ಆಫರ್ ಲೆಟರ್ ಹರಿದುಹಾಕಿದ ಕಾಲೇಜು, ಮನನೊಂದು ಸಾವಿಗೆ ಶರಣಾದ ಮೆರಿಟ್ ಸ್ಟೂಡೆಂಟ್!
ಬೆಂಗಳೂರು: ಕಾಲೇಜು ಕಟ್ಟಡದಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೃತ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯ ಹೆಸರು ಹರ್ಷ ಎಂದು ತಿಳಿದು ಬಂದಿದೆ. ಹರ್ಷ ಅಮೃತ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಇಸಿ ವಿಭಾಗದಲ್ಲಿ, ನಾಲ್ಕನೆ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತಿದ್ದ. ಕಳೆದ ಕೆಲ ದಿನಗಳ ಹಿಂದೆ ಕಾಲೇಜು ಹಾಸ್ಟೆಲ್‌ನಲ್ಲಿ ಊಟ ಸರಿಯಿಲ್ಲವೆಂದು ಪ್ರತಿಭಟನೆ ಮಾಡಿದ್ದ. ಈ ಕಾರಣಕ್ಕಾಗಿ ಕಾಲೇಜು ಅಡಳಿತ ಮಂಡಳಿ ಹರ್ಷ ಸೇರಿ 20 ವಿದ್ಯಾರ್ಥಿಗಳನ್ನ ಸಸ್ಪೆಂಡ್ […]
ಬೆಂಗಳೂರು: ಕಾಲೇಜು ಕಟ್ಟಡದಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೃತ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯ ಹೆಸರು ಹರ್ಷ ಎಂದು ತಿಳಿದು ಬಂದಿದೆ. ಹರ್ಷ ಅಮೃತ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಇಸಿ ವಿಭಾಗದಲ್ಲಿ, ನಾಲ್ಕನೆ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತಿದ್ದ. ಕಳೆದ ಕೆಲ ದಿನಗಳ ಹಿಂದೆ ಕಾಲೇಜು ಹಾಸ್ಟೆಲ್‌ನಲ್ಲಿ ಊಟ ಸರಿಯಿಲ್ಲವೆಂದು ಪ್ರತಿಭಟನೆ ಮಾಡಿದ್ದ. ಈ ಕಾರಣಕ್ಕಾಗಿ ಕಾಲೇಜು ಅಡಳಿತ ಮಂಡಳಿ ಹರ್ಷ ಸೇರಿ 20 ವಿದ್ಯಾರ್ಥಿಗಳನ್ನ ಸಸ್ಪೆಂಡ್ ಮಾಡಿತ್ತು.
ಈ ಮಧ್ಯೆ, ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಸೆಲೆಕ್ಟ್ ಆಗಿದ್ದ ಹರ್ಷ ನಿಗೆ ಪ್ರತಿಷ್ಠಿತ ಕಂಪನಿಯೊಂದರಿಂದ ಬಂದಿದ್ದ ಕಾಲ್ ಲೆಟರ್‌ನ್ನು ಕಾಲೇಜು ಅಡಳಿತ ಮಂಡಳಿ ಹರ್ಷನ ಮುಂದೆಯೇ ಹರಿದು ಹಾಕಿತ್ತು. ಇದರಿಂದ ಮನನೊಂದ ವಿದ್ಯಾರ್ಥಿ ಹರ್ಷ ಆರನೆ ಫ್ಲೋರ್ ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ವಿಚಾರಣೆ ನಡೆಯುತ್ತಿದೆ.
Published On - 3:53 pm, Mon, 21 October 19