ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ರಣಕೇಕೆ, ಉಳಿದ ಜಿಲ್ಲೆಗಳಲ್ಲಿ ಎಷ್ಟು?

| Updated By:

Updated on: May 27, 2020 | 3:19 PM

ಬೆಂಗಳೂರು: ಕ್ರೂರಿ ಕೊರೊನಾ ದಿನೇ ದಿನೇ ಸಿಕ್ಕ ಸಿಕ್ಕವರ ದೇಹಹೊಕ್ಕ ಅಟ್ಟಹಾಸ ಮೆರೆಯುತ್ತಿದೆ. ರಾಜ್ಯದಲ್ಲಿ ಹೊಸದಾಗಿ 122 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2405ಕ್ಕೆ ಏರಿಕೆಯಾಗಿದೆ.   ಕಲಬುರಗಿ 28, ಯಾದಗಿರಿ 16, ಹಾಸನ 15, ಬೀದರ್ 12, ದಕ್ಷಿಣ ಕನ್ನಡ 11, ಉಡುಪಿ 9, ಬೆಂಗಳೂರು 6, ಉತ್ತರ ಕನ್ನಡ 6, ರಾಯಚೂರು 5, ಬೆಳಗಾವಿ 4, ಚಿಕ್ಕಮಗಳೂರು 3, ಬೆಂಗಳೂರು ಗ್ರಾಮಾಂತರ 2, ವಿಜಯಪುರ 2, ತುಮಕೂರು 1, […]

ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ರಣಕೇಕೆ, ಉಳಿದ ಜಿಲ್ಲೆಗಳಲ್ಲಿ ಎಷ್ಟು?
Follow us on

ಬೆಂಗಳೂರು: ಕ್ರೂರಿ ಕೊರೊನಾ ದಿನೇ ದಿನೇ ಸಿಕ್ಕ ಸಿಕ್ಕವರ ದೇಹಹೊಕ್ಕ ಅಟ್ಟಹಾಸ ಮೆರೆಯುತ್ತಿದೆ. ರಾಜ್ಯದಲ್ಲಿ ಹೊಸದಾಗಿ 122 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2405ಕ್ಕೆ ಏರಿಕೆಯಾಗಿದೆ.

 

ಕಲಬುರಗಿ 28, ಯಾದಗಿರಿ 16, ಹಾಸನ 15, ಬೀದರ್ 12, ದಕ್ಷಿಣ ಕನ್ನಡ 11, ಉಡುಪಿ 9, ಬೆಂಗಳೂರು 6, ಉತ್ತರ ಕನ್ನಡ 6, ರಾಯಚೂರು 5, ಬೆಳಗಾವಿ 4, ಚಿಕ್ಕಮಗಳೂರು 3, ಬೆಂಗಳೂರು ಗ್ರಾಮಾಂತರ 2, ವಿಜಯಪುರ 2, ತುಮಕೂರು 1, ಬಳ್ಳಾರಿ 1, ಮಂಡ್ಯ ಜಿಲ್ಲೆಯಲ್ಲಿ 1 ಪ್ರಕರಣ ಪತ್ತೆಯಾಗಿದೆ.

2405 ಸೋಂಕಿತರ ಪೈಕಿ 762 ಈವರೆಗೆ ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ ಒಟ್ಟು 45 ಜನ ಬಲಿಯಾಗಿದ್ದಾರೆ. 1,596 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Published On - 1:23 pm, Wed, 27 May 20