ನೂತನ ಗೃಹ ಸಚಿವರ ಕೈಯಲ್ಲಿರುವ ಗೃಹ ಸಚಿವಾಲಯ ಪೊಲೀಸ್ ಇಲಾಖೆಯಲ್ಲೊಂದು ಮಹತ್ವದ ಬದಲಾವಣೆ ಮಾಡಿದೆ. ಹಲವು ವರ್ಷಗಳ ಬೇಡಿಕೆಯೊಂದನ್ನು ಈಡೇರಿಸಿದೆ. ಅದರ ಅನ್ವಯ ಇನ್ನುಮುಂದೆ ಕ್ರೀಡಾ ಕೋಟಾದಲ್ಲೂ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ನಡೆಯಲಿದೆ. ಈ ಬಗ್ಗೆ ಬೆಂಗಳೂರಿನ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಮಾಹಿತಿ ನೀಡಿದ್ದಾರೆ.
ಸ್ಪೋರ್ಟ್ಸ್ ಕೋಟಾದಲ್ಲಿ ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದಲೂ ಇತ್ತು. ಈಗ ಶೇ.2ರಷ್ಟು ನೇಮಕಾತಿಯನ್ನು ಸ್ಪೋರ್ಟ್ಸ್ ಕೋಟಾದಡಿ ಮಾಡುವಂತೆ ಕಾನೂನು ತರಲಾಗಿದೆ. ಇದು ಗೃಹ ಸಚಿವಾಲಯದ ಮಹತ್ವದ ನಿರ್ಧಾರವಾಗಿದೆ. ಹೊಸ ಕಾನೂನು ಸಂಬಂಧ ಇದೇ ವಾರದಲ್ಲೇ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇಲಾಖೆಗೆ ಉನ್ನತಮಟ್ಟದ ವಿದ್ಯಾವಂತರು ಆಗಮಿಸುತ್ತಿದ್ದಾರೆ. ಕೆಎಸ್ಆರ್ಪಿ, ಸಿಎಆರ್ ಮತ್ತು ಡಿಎಆರ್ ಸಿಬ್ಬಂದಿಗೂ ಅನ್ವಯ ಆಗಲಿದ್ದು, ಕನಿಷ್ಠ 5 ವರ್ಷ ಸೇವೆ ಸಲ್ಲಿಸುವವರಿಗೆ ಅವಕಾಶ ಸಿಗಲಿದೆ. ಶೇ.10 ಮೀಸಲಾತಿಯಲ್ಲಿ, ಶೇ 2ರಷ್ಟು ಸ್ಪೋರ್ಟ್ಸ್ ಕೋಟಾ ಆಗಿರಲಿದೆ.
ಇದನ್ನೂ ಓದಿ: ಪೊಲೀಸರ ಕೈ ಬಲಪಡಿಸುವ ಬದ್ಧತೆ ಸರ್ಕಾರಕ್ಕಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ
Published On - 9:59 am, Sat, 14 August 21