ಆಹಾರ ಇಲಾಖೆಯಲ್ಲಿ ಅನುಮೋದನೆಯಾಗದೆ ಬಾಕಿ ಉಳಿದಿವೆ 2.95 ಲಕ್ಷ ಪಡಿತರ ಚೀಟಿ ಅರ್ಜಿಗಳು

|

Updated on: Nov 13, 2023 | 12:16 PM

ಬಾಕಿ ಉಳಿದಿರುವ ಹೊಸ ಪಡಿತರ ಚೀಟಿ ಅರ್ಜಿಗಳ ಪ್ರಕ್ರಿಯೆಯು ಕಳೆದ ವಾರದಿಂದ ಪ್ರಾರಂಭವಾಯಿತು. ಆದರೆ, ಪಡಿತರ ಚೀಟಿಗಾಗಿ ಹೊಸ ಅರ್ಜಿಗಳನ್ನು ಸಲ್ಲಿಸಲು ಜನರಿಗೆ ಯಾವಾಗ ಅವಕಾಶ ನೀಡಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ

ಆಹಾರ ಇಲಾಖೆಯಲ್ಲಿ ಅನುಮೋದನೆಯಾಗದೆ ಬಾಕಿ ಉಳಿದಿವೆ 2.95 ಲಕ್ಷ ಪಡಿತರ ಚೀಟಿ ಅರ್ಜಿಗಳು
ಪಡಿತರ ಕಾರ್ಡ್​
Follow us on

ಬೆಂಗಳೂರು ನ.13: ಅನ್ನಭಾಗ್ಯ (Anna Bhagya) ಮತ್ತು ಗೃಹ ಲಕ್ಷ್ಮಿ (Gruhalaxmi) ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಉತ್ಸುಕರಾಗಿರುವ ರಾಜ್ಯದ ಸಾವಿರಾರು ಅರ್ಹ ಕುಟುಂಬಗಳು ಪಡಿತರ ಚೀಟಿಗಾಗಿ (Ration Card) ಅರ್ಜಿ ಸಲ್ಲಿಸಲು ಕಾಯುತ್ತಿವೆ. ಆದರೆ ಮಾರ್ಚ್ 2023 ರಿಂದ 2.95 ಲಕ್ಷ ಅರ್ಜಿಗಳು ಅನುಮೋದನೆಗೆ ಬಾಕಿ ಉಳಿದಿವೆ. ಎಂದು ಅಧಿಕಾರಿಗಳು ಹೇಳಿದ್ದಾರೆ.

ಉದಾಹರಣೆಗೆ ಬಾಗಲಕೋಟೆ ಜಿಲ್ಲೆಯ ಕರಡಿ ಗ್ರಾಮದ ನಿವಾಸಿ ಶಶಿಕುಮಾರ್ ಅವರು ಚುನಾವಣೆಗೆ ಮುನ್ನ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದರು. ಅನ್ನ ಭಾಗ್ಯ ಯೋಜನೆಯು ಅವರ ಕುಟುಂಬದ ಆಹಾರ ವೆಚ್ಚವನ್ನು ತಗ್ಗಿಸುತ್ತದೆ ಎಂದು ಅವರು ಭಾವಿಸಿದ್ದರು. ಆದರೆ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ನನಗೆ ತಿಳಿಸಲಾಯಿತು. ಇದಕ್ಕೆ ಕಾರಣ ನೀಡಿಲ್ಲ ಎಂದು ಹೇಳಿದರು.

ಕಳೆದ ಎರಡು ವರ್ಷಗಳಿಂದ ಪಡಿತರ ಚೀಟಿ ಪಡೆಯುವ ಪ್ರಕ್ರಿಯೆ ಕುಂಠಿತವಾಗಿದೆ ಪಡಿತರ ಚೀಟಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದರಿಂದ ವಿತರಣೆ ವಿಳಂಬವಾಗಿದೆ. ಭೂಮಾಲೀಕರು ಸಹ ತಮ್ಮ ಹೆಂಡತಿಯ ಹೆಸರಿನಲ್ಲಿ ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆದಿರುವ ಹಲವಾರು ನಿದರ್ಶನಗಳಿವೆ. ಇದರಿಂದ ಬಡವರಿಗೆ ತೊಂದರೆಯಾಗುತ್ತಿದೆ ಎಂದು ಕೊಪ್ಪಳ ಮೂಲದ ತಳಮಟ್ಟದ ಕಾರ್ಯಕರ್ತ ವಿರುಪಮ್ಮ ವಿವರಿಸುತ್ತಾರೆ.

ಇದನ್ನೂ ಓದಿ: ಹೊಸ ಪಡಿತರ ಕಾರ್ಡ್​​ ವಿತರಣೆಗೆ ಆಹಾರ ಇಲಾಖೆ ಗ್ರೀನ್ ಸಿಗ್ನಲ್: ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಯಾದಗಿರಿ ಜಿಲ್ಲೆಯಲ್ಲಿ ಇದೇ ರೀತಿ ನಾಲ್ವರ ಕುಟುಂಬ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಯತ್ನಿಸುತ್ತಿದೆ. ತಿಮ್ಮೇಸ್ವಾಮಿ (ಹೆಸರು ಬದಲಿಸಲಾಗಿದೆ) ಗೋವಾದಲ್ಲಿ ಕೆಲಸ ಮಾಡುತ್ತಿದ್ದ ವಲಸಿಗ. ಇದೀಗ ಯಾದಗಿರಿಯಲ್ಲಿ ನೆಲಸಿದ್ದಾರೆ. ನಮಗೆ ಭೂಮಿ ಇಲ್ಲ. ನಾನು ಮತ್ತು ನನ್ನ ಪತ್ನಿ ಕೃಷಿ ಕೂಲಿ ಕೆಲಸ ಮಾಡುತ್ತಿದ್ದೇವೆ. ಸರ್ಕಾರದ ಯೋಜನೆಗಳನ್ನು ನಮ್ಮ ನೆರೆಹೊರೆಯವರು ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ ನಮಗೆ ಅದೃಷ್ಟವಿಲ್ಲ. ಕಳೆದ ವರ್ಷ ಪಡಿತರ ಚೀಟಿಗಾಗಿ ತಿಮ್ಮಸ್ವಾಮಿ ಅರ್ಜಿ ಸಲ್ಲಿಸಿದ್ದು, ಪ್ರತಿ ತಿಂಗಳು ಫಾಲೋ ಅಪ್ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಪಡಿತರ ಚೀಟಿ ತಿದ್ದುಪಡಿ

ಪಡಿತರ ಚೀಟಿ ತಿದ್ದುಪಡಿ ವಿಳಂಬವಾಗುತ್ತಿದೆ. ಮಕ್ಕಳು ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿದ್ದಾರೆ. ನನ್ನ ಪಡಿತರ ಚೀಟಿಯಿಂದ ಅವರ ಹೆಸರನ್ನು ತೆಗೆದುಹಾಕಲು ನನಗೆ ಸಾಧ್ಯವಾಗುತ್ತಿಲ್ಲ. ಅವರ ಆದಾಯವನ್ನು ಲೆಕ್ಕ ಹಾಕಿರುವುದರಿಂದ ನನಗೆ ಸರ್ಕಾರ ಬಿಪಿಎಲ್​ ಕಾರ್ಡ್​ ನೀಡುತ್ತಿಲ್ಲ ಎಂದು ಹಾಸನ ನಗರದ ಮನೆಕೆಲಸಗಾರ್ತಿ ವಸಂತ ಹೇಳಿದರು.

ಅಕ್ಟೋಬರ್‌ನಿಂದ ಅವರು ತಮ್ಮ ಮಗ ಮತ್ತು ಮಗಳ ಹೆಸರನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದ್ದಾರೆ. ಜಿಲ್ಲಾ ಆಹಾರ ಕಚೇರಿಗೆ ಬರಲು ಹೇಳಿದಾಗ ನಾನು ಹೋದೆ. ಅವರು ಕೇವಲ 20 ಅರ್ಜಿಗಳನ್ನು ಪ್ರಕ್ರಿಯೆಗೊಳಿಸಿದ್ದಾರೆ. ಆದರೆ, ನನ್ನ ಸರದಿ ಬರುವ ಮುನ್ನವೇ ಕಂಪ್ಯೂಟರ್ ಆಪರೇಟರ್‌ಗಳು ಸರ್ವರ್‌ ಸಮಸ್ಯೆ ಇದೆ ಎಂದು ಹೇಳಿ ವಾಪಸ್‌ ಕಳುಹಿಸಿದರು ಎಂದು ವಸಂತಾ ಹೇಳಿದರು.

ಅನ್ನಭಾಗ್ಯ ಮತ್ತು ನೇರ ಲಾಭ ವರ್ಗಾವಣೆ ಯೋಜನೆಗಳ ಲಾಭ ಪಡೆಯಲು ಭಾರಿ ಬೇಡಿಕೆಯಿರುವುದರಿಂದ, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಪಡಿತರ ಚೀಟಿ ತಿದ್ದುಪಡಿ ಅರ್ಜಿಗಳ ಸಂಖ್ಯೆ 53,000 ಕ್ಕೆ ಏರಿದೆ. ಅಕ್ಟೋಬರ್‌ನಲ್ಲಿ 1.3 ಲಕ್ಷ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಿದ್ದೇವೆ ಎಂದು ಅವರು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತ ಕನಗವಲ್ಲಿ ಎಂ ತಿಳಿಸಿದ್ದಾರೆ.

ಬಾಕಿ ಉಳಿದಿರುವ ಹೊಸ ಪಡಿತರ ಚೀಟಿ ಅರ್ಜಿಗಳ ಪ್ರಕ್ರಿಯೆಯು ಕಳೆದ ವಾರದಿಂದ ಪ್ರಾರಂಭವಾಯಿತು. ಆದರೆ, ಪಡಿತರ ಚೀಟಿಗಾಗಿ ಹೊಸ ಅರ್ಜಿಗಳನ್ನು ಸಲ್ಲಿಸಲು ಜನರಿಗೆ ಯಾವಾಗ ಅವಕಾಶ ನೀಡಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ