣ್ಣದಲ್ಲಿ ಖರೀದಿಸುವ ಆಯ್ಕೆಯಿದೆ.
TVS XL 100 ನಲ್ಲಿ ಆಫರ್ -ನೀವು ಈ ದ್ವಿಚಕ್ರ ವಾಹನವನ್ನು ಕೇವಲ ರೂ .7,999 ರ ಡೌನ್ ಪೇಮೆಂಟ್ ಮೂಲಕ ತಮ್ಮದಾಗಿಸಿಕೊಳ್ಳಬಹುದು. ಹಾಗೆಯೇ ನೀವು ಪೇಟಿಎಂ ಮೂಲಕ ಪಾವತಿಸಿದರೆ, ಇದರ ಮೇಲೆ 4,500 ರೂಪಾಯಿಗಳ ಕ್ಯಾಶ್‌ಬ್ಯಾಕ್ ಪಡೆಯುತ್ತೀರಿ. ಇನ್ನು ಕಂಪೆನಿಯು ಟಿವಿಎಸ್ ಎಕ್ಸ್‌ಎಲ್ 100 ಮೇಲೆ ಇಎಂಐ ಆಯ್ಕೆ ನೀಡಿದ್ದು, ಅದರಂತೆ ತಿಂಗಳಿಗೆ 1,555 ರೂ.ಗಳನ್ನು ಪಾವತಿಸಿದರೆ ಸಾಕು.
ಟಿವಿಎಸ್ ಎಕ್ಸ್‌ಎಲ್ 100 ಎಂಜಿನ್ -ಈ ದ್ವಿಚಕ್ರ ವಾಹನದಲ್ಲಿ, ಕಂಪನಿಯು 100 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನೀಡಿದೆ. ಇದು 4.3 bhp ಪವರ್ ಮತ್ತು 6.5 Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. 55 ರಿಂದ 67 ಕಿ.ಮೀ ಮೈಲೇಜ್ ನೀಡುವ TVS XL 100 ನ ಪ್ರಸ್ತುತ ಬೆಲೆ 49,999 ರೂ.
ಇದನ್ನೂ ಓದಿ: India vs England 3rd test: ಸಿರಾಜ್ ಮೇಲೆ ಚೆಂಡಿನ ದಾಳಿ: ಮುಂದುವರೆದ ಇಂಗ್ಲೆಂಡ್ ಪ್ರೇಕ್ಷಕರ ಪುಂಡಾಟ
ಇದನ್ನೂ ಓದಿ: IPL 2021: ಮಾಜಿ RCB ಆಟಗಾರ, ವಿಶ್ವದ ನಂಬರ್ 1 ಬೌಲರ್ ರಾಜಸ್ಥಾನ್ ರಾಯಲ್ಸ್ ಪಾಲು
ಇದನ್ನೂ ಓದಿ: George Garton: RCB ತಂಡಕ್ಕೆ ಎಂಟ್ರಿ ಕೊಟ್ಟಿರುವ ಜಾರ್ಜ್ ಗಾರ್ಟನ್ ಯಾರು..?
(TVS’s two-wheeler brought home on a down payment of Rs 7,999)