AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಇನ್ನೂ 5 ದಿನ ಆರ್ಭಟಿಸಲಿದ್ದಾನೆ ವರುಣರಾಯ

ಬೆಂಗಳೂರು: ರಾಜ್ಯದಲ್ಲಿ ಇಗಾಗಲೇ ವರುಣನ ಅಬ್ಬರ ಜೋರಾಗಿದೆ. ಈ ನಡುವೆ ಮುಂದಿನ 5 ದಿನವೂ ರಾಜ್ಯದಲ್ಲಿ ಮಳೆರಾಯನ ಆರ್ಭಟ ಮುಂದುವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸುಂದರ್ ಮೇತ್ರಿ ಹೇಳಿದ್ದಾರೆ. ಅರಬ್ಬೀ ಸಮುದ್ರದ ಪೂರ್ವಕೇಂದ್ರದಲ್ಲಿ ವಾಯುಭಾರ ಕುಸಿತವಾಗಿದೆ. ಹೀಗಾಗಿ ಮುಂದಿನ 5 ದಿನ ರಾಜ್ಯದಲ್ಲಿ ಮಳೆಯಾಗಲಿದೆ. 24 ಗಂಟೆಯಲ್ಲಿ ಮತ್ತಷ್ಟು ವಾಯುಭಾರ ಕುಸಿತ ಆಗುವ ಸಾಧ್ಯತೆ ಇರುವುದರಿಂದ, ಮತ್ತೆ 12 ಗಂಟೆ ಕಳೆದ ಮೇಲೆ ವಾಯುಭಾರ ಕುಸಿತದ ತೀವ್ರತೆ ಸಹ ಹೆಚ್ಚಾಗಲಿದೆ. ಬೆಳಗಾವಿ, ಹುಬ್ಬಳ್ಳಿ, ಧಾರವಾಡದಲ್ಲಿ […]

ರಾಜ್ಯದಲ್ಲಿ ಇನ್ನೂ 5 ದಿನ ಆರ್ಭಟಿಸಲಿದ್ದಾನೆ ವರುಣರಾಯ
ಸಾಧು ಶ್ರೀನಾಥ್​
|

Updated on:Oct 21, 2019 | 6:43 PM

Share

ಬೆಂಗಳೂರು: ರಾಜ್ಯದಲ್ಲಿ ಇಗಾಗಲೇ ವರುಣನ ಅಬ್ಬರ ಜೋರಾಗಿದೆ. ಈ ನಡುವೆ ಮುಂದಿನ 5 ದಿನವೂ ರಾಜ್ಯದಲ್ಲಿ ಮಳೆರಾಯನ ಆರ್ಭಟ ಮುಂದುವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸುಂದರ್ ಮೇತ್ರಿ ಹೇಳಿದ್ದಾರೆ.

ಅರಬ್ಬೀ ಸಮುದ್ರದ ಪೂರ್ವಕೇಂದ್ರದಲ್ಲಿ ವಾಯುಭಾರ ಕುಸಿತವಾಗಿದೆ. ಹೀಗಾಗಿ ಮುಂದಿನ 5 ದಿನ ರಾಜ್ಯದಲ್ಲಿ ಮಳೆಯಾಗಲಿದೆ. 24 ಗಂಟೆಯಲ್ಲಿ ಮತ್ತಷ್ಟು ವಾಯುಭಾರ ಕುಸಿತ ಆಗುವ ಸಾಧ್ಯತೆ ಇರುವುದರಿಂದ, ಮತ್ತೆ 12 ಗಂಟೆ ಕಳೆದ ಮೇಲೆ ವಾಯುಭಾರ ಕುಸಿತದ ತೀವ್ರತೆ ಸಹ ಹೆಚ್ಚಾಗಲಿದೆ. ಬೆಳಗಾವಿ, ಹುಬ್ಬಳ್ಳಿ, ಧಾರವಾಡದಲ್ಲಿ ಹೆಚ್ಚು ಮಳೆಯಾಗಲಿದ್ದು, ಹುಬ್ಬಳಿ, ಧಾರವಾಡ, ಬೆಳಾಗವಿ ನಲ್ಲೂ ಮಳೆ ದಾಖಲೆ ಮಾಡಿದೆ. ಮಧ್ಯಾಹ್ನ,ರಾತ್ರಿ ವೇಳೆ ಹೆಚ್ಚು ಮಳೆ ಬರಲಿದೆ. ಇದು ತೀವ್ರವಾದ ವಾಯುಭಾರ ಕುಸಿತಕ್ಕೆ ಕಾರಣವಾಗಲಿದೆ.

ಮತ್ತೆ ಬಂಗಾಳಕೊಲ್ಲಿಯಲ್ಲೂ ವಾಯುಭಾರ ಕುಸಿತ ಸಾಧ್ಯತೆ ಹೆಚ್ಚಾಗಿದೆ ಹೀಗಾಗಿ ಇದೇ ತಿಂಗಳ 23 ರೊಳಗೆ ಮಳೆ ಆಗಲಿದ್ದು, ತಮಿಳುನಾಡು ಗಡಿ ಭಾಗ, ಆಂದ್ರ ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಅಲ್ಲದೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ದಕ್ಷಿಣ ಒಳನಾಡು ಪ್ರದೇಶದಲ್ಲೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಬೆಂಗಳೂರು ನಗರದಲ್ಲಿ ರಾತ್ರಿ ವೇಳೆ ಹೆಚ್ಚು ಮಳೆ ಆಗಲಿದೆ. ಸುಮಾರು 4 ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

Published On - 2:19 pm, Mon, 21 October 19