ಪಾಲಕರನ್ನ ಸೇರಲು ರಾಜಸ್ಥಾನಕ್ಕೆ ಹೊರಟಿದ್ದ ಮಕ್ಕಳು ಅರ್ಧ ದಾರಿಯಲ್ಲೇ ಲಾಕ್! ಮುಂದೇನಾಯ್ತು?

|

Updated on: May 08, 2020 | 2:02 PM

ಧಾರವಾಡ: ಪಾಲಕರನ್ನು ಸೇರಲು ಧಾರವಾಡದಿಂದ ರಾಜಸ್ಥಾನಕ್ಕೆ ಹೊರಟಿದ್ದ ಮಕ್ಕಳು ಅರ್ಧ ದಾರಿಯಲ್ಲೇ ಲಾಕ್ ಆಗಿದ್ದಾರೆ. ಧಾರವಾಡ ಜಿಲ್ಲಾಡಳಿತದ ಎನ್‌ಒಸಿ ಇಲ್ಲ ಎಂಬ ಕಾರಣಕ್ಕೆ ಗುಜರಾತ್​ನ ವಲ್ಸಾಡ ಬಳಿಯ ನಂದಿ ಗ್ರಾಮದ ಚೆಕ್ ಪೋಸ್ಟ್​ನಲ್ಲಿ‌ ಮಕ್ಕಳ ಕಾರಿಗೆ ತಡೆ ನೀಡಲಾಗಿದೆ. ಹಾಗಾಗಿ ಸುಮಾರು 8 ಗಂಟೆಗಳಿಂದ ವಾಹನದಲ್ಲೇ ಮಕ್ಕಳು ಕಾಯುತ್ತ ಕುಳಿತಿರುವಂತಾಗಿದೆ. ಲಾಕ್‌ಡೌನ್‌ಗೂ ಮೊದಲು ಮಕ್ಕಳನ್ನು ಮನೆಯ ಮಾಲೀಕರ ಬಳಿ ಬಿಟ್ಟು ಪಾಲಕರು ರಾಜಸ್ಥಾನಕ್ಕೆ ಹೊರಟಿದ್ದರು. ನಂತರ ಲಾಕ್​ಡೌನ್ ಆದ ಕಾರಣ ಪಾಲಕರು ರಾಜಸ್ಥಾನದಲ್ಲೇ ಉಳಿಯುವಂತಾಯಿತು. ಮಕ್ಕಳೂ ಸಹ […]

ಪಾಲಕರನ್ನ ಸೇರಲು ರಾಜಸ್ಥಾನಕ್ಕೆ ಹೊರಟಿದ್ದ ಮಕ್ಕಳು ಅರ್ಧ ದಾರಿಯಲ್ಲೇ ಲಾಕ್! ಮುಂದೇನಾಯ್ತು?
Follow us on

ಧಾರವಾಡ: ಪಾಲಕರನ್ನು ಸೇರಲು ಧಾರವಾಡದಿಂದ ರಾಜಸ್ಥಾನಕ್ಕೆ ಹೊರಟಿದ್ದ ಮಕ್ಕಳು ಅರ್ಧ ದಾರಿಯಲ್ಲೇ ಲಾಕ್ ಆಗಿದ್ದಾರೆ. ಧಾರವಾಡ ಜಿಲ್ಲಾಡಳಿತದ ಎನ್‌ಒಸಿ ಇಲ್ಲ ಎಂಬ ಕಾರಣಕ್ಕೆ ಗುಜರಾತ್​ನ ವಲ್ಸಾಡ ಬಳಿಯ ನಂದಿ ಗ್ರಾಮದ ಚೆಕ್ ಪೋಸ್ಟ್​ನಲ್ಲಿ‌ ಮಕ್ಕಳ ಕಾರಿಗೆ ತಡೆ ನೀಡಲಾಗಿದೆ. ಹಾಗಾಗಿ ಸುಮಾರು 8 ಗಂಟೆಗಳಿಂದ ವಾಹನದಲ್ಲೇ ಮಕ್ಕಳು ಕಾಯುತ್ತ ಕುಳಿತಿರುವಂತಾಗಿದೆ.

ಲಾಕ್‌ಡೌನ್‌ಗೂ ಮೊದಲು ಮಕ್ಕಳನ್ನು ಮನೆಯ ಮಾಲೀಕರ ಬಳಿ ಬಿಟ್ಟು ಪಾಲಕರು ರಾಜಸ್ಥಾನಕ್ಕೆ ಹೊರಟಿದ್ದರು. ನಂತರ ಲಾಕ್​ಡೌನ್ ಆದ ಕಾರಣ ಪಾಲಕರು ರಾಜಸ್ಥಾನದಲ್ಲೇ ಉಳಿಯುವಂತಾಯಿತು. ಮಕ್ಕಳೂ ಸಹ ರಾಜಸ್ಥಾನಕ್ಕೆ ಹೋಗಲಾಗದ ಸ್ಥಿತಿ ನಿರ್ಮಾಣವಾಯಿತು. ಈ ವಿಷಯ ತಿಳಿದು ಧಾರವಾಡ ಡಿಸಿ ದೀಪಾ ಚೋಳನ್ ಮಕ್ಕಳಿಗೆ ನೆರವು ನೀಡಿದ್ದರು. ನಿನ್ನೆ ಬೆಳಗ್ಗೆ ಮಕ್ಕಳನ್ನು ಜಿಲ್ಲಾಧಿಕಾರಿಯೇ ಖುದ್ದು ಬೀಳ್ಕೊಟ್ಟಿದ್ದರು.

ತಾಲಸಾರಾಮ್ ದಂಪತಿಯ ರೋಮು ಕುಮಾರಿ, ಪೋಸು ಕುಮಾರಿ ಎಂಬ ಮಕ್ಕಳು ಹುಬ್ಬಳ್ಳಿಯ ಮರಾಠಾ ಗಲ್ಲಿಯಲ್ಲಿ ವಾಸವಿದ್ದರು. ಮಕ್ಕಳನ್ನು ಬಾಡಿಗೆ ಮನೆಯ ಮಾಲಿಕರೇ ಬಿಟ್ಟು ಬರಲು ರಾಜಸ್ಥಾನದ ಸಿರೋಹಿ ಜಿಲ್ಲೆಯ ಮೆಮಂಡ್ವಾರ ಗ್ರಾಮಕ್ಕೆ ಹೊರಟಿದ್ದರು. ಆದ್ರೆ, ಎನ್‌ಒಸಿ ಇಲ್ಲ ಎಂಬ ಕಾರಣಕ್ಕೆ ಅರ್ಧ ದಾರಿಯಲ್ಲೇ ತಡೆ ನೀಡಲಾಗಿದೆ. ತವರು ಸೇರಲಾಗದೆ, ವಾಪಸ್ ಬರಲಾಗದೇ ಅರ್ಧ ದಾರಿಯಲ್ಲೇ ಮಕ್ಕಳು ಲಾಕ್ ಆಗಿದ್ದಾರೆ.

Published On - 1:48 pm, Fri, 8 May 20