“ಗೋಹತ್ಯೆ ಆರೋಪಿಗಳಿಗೆ 2-7 ವರ್ಷದವರೆಗೆ ಜೈಲು ಶಿಕ್ಷೆ: ಕಾಯ್ದೆ ಜಾರಿಯಿಂದ ಗೋವುಗಳ ಹತ್ಯೆ ಸಂಖ್ಯೆ ಇಳಿಕೆ”

| Updated By: ವಿವೇಕ ಬಿರಾದಾರ

Updated on: Dec 03, 2022 | 3:28 PM

ಗೋಹತ್ಯೆ ಆರೋಪಿಗಳಿಗೆ 2 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ, ಜೊತೆಗೆ 50 ಸಾವಿರ ರೂ.ಯಿಂದ 10 ಲಕ್ಷದವರೆಗೆ ದಂಡ ವಿಧಿಸಲಾಗುತ್ತೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.

ಗೋಹತ್ಯೆ ಆರೋಪಿಗಳಿಗೆ 2-7 ವರ್ಷದವರೆಗೆ ಜೈಲು ಶಿಕ್ಷೆ: ಕಾಯ್ದೆ ಜಾರಿಯಿಂದ ಗೋವುಗಳ ಹತ್ಯೆ ಸಂಖ್ಯೆ ಇಳಿಕೆ
ಗೋ ಹತ್ಯೆ ಆರೋಪಿಗಳಿಗೆ 2 ರಿಂದ 7 ವರ್ಷ ಶಿಕ್ಷೆ
Follow us on

ಬೆಂಗಳೂರು: ಗೋಹತ್ಯೆ ಆರೋಪಿಗಳಿಗೆ 2 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ, ಜೊತೆಗೆ 50 ಸಾವಿರ ರೂ.ಯಿಂದ 10 ಲಕ್ಷದವರೆಗೆ ದಂಡ ವಿಧಿಸಲಾಗುತ್ತೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು ಕಾಯ್ದೆ ಜಾರಿಯಿಂದ ಗೋವುಗಳ ಹತ್ಯೆ ಸಂಖ್ಯೆ ಇಳಿಕೆಯಾಗಿದೆ. ಎಸ್​.ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ, 1964ರಿಂದಲೇ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಲಾಗಿತ್ತು. ಆಗ ಗೋಹತ್ಯೆಗೆ 1 ಸಾವಿರ ದಂಡ, 6 ತಿಂಗಳು ಜೈಲು ಶಿಕ್ಷೆ ಇತ್ತು. ಈಗ ಮತ್ತಷ್ಟು ಅಂಶಗಳನ್ನು ಸೇರಿಸಿ ಕಾಯ್ದೆ ತಿದ್ದುಪಡಿ ಮಾಡಿದ್ದೇವೆ ಎಂದು ತಿಳಿಸಿದರು.

ಮೂರು ವರ್ಷಗಳ ಅಂತರದಲ್ಲಿ ಹಸುಗಳ ಉಳಿಸಬೇಕು ಎಂದು ಗೋಹತ್ಯೆ ಕಾನೂನನ್ನು ಬಿಗಿ ಮಾಡಿದ್ದೇವೆ. ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ಗೋಹತ್ಯೆ ಕಾನೂನನ್ನು ಬಿಗಿ ಮಾಡಿದ್ದೇವೆ. ಗೋಹತ್ಯೆ ಮಾಡಿದರೇ 2 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ ಮಾಡಿದ್ವಿ, 50 ಸಾವಿರದಿಂದ 10 ಲಕ್ಷದವರೆಗಿನ ದಂಡ ವಿಧಿಸುವ ಕೆಲಸ ಮಾಡಿದ್ದೇವೆ ಎಂದರು.

ಇದನ್ನೂ ಓದಿ: ಪೊಲೀಸರ ಸಮ್ಮುಖದಲ್ಲೇ ಕಾಂಗ್ರೆಸ್ ಕಾರ್ಯಕರ್ತರನ್ನು ಕಲ್ಲಿಂದ ಹೊಡೆಯಲು ಮುಂದಾದ ಸಿಟಿ ರವಿ ಬೆಂಬಲಿಗ!

ಪಶುಸಂಗೋಪನೆ ಇಲಾಖೆ ಮತ್ತು ಸರ್ಕಾರದ ವಿರುದ್ದ ಸುಳ್ಳು ಆರೋಪ‌

ಕಾಂಗ್ರೆಸ್‌ನವರು ಯಾವುದೇ ಸಾಕ್ಷಿ, ದಾಖಲೆ ಇಲ್ಲದೆ ಪಶುಸಂಗೋಪನೆ ಇಲಾಖೆ ಮತ್ತು ಸರ್ಕಾರದ ವಿರುದ್ದ ಸುಳ್ಳು ಆರೋಪ‌ ಮಾಡಿದ್ದಾರೆ. ನಾನು ಸಚಿವನಾದ ಬಳಿಕ ಗೋರಕ್ಷಕನಾಗಿ, ಗೋ ಸೇವೆ ಮಾಡುತ್ತಿದ್ದೇನೆ. ಕಾಯ್ದೆಯಿಂದ ಗೋಹತ್ಯೆಯ ಸಂಖ್ಯೆ ಕಡಿಮೆಯಾಗಿದೆ. ಗೋಶಾಲೆಗಳ ನಿರ್ವಹಣೆ ಮಾಡುತ್ತಿದ್ದೇವೆ. ಖಾಸಗಿ ಗೋಶಾಲೆಗಳಿಗೂ ಉತ್ತೇಜನ ನೀಡುತ್ತಿದ್ದೇನೆ. ದೇಶದಲ್ಲಿ ಮೊದಲ ಬಾರಿಗೆ ಪಶುಸಂಜೀವಿನಿ ಆಂಬುಲೆನ್ಸ್ ಶುರು ಮಾಡಿದ್ದೇವೆ ಎಂದು ತಿಳಿಸಿದರು.

ತಾಕತ್ ಇದ್ದರೇ ನನ್ನ ಎದುರುಗಡೆ ಹಸು ಕಟ್ ಮಾಡಿ ತಿನ್ನಿ, ನಿಮ್ಮನ್ನು ಒಳಗಡೆ ಹಾಕಸ್ತೀನಿ

ನಮ್ಮ ಸರ್ಕಾರ ಬಂದರೇ ಗೋ ಹತ್ಯೆ ನಿಷೇಧ ಕಾಯ್ದೆ ತೆಗೆದು ಹಾಕುತ್ತೇವೆ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ನೀನು ಯಾರು ಗೋ ಹತ್ಯೆ ನಿಷೇಧ ಕಾಯಿದೆ ತಗೀತೀನಿ ಅನ್ನೋಕೆ? ನನ್ನ ಮುಂದೆ ಭೀಫ್ ತಿಂತೀನಿ, ಹಸು ತಿಂತೀನಿ ಅಂತೀರಲ್ಲ, ತಾಕತ್ ಇದ್ದರೇ ನನ್ನ ಎದುರುಗಡೆ ಹಸು ಕಟ್ ಮಾಡಿ ತಿನ್ನಿ, ನಿಮ್ಮನ್ನು ಒಳಗಡೆ ಹಾಕಸ್ತೀನಿ ಎಂದು ಎಚ್ಚರಿಕೆ ನೀಡಿದರು.

ಗೋಹತ್ಯೆ ನಿಷೇಧ ಕಾಯ್ದೆಯಿಂದ ಯಾವುದೇ ನಷ್ಟವಾಗಿಲ್ಲ. ಕಾಂಗ್ರೆಸ್ ಕೇವಲ ಸುಳ್ಳು ಆರೋಪ ಮಾಡುತ್ತಿದೆ. ಹಣಕಾಸು ಇಲಾಖೆ ಮತ್ತು ಸರ್ಕಾರ ಸಾಧಕ ಬಾಧಕ ಚರ್ಚೆ ನಡೆಸಿತ್ತು. ಮುಂದೆ ಎಲ್ಲ ಕಡೆ ನಮ್ಮ ಸರ್ಕಾರ ಬಂದೆ ಬರುತ್ತದೆ, ಇನ್ನು ಗಟ್ಟಿಯಾಗಿ ಅನುಷ್ಠಾನ ಮಾಡುತ್ತೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:18 pm, Sat, 3 December 22