ಲಾಕ್​ಡೌನ್ ಸಂಕಷ್ಟ; ಕೊ​ಪ್ಪಳದ 100 ಕುಟುಂಬಗಳ ನೆರವಿಗೆ ನಿಂತ ಇಂಗ್ಲೆಂಡ್ ದೇಶದ ಸಹೋದರರು

|

Updated on: May 10, 2021 | 2:35 PM

ಇಂಗ್ಲೆಂಡಿನ ರೋಸ್ ಮತ್ತು ಲೀಯಂ ಹಾಗೂ ಗೆಳೆಯರು ಸೇರಿ ಹನುಮನಹಳ್ಳಿಯಲ್ಲಿರುವ ಹಂಪಿ-ಆನೆಗೊಂದಿಯ ಪ್ರವಾಸಿ ಗೈಡ್ ವಿರೂಪಾಕ್ಷ ನಾಯಕ ಇವರ ಮೂಲಕ ಸಂಕಷ್ಟದಲ್ಲಿರುವ 100 ಕುಟುಂಬಗಳಿಗೆ ಅಕ್ಕಿ, ಬೇಳೆ, ಮಾಸ್ಕ್, ಸ್ಯಾನಿಟೈಜರ್ ಸೇರಿ ಒಂದು ತಿಂಗಳಿಗಾಗುವಷ್ಟು ಆಹಾರದ ಕಿಟ್ ವಿತರಿಸಿದ್ದಾರೆ.

ಲಾಕ್​ಡೌನ್ ಸಂಕಷ್ಟ; ಕೊ​ಪ್ಪಳದ 100 ಕುಟುಂಬಗಳ ನೆರವಿಗೆ ನಿಂತ ಇಂಗ್ಲೆಂಡ್ ದೇಶದ ಸಹೋದರರು
ಕೊಪ್ಪಳದ 100 ಕುಟುಂಬಗಳ ನೆರವಿಗೆ ನಿಂತ ಇಂಗ್ಲೆಂಡ್ ದೇಶದ ಸಹೋದರರು
Follow us on

ಕೊಪ್ಪಳ: ಕೊರೊನಾ ಎರಡನೇ ಅಲೆ ದೇಶದಾದ್ಯಂತ ಹಬ್ಬಿದ್ದು, ದಿನದಿಂದ ದಿನಕ್ಕೆ ಸಾವು- ನೋವಿನ ಸಂಖ್ಯೆ ಎರುತ್ತಲೇ ಇದೆ. ಹೀಗಾಗಿ ರಾಜ್ಯ ಸರ್ಕಾರ ಮತ್ತೆ ಲಾಕ್​ಡೌನ್ ಘೋಷಣೆ ಮಾಡಿದ್ದು, ಜನರು ಸಂಕಷ್ಟ ಎದುರಿಸುವಂತಾಗಿದ್ದು, ನಿತ್ಯದ ಊಟಕ್ಕೂ ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ದೂರದ ಇಂಗ್ಲೆಂಡ್ ದೇಶದ ಸಹೋದರರಿಬ್ಬರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಹಳ್ಳಿ ಹಾಗೂ ಮಹೆಬೂಬನಗರದ ಜನತೆಗೆ ಸಹಾಯದ ಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ.

ಪ್ರತಿ ವರ್ಷ ಹಂಪಿ, ಕಿಷ್ಕಿಂದಾ, ಆನೆಗೊಂದಿ ಪ್ರವಾಸಕ್ಕೆ ಆಗಮಿಸುತ್ತಿದ್ದ ಇಂಗ್ಲೆಂಡಿನ ರೋಸ್ ಮತ್ತು ಲೀಯಂ ಹಾಗೂ ಗೆಳೆಯರು ಸೇರಿ ಹನುಮನಹಳ್ಳಿಯಲ್ಲಿರುವ ಹಂಪಿ-ಆನೆಗೊಂದಿಯ ಪ್ರವಾಸಿ ಗೈಡ್ ವಿರೂಪಾಕ್ಷ ನಾಯಕ ಇವರ ಮೂಲಕ ಸಂಕಷ್ಟದಲ್ಲಿರುವ 100 ಕುಟುಂಬಗಳಿಗೆ ಅಕ್ಕಿ, ಬೇಳೆ, ಮಾಸ್ಕ್, ಸ್ಯಾನಿಟೈಜರ್ ಸೇರಿ ಒಂದು ತಿಂಗಳಿಗಾಗುವಷ್ಟು ಆಹಾರದ ಕಿಟ್ ವಿತರಿಸಿದ್ದಾರೆ.

ಇನ್ನು ಪ್ರತಿ ವರ್ಷ ಹಂಪಿ ಆನೆಗೊಂದಿ ಪ್ರದೇಶಕ್ಕೆ ಪ್ರವಾಸಕ್ಕೆ ಬರುತ್ತಿದ್ದ ಇಂಗ್ಲೆಂಡಿನ ರೋಸ್ ಹಾಗೂ ಲೀಯಂ ಗೆಳೆಯರು ವಿರೂಪಾಪೂರಗಡ್ಡಿ ರೆಸಾರ್ಟ್​ನಲ್ಲಿ ಉಳಿದುಕೊಳ್ಳುತ್ತಿದ್ದರು. ಇತ್ತೀಚಿಗೆ ಮೊಬೈಲ್​ನಲ್ಲಿ ಕರೆ ಮಾಡಿ ಕ್ಷೇಮ ವಿಚಾರಿಸುವ ಸಂದರ್ಭದಲ್ಲಿ ಕೊವಿಡ್ ಕರ್ಪ್ಯೂ ಬಗ್ಗೆ ತಿಳಿಸಿದಾಗ ಕೂಡಲೇ ಸ್ಪಂದಿಸಿ ಹನುಮನಹಳ್ಳಿ ಹಾಗೂ ಮಹೆಬೂಬನಗರದ 100 ಕುಟುಂಬಗಳಿಗೆ ಆಹಾರದ ಕಿಟ್ ಕೊಡುವಂತೆ ಸೂಚನೆ‌ ನೀಡಿದ್ದು, ಈಗಾಗಲೇ ಅರ್ಧ ಕುಟುಂಬಗಳಿಗೆ ಆಹಾರದ ಕಿಟ್ ತಲುಪಿಸಲಾಗಿದೆ. ಶೀಘ್ರವೆ ಉಳಿದ ಕುಟುಂಬಗಳಿಗೆ ವಿತರಿಸಲಾಗುತ್ತದೆ ಎಂದು ಪ್ರವಾಸಿ ಮಾರ್ಗದರ್ಶಿ ವಿರೂಪಾಕ್ಷ ನಾಯಕ ತಿಳಿಸಿದ್ದಾರೆ.

ಇದನ್ನೂ ಓದಿ:

ಲಾಕ್​ಡೌನ್ ಯಶಸ್ವಿಗೊಳಿಸಲು, ಕೊರೊನಾ ಸೋಂಕಿತರಿಗೆ ಸಹಾಯ ಮಾಡಲು ನಾವು ಸಿದ್ಧ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೇಳಿಕೆ

ಜೂನಿಯರ್ ಆರ್ಟಿಸ್ಟ್‌ಗಳಿಗೆ ಪಡಿತರ ಕಿಟ್ ವಿತರಣೆ; ಮಾನವೀಯತೆ ಮೆರೆದ ಹಿರಿಯ ನಟಿ ಲೀಲಾವತಿ ಹಾಗೂ ನಟ ವಿನೋದ್ ರಾಜ್