Used car loans: ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಯಾವ ಬ್ಯಾಂಕ್​ನಲ್ಲಿ ಬಡ್ಡಿ ದರ ಕಡಿಮೆ?

|

Updated on: May 01, 2021 | 8:28 PM

ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡಬೇಕು ಎಂದಿರುವವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಬ್ಯಾಂಕ್​ಗಳ ಪಟ್ಟಿ ಇಲ್ಲಿದೆ.

Used car loans: ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಯಾವ ಬ್ಯಾಂಕ್​ನಲ್ಲಿ ಬಡ್ಡಿ ದರ ಕಡಿಮೆ?
ಪ್ರಾತಿನಿಧಿಕ ಚಿತ್ರ
Follow us on

ಸೆಕೆಂಡ್​ ಹ್ಯಾಂಡ್ ಕಾರುಗಳ ಖರೀದಿ ಮಾಡುವುದಕ್ಕೆ ಸಾಲ ಮಾಡಬೇಕು ಎನ್ನುವ ಆಲೋಚನೆ ನಿಮಗಿದ್ದಲ್ಲಿ ಈ ಲೇಖನವನ್ನು ಖಂಡಿತಾ ಓದಬೇಕು. ಏಕೆಂದರೆ ಆ ರೀತಿಯ ಕಾರುಗಳ ಖರೀದಿ ಮೇಲಿನ ಸಾಲಕ್ಕೆ ಯಾವ ಬ್ಯಾಂಕ್​ನಲ್ಲಿ ಎಷ್ಟಿದೆ ಬಡ್ಡಿ ದರ ಎಂಬ ಮಾಹಿತಿ ನಿಮಗಾಗಿ ಇಲ್ಲಿದೆ. ಸರ್ಕಾರಿ ಬ್ಯಾಂಕ್​ಗಳಲ್ಲಂತೂ ಬಡ್ಡಿ ದರ ಕಡಿಮೆ ಇದ್ದೇ ಇದೆ. ಆದರೆ ಬಹುತೇಕ ಬ್ಯಾಂಕ್​ಗಳು ಈಗಾಗಲೇ ಇರುವ ಗ್ರಾಹಕರಿಗೆ ಸಾಲವನ್ನು ಒದಗಿಸುತ್ತವೆ. ಇನ್ನು ಖಾಸಗಿ ಬ್ಯಾಂಕ್​ಗಳು ಅಂದರೆ, ಡೀಲರ್​ಗಳ ಜತೆಗೆ ಸಹಭಾಗಿತ್ವ ಹೊಂದಿದ್ದಲ್ಲಿ ಸಾಲ ನೀಡುತ್ತವೆ. ಯಾವ ಡೀಲರ್ ಜತೆಗೆ ಸಹಭಾಗಿತ್ವ ಇದೆಯೋ ಅಲ್ಲಿಯೇ ಗ್ರಾಹಕರು ಕಾರಿನ ಸಾಲ ಪಡೆಯುತ್ತಿದ್ದಲ್ಲಿ ಖಾಸಗಿ ಬ್ಯಾಂಕ್​ಗಳಿಂದ ಅಂಥ ಗ್ರಾಹಕರಿಗೆ ಆದ್ಯತೆ ದರದಲ್ಲಿ ನೀಡಲಾಗುತ್ತದೆ.

ಯಾವ ಬ್ಯಾಂಕ್​ನಲ್ಲಿ ಸಾಲ ಪಡೆಯಬೇಕು ಅನ್ನೋದನ್ನ ನಿರ್ಧರಿಸುವ ಪ್ರಮುಖ ಅಂಶ ಅಂದರೆ, ಅದು ಲೋನ್ ಟು ವ್ಯಾಲ್ಯೂ (ಎಲ್​ಟಿವಿ) ಪ್ರಮಾಣ. ಕಾರಿನ ಮೌಲ್ಯ ಅಳೆದು, ಅದಕ್ಕೆ ಎಷ್ಟು ಪರ್ಸೆಂಟ್​ನಷ್ಟು ಮೊತ್ತವನ್ನು ಸಾಲವಾಗಿ ನೀಡಲಾಗುತ್ತದೆ ಎಂಬುದು ಬಹಳ ಮುಖ್ಯವಾಗುತ್ತದೆ. ಒಂದು ವೇಳೆ ಬ್ಯಾಂಕ್​ಗಳಿಂದ ಕಡಿಮೆ ಬಡ್ಡಿಯ ಸಾಲವನ್ನೇ ನೀಡಬಹುದು. ಆದರೆ ಆ ಕಾರಿನ ಮೌಲ್ಯಕ್ಕೆ ಕಡಿಮೆ ಪ್ರಮಾಣದ ಸಾಲ ಸಿಗುತ್ತದೆ. ಪೈಸಾಬಜಾರ್​.ಕಾಮ್​ ಮಾಹಿತಿ ಪ್ರಕಾರ, ಕೆನರಾ ಬ್ಯಾಂಕ್ ಬಹಳ ಕಡಿಮೆ ದರಕ್ಕೆ ನೀಡುತ್ತದೆ. ಎಲ್​ಟಿವಿ ಶೇ 60ರ ತನಕ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಅದೇ ಎಲ್​ಟಿವಿಗೆ ನೀಡುತ್ತದೆ.

ನೀವು ಒಂದು ಸೆಕೆಂಡ್ ಹ್ಯಾಂಡ್ ಖರೀದಿ ಮಾಡಬೇಕು ಅಂದುಕೊಂಡಿದ್ದೀರಿ. ಅದರ ಬೆಲೆ 5 ಲಕ್ಷ ರೂಪಾಯಿ ಆದಲ್ಲಿ ನಿಮಗೆ ಸಾಲ ನೀಡುವ ಬ್ಯಾಂಕ್ ಶೇ 60ರಷ್ಟು ಮಾತ್ರ, ಅಂದರೆ 3 ಲಕ್ಷ ರೂಪಾಯಿ ನೀಡುತ್ತದೆ. ಇದರಲ್ಲಿ ಖಾಸಗಿ ವಲಯದ ಎಚ್​ಡಿಎಫ್​ಸಿ ಬ್ಯಾಂಕ್​ ಶೇ 100ರ ತನಕ ಹಣಕಾಸು ಸೌಲಭ್ಯ ನೀಡುತ್ತದೆ. ಆಕ್ಸಿಸ್ ಬ್ಯಾಂಕ್ ಶೇ 85ರ ತನಕ ನೀಡುತ್ತದೆ. ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದಿಂದ ಶೇ 80ರ ತನಕ ಹಣಕಾಸು ಸೌಲಭ್ಯ ಸಿಗುತ್ತದೆ. ಸೆಕೆಂಡ್ ಹ್ಯಾಂಡ್ ಕಾರುಗಳಾದಲ್ಲಿ ಅದು ಅಪಾಯ ಹೆಚ್ಚಿರುವ ಆಸ್ತಿ ಎಂಬುದು ಸಾಲ ನೀಡುವ ಬ್ಯಾಂಕ್​ಗಳ ಆಲೋಚನೆ. ಏಕೆಂದರೆ, ಥರ್ಡ್ ಪಾರ್ಟಿಯಿಂದ ಆಗುವ ಗುಣಮಟ್ಟದ ಪರಿಶೀಲನೆ ಮೇಲೆ ಪೂರ್ಣವಾಗಿ ನಂಬಿಕೆ ಇಡಲು ಸಾಧ್ಯವಾಗಲ್ಲ.

ಯಾವ ಬ್ಯಾಂಕ್​ನಲ್ಲಿ ಎಷ್ಟಿದೆ ದರ ಎಂಬ ಮಾಹಿತಿ ಇಲ್ಲಿದೆ. ಪ್ರೊಸೆಸಿಂಗ್​ ಶುಲ್ಕ ಮತ್ತು ಸಾಲ ಮರುಪಾವತಿ ಅವಧಿಯನ್ನು ನಿಮಗೆ ಹತ್ತಿರದ ಶಾಖೆಯಲ್ಲಿ ಪರಿಶೀಲಿಸಿಕೊಳ್ಳಿ.
1) ಕೆನರಾ ಬ್ಯಾಂಕ್- ಶೇ 7.30- ಶೇ 9.90
2) ಬ್ಯಾಂಕ್ ಆಫ್ ಇಂಡಿಯಾ- ಶೇ 7.45- ಶೇ 8.55
3) ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ- ಶೇ 8.90-10.50
4) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ- ಶೇ 9.50- ಶೇ 10.50
5) ಸೌತ್ ಇಂಡಿಯನ್ ಬ್ಯಾಂಕ್- ಶೇ 13.30- ಶೇ 13.75
6) ಎಚ್​ಡಿಎಫ್​ಸಿ ಬ್ಯಾಂಕ್- ಶೇ 13.75- ಶೇ 16.00
7) ಫೆಡರಲ್ ಬ್ಯಾಂಕ್- ಶೇ 13.80
8) ಆಕ್ಸಿಸ್ ಬ್ಯಾಂಕ್- ಶೇ 14.45- ಶೇ 16.45

(ಈ ಬಡ್ಡಿ ದರಗಳು ಏಪ್ರಿಲ್ 30, 2021ಕ್ಕೆ ಅನ್ವಯ ಆಗುವಂತೆ ತೆಗೆದುಕೊಳ್ಳಲಾಗಿದೆ. ಮಾಹಿತಿ ಮೂಲ- ಪೈಸಾಬಜಾರ್.ಕಾಮ್)

ಇದನ್ನೂ ಓದಿ: Home loan: ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದಿಂದ ಗೃಹ ಸಾಲ ಶೇ 6.70ಗೆ ಇಳಿಕೆ

(Here is the list of interest rate for used cars in Indian banks)