ರಾಜ್ಯದಲ್ಲಿ ಒಂದೇ ದಿನ 45 ಮಂದಿಗೆ ಕೊರೊನಾ ಅಟ್ಯಾಕ್, ಅಪ್ಡೇಟ್ಸ್ ಇಲ್ಲಿದೆ
ಬೆಂಗಳೂರು: ರಾಜ್ಯದಲ್ಲಿ ಹೆಜ್ಜೆ ಹೆಜ್ಜೆಗೂ ಕೊರೊನಾ ಕ್ರೂರಿಯದ್ದೇ ಆತಂಕವಾಗಿದೆ. ರಾಜ್ಯದಲ್ಲಿ ಕೊವಿಡ್ ಕಾಲಿಟ್ಟು ಎರಡು ತಿಂಗಳಾದ್ರೂ, ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಕ್ರೂರಿ ಕೊರೊನಾ ದಿನದಿಂದ ದಿನಕ್ಕೆ ಅಟ್ಟಹಾಸ ಮೆರೆಯುತ್ತಲೇ ಇದೆ. ಇಂದು ರಾಜ್ಯದಲ್ಲಿ ಒಂದೇ ದಿನ 45 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 750ಕ್ಕೆ ಏರಿಕೆಯಾಗಿದೆ. ಬೆಳಗಾವಿ 11, ದಾವಣಗೆರೆ 14, ಬೆಂಗಳೂರು 7, ಉತ್ತರ ಕನ್ನಡ 12, ಬಳ್ಳಾರಿಯಲ್ಲಿ ಒಬ್ಬರಿಗೆ ಕೊರೊನಾ ಅಟ್ಯಾಕ್ ಆಗಿದೆ. 750 ಕೊರೊನಾ ಸೋಂಕಿತರ ಪೈಕಿ […]
ಬೆಂಗಳೂರು: ರಾಜ್ಯದಲ್ಲಿ ಹೆಜ್ಜೆ ಹೆಜ್ಜೆಗೂ ಕೊರೊನಾ ಕ್ರೂರಿಯದ್ದೇ ಆತಂಕವಾಗಿದೆ. ರಾಜ್ಯದಲ್ಲಿ ಕೊವಿಡ್ ಕಾಲಿಟ್ಟು ಎರಡು ತಿಂಗಳಾದ್ರೂ, ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಕ್ರೂರಿ ಕೊರೊನಾ ದಿನದಿಂದ ದಿನಕ್ಕೆ ಅಟ್ಟಹಾಸ ಮೆರೆಯುತ್ತಲೇ ಇದೆ.
ಇಂದು ರಾಜ್ಯದಲ್ಲಿ ಒಂದೇ ದಿನ 45 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 750ಕ್ಕೆ ಏರಿಕೆಯಾಗಿದೆ. ಬೆಳಗಾವಿ 11, ದಾವಣಗೆರೆ 14, ಬೆಂಗಳೂರು 7, ಉತ್ತರ ಕನ್ನಡ 12, ಬಳ್ಳಾರಿಯಲ್ಲಿ ಒಬ್ಬರಿಗೆ ಕೊರೊನಾ ಅಟ್ಯಾಕ್ ಆಗಿದೆ.
750 ಕೊರೊನಾ ಸೋಂಕಿತರ ಪೈಕಿ ಈವರೆಗೆ 371 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾದಿಂದ ಇದುವರೆಗೆ ರಾಜ್ಯದಲ್ಲಿ 30 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
Published On - 12:38 pm, Fri, 8 May 20