
ದೇವನಹಳ್ಳಿ: ದೇವನಹಳ್ಳಿಯ ಕೆಂಪೇಗೌಡ ಏರ್ಪೋರ್ಟ್ಗೆ ಬಂದ ಪ್ರಯಾಣಿಕರಿಗೆ ಶಾಕ್ ಆಗಿದೆ. ಯಾಕಂದ್ರೆ ವಿವಿಧ ರಾಜ್ಯಗಳಿಗೆ ಹೋಗಲು ಬೆಳಗ್ಗೆಯೇ ಏರ್ಪೋರ್ಟ್ಗೆ ಬಂದಿದ್ದ ಪ್ರಯಾಣಿಕರು ತೆರಳಬೇಕಿದ್ದ 10 ವಿಮಾನಗಳು ರದ್ದಾಗಿವೆ. ಮುಂಬೈ, ಹೈದರಾಬಾದ್, ಬೆಳಗಾವಿ, ಚೆನ್ನೈ, ಮಂಗಳೂರು, ಅಹಮದಾಬಾದ್, ದೆಹಲಿಗೆ ತೆರಳಬೇಕಿದ್ದ ವಿಮಾನ ರದ್ದಾಗಿವೆ.
ಹಲವು ತಾಂತ್ರಿಕ ಕಾರಣಗಳಿಂದ ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆ ಒಳಗೆ ಕೆಐಎಎಲ್ ನಿಂದ ತೆರಳಬೇಕಿದ್ದ ವಿಮಾನಗಳು ಕೊನೆ ಕ್ಷಣದಲ್ಲಿ ರದ್ದಾಗಿವೆ. ಫ್ಲೈಟ್ಗಾಗಿ ಬೆಳ್ಳಂ ಬೆಳಗ್ಗೆ ಆಗಮಿಸಿರುವ ಪ್ರಯಾಣಿಕರು ಏರ್ಪೋರ್ಟ್ನಲ್ಲೇ ಕಾಯುವಂತಾಗಿದೆ.
ಇನ್ನು ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಅಂತಾರಾಜ್ಯದಿಂದ KIABಗೆ ಬರಬೇಕಿದ್ದ ವಿಮಾನಗಳು ರದ್ದಾಗಿವೆ. ಮುಂಬೈ, ದೆಹಲಿ, ಗೋವಾ, ಕೋಲ್ಕತ್ತಾ, ಇಂದೋರ್, ಹೈದರಾಬಾದ್, ಜೈಪುರದಿಂದ ಬರಬೇಕಿದ್ದ ವಿಮಾನಗಳು ರದ್ದಾಗಿವೆ.
Published On - 8:49 am, Thu, 28 May 20