ರಿಯಲ್ ಎಸ್ಟೇಟ್ ಬಗ್ಗೆ ಡಿಕೆಶಿ ಸ್ವಾರಸ್ಯಕರ ಮಾತು, ಅದು ಇ.ಡಿಗೆ ನೀಡಿದ ಸಂದೇಶವಾ?

  • TV9 Web Team
  • Published On - 13:21 PM, 8 Nov 2019
ರಿಯಲ್ ಎಸ್ಟೇಟ್ ಬಗ್ಗೆ ಡಿಕೆಶಿ ಸ್ವಾರಸ್ಯಕರ ಮಾತು, ಅದು ಇ.ಡಿಗೆ ನೀಡಿದ ಸಂದೇಶವಾ?

ಮೈಸೂರು: ಚಾಮುಂಡಿ ಕ್ರೀಡಾಂಗಣಕ್ಕೆ 2ಎಕರೆ ಜಾಗ ನಾನೇ ಫ್ರೀಯಾಗಿ ಕೊಟ್ಟಿದ್ದೇನೆ ಎಂದು ಮೈಸೂರಿನ ಅಳಿಯ, ಕಾಂಗ್ರೆಸ್​ ಶಾಸಕ ಡಿ.ಕೆ.ಶಿವಕುಮಾರ್ ಬೆಳಗ್ಗೆಯಷ್ಟೇ ಸಭೆಯೊದಂರಲ್ಲಿ ಹೇಳಿದ್ದರು. ಅದಾದ ಬಳಿಕ ಮತ್ತೊಂದು ಸುತ್ತು ಸಭೆ ಸೇರಿದ್ದ ಕಾಂಗ್ರೆಸ್​ ಮುಖಂಡರು ರಿಯಲ್ ಎಸ್ಟೇಟ್ ಬಗ್ಗೆ ಸ್ವಾರಸ್ಯಕರವಾಗಿ ವಿಚಾರ ಹಂಚಿಕೊಂಡಿದ್ದಾರೆ. ಮಾಜಿ ಸಚಿವ ಡಿಕೆಶಿ, ಸಾ.ರಾ.ಮಹೇಶ್, ಧ್ರುವನಾರಾಯಣ ನಡುವೆ ಈ ಮಾತುಕತೆ ನಡೆದಿದೆ.

ಡಿಕೆಶಿ ಜೊತೆಗಿನ ಚರ್ಚೆ ವೇಳೆ ರಿಯಲ್ ಎಸ್ಟೇಟ್​ಗೆ ಈ ಹಿಂದೆ ಬೂಮ್ ಇತ್ತು ಎಂದು ಸಂಸದ ಧ್ರುವನಾರಾಯಣ ಹೇಳಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಅದರಿಂದ ಸಾ.ರಾ.ಮಹೇಶ್, ರಾಮದಾಸ್ ಆರ್ಥಿಕವಾಗಿ ಸದೃಢರಾದ್ರು ಎಂದ್ರು.

1ಲಕ್ಷದ ಸೈಟ್ 4ಕೋಟಿ ರೂ ಆಗಿದೆ, ಏನಂತ ಅಫಿಡವಿಟ್ ಕೊಡ್ಲಿ!?
ಇದೇ ವೇಳೆ ತಮ್ಮದೂ ಒಂದು ಅನುಭವವನ್ನು ಹಂಚಿಕೊಂಡ ಅವರು ಬಂಗಾರಪ್ಪ ನನಗೆ ಒಂದು ಲಕ್ಷಕ್ಕೆ ಒಂದು ಸೈಟ್ ಕೊಟ್ಟಿದ್ದರು. ಆ ಸೈಟ್ ಬೆಲೆ ಈಗ ನಾಲ್ಕು ಕೋಟಿ ರೂಪಾಯಿ ಆಗಿದೆ. ನಾನು ಅಫಿಡವಿಟ್ ಸಲ್ಲಿಸುವಾಗ 1 ಲಕ್ಷ ಅಂತ ಕೊಡಬೇಕಾ? ನಾಲ್ಕು ಕೋಟಿ ಕೊಡಬೇಕಾ ಗೊತ್ತಾಗುತ್ತಿಲ್ಲ ಎಂದು ಡಿಕೆಶಿ ಪೇಚಾಡಿದರು.

ಅಕ್ರಮ ಆಸ್ತಿ ಸಂಪಾದಿಸುವುದರಲ್ಲಿ ಡಿಕೆ ಶಿವಕುಮಾರ್ ಗಿನ್ನಿಸ್​ ದಾಖಲೆ ಮಾಡಿದ್ದಾರೆ ಎಂದು ಇ.ಡಿ. ಪರ ವಕೀಲ ನಟರಾಜ್​ ಅವರು ಇತ್ತೀಚೆಗೆ ದಿಲ್ಲಿ ಕೋರ್ಟ್​ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಡಿಕೆಶಿ ಅವರ ಇಂದಿನ ಮಾತು ಇ.ಡಿ.ಗೆ ನೀಡಿದ ಬಹಿರಂಗ ಉತ್ತರದಂತೆ ಇತ್ತು ಎಂದು ಮೈಸೂರು ಜನ ಮಾತನಾಡಿದ್ದಾರೆ.