ತುಂಬಿ ಹರಿಯೋ ಕಾಲುವೆ ನೋಡಲು ಹೋಗಿ ಕೊಚ್ಚಿ ಹೋದ ಬಾಲಕ

|

Updated on: Oct 21, 2019 | 3:30 PM

ಹಾವೇರಿ: ಕಾಲುವೆ ನೀರಿನಲ್ಲಿ 14 ವರ್ಷದ ಬಾಲಕ ಕೊಚ್ಚಿ ಹೋಗಿರುವ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ನಡೆದಿದೆ. ಅತಿಯಾದ ಮಳೆಯಿಂದ ದುರ್ಗಾದೇವಿ ಕೆರೆಯು ತುಂಬಿ ಹರಿಯುತ್ತಿತ್ತು. ಈ ವೇಳೆ ಹರಿಯುತ್ತಿದ್ದ ಕಾಲುವೆ ನೋಡಲು ಬಂದ ಶೋಯೆಬ್ ಕಾಲುಜಾರಿ ಕಾಲುವೆಯಲ್ಲಿ ಬಿದ್ದು ನೀರುಪಾಲಾಗಿದ್ದಾನೆ. ಕಾಲುವೆಯ ಬಳಿ ಸ್ಥಳೀಯರಿಂದ ತೀವ್ರ ಶೋಧ ನಡೆಯುತ್ತಿದ್ದು, ಈ ಘಟನೆ ಹಿರೇಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹತ್ತಿಮತ್ತೂರ ಗ್ರಾಮದಲ್ಲಿ ರಾತ್ರಿಯಿಡಿ ಸುರಿದ ಧಾರಾಕಾರ ಮಳೆ ಹಿನ್ನೆಲೆ […]

ತುಂಬಿ ಹರಿಯೋ ಕಾಲುವೆ ನೋಡಲು ಹೋಗಿ ಕೊಚ್ಚಿ ಹೋದ ಬಾಲಕ
Follow us on

ಹಾವೇರಿ: ಕಾಲುವೆ ನೀರಿನಲ್ಲಿ 14 ವರ್ಷದ ಬಾಲಕ ಕೊಚ್ಚಿ ಹೋಗಿರುವ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ನಡೆದಿದೆ. ಅತಿಯಾದ ಮಳೆಯಿಂದ ದುರ್ಗಾದೇವಿ ಕೆರೆಯು ತುಂಬಿ ಹರಿಯುತ್ತಿತ್ತು.
ಈ ವೇಳೆ ಹರಿಯುತ್ತಿದ್ದ ಕಾಲುವೆ ನೋಡಲು ಬಂದ ಶೋಯೆಬ್ ಕಾಲುಜಾರಿ ಕಾಲುವೆಯಲ್ಲಿ ಬಿದ್ದು ನೀರುಪಾಲಾಗಿದ್ದಾನೆ. ಕಾಲುವೆಯ ಬಳಿ ಸ್ಥಳೀಯರಿಂದ ತೀವ್ರ ಶೋಧ ನಡೆಯುತ್ತಿದ್ದು, ಈ ಘಟನೆ ಹಿರೇಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹತ್ತಿಮತ್ತೂರ ಗ್ರಾಮದಲ್ಲಿ ರಾತ್ರಿಯಿಡಿ ಸುರಿದ ಧಾರಾಕಾರ ಮಳೆ ಹಿನ್ನೆಲೆ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಕೊಚ್ಚಿಹೋಗಿರುವ ಬೆಳೆಯನ್ನ ಆಯ್ದುಕೊಂಡು, ಕಾಯ್ದುಕೊಳ್ಳುವ ಕಾರ್ಯದಲ್ಲಿ  ರೈತರು ತೊಡಗಿದ್ದಾರೆ.

ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ
ಐದು ಎಕರೆಯಲ್ಲಿ ಬೆಳೆದಿದ್ದ ಶೇಂಗಾ ಬೆಳೆ ಹಳ್ಳದ ನೀರಲ್ಲಿ ಕೊಚ್ಚಿಕೊಂಡು ಹೋಗಿದೆ. ಇದು ನಾಗರಾಜ ಶಾಬಣ್ಣವರ ಎಂಬ ರೈತನಿಗೆ ಸೇರಿದ ಬೆಳೆಯಾಗಿದೆ. ಒಕ್ಕಣಿ ಮಾಡಲು ಕಿತ್ತಿಟ್ಟಿದ್ದ ಶೇಂಗಾ ಬೆಳೆ ಹೀಗೆ ನೀರುಪಾಲು ಆಗಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಒಟ್ನಲ್ಲಿ ಮಳೆರಾಯನ ಆರ್ಭಟಕ್ಕೆ ರೈತರು ಕಂಗಾಲಾಗಿದ್ದಾರೆ.



Published On - 3:06 pm, Mon, 21 October 19