
ಮೈಸೂರು: ಮೈಸೂರಿನ ಚಾಮುಂಡಿ ವಿಹಾರ್ ಕ್ರೀಡಾಂಗಣದ ಜಾಗ ನನ್ನದು. ಸ್ಟೇಡಿಯಂ ನಿರ್ಮಾಣಕ್ಕೆ ಎರಡು ಎಕರೆ ಫ್ರೀ ಆಗಿ ಕೊಟ್ಟಿದ್ದೇನೆ ಎಂದು ಸ್ಥಳೀಯ ಮುಖಂಡರೊಂದಿಗೆ ಮಾತುಕತೆ ವೇಳೆ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಾನು ಮಹಾರಾಜರ ಮಗಳ ಬಳಿ 4ಎಕರೆ ಜಾಗ ತಗೊಂಡಿದ್ದೆ. ಮಾಜಿ ಶಾಸಕ ವಾಸು ಆಗ ಮೈಸೂರು ಮೇಯರ್ ಆಗಿದ್ದ. ಆ ವೇಳೆ ಸ್ಟೇಡಿಯಂ ನಿರ್ಮಾಣಕ್ಕೆ 2 ಎಕರೆ ಜಾಗ ಕೊಟ್ಟಿದ್ದೆ, ಅದಕ್ಕೆ ವಾಸು ಸಾಕ್ಷಿ ಎಂದು ಮೈಸೂರಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದ ಡಿಕೆಶಿ ತಿಳಿಸಿದ್ದಾರೆ.
ಈ ವೇಳೆ ಡಿ.ಕೆ. ಶಿವಕುಮಾರ್ರನ್ನು ಮುಖಂಡರು ಹಾಡಿಹೊಗಳಿದರು. ನೀವು ಮೈಸೂರಿನ ಅಳಿಯ, ನೀವು ಮೈಸೂರಿಗಾಗಿ ಕೆಲಸ ಮಾಡಿದ್ದೀರಿ ಎಂದು ಹೊಗಳಿದರು.
Published On - 11:54 am, Fri, 8 November 19