ಚಾಮುಂಡಿ ಸ್ಟೇಡಿಯಂಗೆ 2 ಎಕ್ರೆ ನಾನೇ ಫ್ರೀಯಾಗಿ ಕೊಟ್ಟಿದ್ದೇನೆ -ಮೈಸೂರಿನ ಅಳಿಯ ಡಿಕೆಶಿ

ಚಾಮುಂಡಿ ಸ್ಟೇಡಿಯಂಗೆ 2 ಎಕ್ರೆ ನಾನೇ ಫ್ರೀಯಾಗಿ ಕೊಟ್ಟಿದ್ದೇನೆ -ಮೈಸೂರಿನ ಅಳಿಯ ಡಿಕೆಶಿ

ಮೈಸೂರು: ಮೈಸೂರಿನ ಚಾಮುಂಡಿ ವಿಹಾರ್ ಕ್ರೀಡಾಂಗಣದ ಜಾಗ ನನ್ನದು. ಸ್ಟೇಡಿಯಂ ನಿರ್ಮಾಣಕ್ಕೆ ಎರಡು ಎಕರೆ ಫ್ರೀ ಆಗಿ ಕೊಟ್ಟಿದ್ದೇನೆ ಎಂದು ಸ್ಥಳೀಯ ಮುಖಂಡರೊಂದಿಗೆ ಮಾತುಕತೆ ವೇಳೆ ಡಿಕೆ ಶಿವಕುಮಾರ್​ ಹೇಳಿದ್ದಾರೆ.

ನಾನು ಮಹಾರಾಜರ ಮಗಳ ಬಳಿ 4ಎಕರೆ ಜಾಗ ತಗೊಂಡಿದ್ದೆ. ಮಾಜಿ ಶಾಸಕ ವಾಸು ಆಗ ಮೈಸೂರು ಮೇಯರ್ ಆಗಿದ್ದ. ಆ ವೇಳೆ ಸ್ಟೇಡಿಯಂ ನಿರ್ಮಾಣಕ್ಕೆ 2 ಎಕರೆ ಜಾಗ ಕೊಟ್ಟಿದ್ದೆ, ಅದಕ್ಕೆ ವಾಸು ಸಾಕ್ಷಿ ಎಂದು ಮೈಸೂರಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದ ಡಿಕೆಶಿ ತಿಳಿಸಿದ್ದಾರೆ.

ಈ ವೇಳೆ ಡಿ.ಕೆ. ಶಿವಕುಮಾರ್​ರನ್ನು ಮುಖಂಡರು ಹಾಡಿಹೊಗಳಿದರು. ನೀವು ಮೈಸೂರಿನ ಅಳಿಯ, ನೀವು ಮೈಸೂರಿಗಾಗಿ ಕೆಲಸ ಮಾಡಿದ್ದೀರಿ ಎಂದು ಹೊಗಳಿದರು.

Published On - 11:54 am, Fri, 8 November 19

Click on your DTH Provider to Add TV9 Kannada