Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತ್ಯೇಕ ಮುಸಲ್ಮಾನ್ ಕಾಲೇಜು ಪ್ರಸ್ತಾವನೆ ಇಲ್ಲವೆಂದ ಸರ್ಕಾರ: ಸರ್ಕಾರ ಒಪ್ಪಿಗೆ ಆದೇಶ ಪ್ರತಿ ಟ್ವೀಟ್​ ಮಾಡಿ ಪ್ರಶ್ನಿಸಿದ ಹಿಂದೂ ಮುಖಂಡ

ಕಳೆದ ಜುಲೈ ತಿಂಗಳಿನಲ್ಲಿ 10 ಪ್ರತ್ಯೇಕ ಮುಸಲ್ಮಾನ್ ಕಾಲೇಜು ಸ್ಥಾಪನೆ ಮಾಡಲು ಸರ್ಕಾರ ಆದೇಶ ನೀಡಿದೆ ಎಂದು ಹಿಂದೂ ಪರ ಹೋರಾಟಗಾರ ಮೋಹನ ಗೌಡ ಟ್ವೀಟ್​ ಮಾಡಿದ್ದಾರೆ.

ಪ್ರತ್ಯೇಕ ಮುಸಲ್ಮಾನ್ ಕಾಲೇಜು ಪ್ರಸ್ತಾವನೆ ಇಲ್ಲವೆಂದ ಸರ್ಕಾರ: ಸರ್ಕಾರ ಒಪ್ಪಿಗೆ ಆದೇಶ ಪ್ರತಿ ಟ್ವೀಟ್​ ಮಾಡಿ ಪ್ರಶ್ನಿಸಿದ ಹಿಂದೂ ಮುಖಂಡ
ಕರ್ನಾಟಕ
Follow us
TV9 Web
| Updated By: ವಿವೇಕ ಬಿರಾದಾರ

Updated on: Dec 03, 2022 | 4:33 PM

ಬೆಂಗಳೂರು: ರಾಜ್ಯದ 10 ಜಿಲ್ಲೆಗಳಲ್ಲಿ ಸರ್ಕಾರ ಪ್ರತ್ಯೇಕ ಮುಸಲ್ಮಾನ್  (Muslim Students) ಕಾಲೇಜು (Separate College)  ನಿರ್ಮಾಣ ಮಾಡಲು ಮುಂದಾಗಿದೆ ಎಂದು ಕೆಲ ದಿನಗಳ ಹಿಂದೆ ಈ ಸುದ್ದಿ ಭಾರೀ ಸದ್ದು ಮಾಡಿತ್ತು. ಈ ವಿಚಾರವಾಗಿ ಸಾಕಷ್ಟು ಪರ-ವಿರೋಧದ ಚರ್ಚೆಗಳು ಸಹ ನಡೆದಿವೆ. ಅಲ್ಲದೇ ಪ್ರಮೋದ್ ಮುತಾಲಿಕ್ ಸೇರಿದಂತೆ ಹಿಂದೂ ಪರ ಸಂಘಟನೆಗಳು ಸರ್ಕಾರದ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿವೆ. ಇದಾದ ಬೆನ್ನಲ್ಲೇ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಈ ಬಗ್ಗೆ ಪ್ರತಿಕ್ರಿಯಿಸಿ ಇಂತಹ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ನಂತರ ಸಚಿವೆ ಶಶಿಕಲ್ಲಾ ಜೊಲ್ಲೆ ಟ್ವೀಟ್​ ಮಾಡಿ “ಇದು ಸತ್ಯಕ್ಕೆ ದೂರವಾದ ಮಾತು” ಎಂದು ಟ್ವೀಟ್​ ಮಾಡಿದ್ದರು. ಆದ್ರೆ, ಇದೀಗ ಹಿಂದೂ ಮುಖಂಡರೊಬ್ಬರು, ಮುಸ್ಲಿಂ ಕಾಲೇಜು ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿರುವ ಆದೇಶದ ಪ್ರತಿಯನ್ನು ಬಿಡುಗಡೆ ಮಾಡಿ ಸಿಎಂ ಬೊಮ್ಮಾಯಿಗೆ ಪ್ರಶ್ನಿಸಿದ್ದಾರೆ.

ಸದ್ಯ ಈ ವಿಚಾರವಾಗಿ ಹಿಂದೂ ಪರ ಹೋರಾಟಗಾರ ಮೋಹನ ಗೌಡ ಸರ್ಕಾರದ ಆದೇಶ ಪ್ರತಿ ಟ್ವೀಟ್​ ಮಾಡಿ ಸರ್ಕಾರ “ಕಳೆದ ಜುಲೈ ತಿಂಗಳಿನಲ್ಲಿ 10 ಪ್ರತ್ಯೇಕ ಮುಸಲ್ಮಾನ್ ಕಾಲೇಜು ಸ್ಥಾಪನೆ ಮಾಡಲು ಆದೇಶ ನೀಡಿ, ಅದಕ್ಕೆ ಹಣ ಸಹ ಮಂಜುರಾತಿ ಮಾಡಲು ಆದೇಶ ನೀಡಿ, ಈಗ ಸರಕಾರದ ಮುಂದೆ ಯಾವುದೇ ಮುಸಲ್ಮಾನ ಕಾಲೇಜು ಸ್ಥಾಪನೆಯ ಪ್ರಸ್ತಾಪ ಇಲ್ಲ ಎಂದು ಹೇಳುವುದು ಎಷ್ಟು ಹಾಸ್ಯಾಸ್ಪದ?”  ಎಂದು ಪ್ರಶ್ನಿಸಿದ್ದಾರೆ.

ಇನ್ನೂ ಮೋಹನ ಗೌಡ ಅವರು ಮುಸ್ಲಿಂ ಕಾಲೇಜು ನಿರ್ಮಾಣ ಮಾಡುವ ವಿಚಾರವಾಗಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರ್ಕಾರದ ಉಪಕಾರ್ಯದರ್ಶಿ ಆದೇಶ ಪ್ರತಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ವಕ್ಫ್​ ಮಂಡಳಿಯಿಂದ ಮುಸ್ಲಿಂ ಹೆಣ್ಣುಮಕ್ಕಳಿಗಾಗಿ 10 ಹೊಸ ಕಾಲೇಜು: ಸರ್ಕಾರಿ ಕಾಲೇಜುಗಳ ಪಠ್ಯಕ್ರಮ

ಸಪ್ಟೆಂಬರ್​ನಲ್ಲೇ ಅಲ್ಪಸಂಖ್ಯಾತರ ಪದವಿ ಪೂರ್ವ ಕಾಲೇಜು ಹಾಗೂ ವಸತಿ ಕಾಲೇಜು ನಿರ್ಮಾಣ ಸರ್ಕಾರ ಅಸ್ತು ಎಂದಿದೆ. ಯಾವ ಯೋಜನೆಯಿಂದ ಅನುದಾನ‌ ಪಡೆಯಬೇಕೆಂದು ಉಲ್ಲೇಖೀಸಲಾಗಿದೆ. ರಾಜ್ಯದ ಹತ್ತು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಗೆ ಸಿಬಿಎಸ್​ಸಿ‌ ಕಾಲೇಜು ನಿರ್ಮಾಣಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಒಪ್ಪಿಗೆ ನೀಡಿದ್ದಾರೆ. ಕಳೆದ ಜುಲೈ ತಿಂಗಳಲ್ಲಿ 10 ಪ್ರತ್ಯೇಕ ಮುಸಲ್ಮಾನ್ ಕಾಲೇಜು ಸ್ಥಾಪನೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಸರ್ಕಾರದ ಆದೇಶಕ್ಕೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರ್ಕಾರದ ಉಪಕಾರ್ಯದರ್ಶಿ ಸಹಿ ಮಾಡಿದ್ದಾರೆ. ಈಗ ಸರ್ಕಾರದ ಮುಂದೆ ಯಾವುದೇ ಮುಸಲ್ಮಾನ ಕಾಲೇಜು ಸ್ಥಾಪನೆಯ ಪ್ರಸ್ತಾಪ ಇಲ್ಲ ಎಂದು ಹೇಳುವುದು ಎಷ್ಟು ಹಾಸ್ಯಾಸ್ಪದ.? ಎಂದು ಪ್ರಶ್ನಿಸಿದ್ದಾರೆ.

ಹಿಂದೂಗಳು ವಿರೋಧ ಬೆನ್ನಲ್ಲೇ ಸಿಎಂ ಬೊಮ್ಮಾಯಿ ಇದನ್ನು ಮುಚ್ಚಿಹಾಕಲು ಸುಳ್ಳು ಹೇಳಿದ್ರಾ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ