
ಕಡಲ್ಕೊರೆತ ತಡೆಯಲು ಉಡುಪಿ, ದಕ್ಷಿಣ ಕನ್ನಡ ಮತ್ತು ಕೇರಳದ ಕಾಸರಗೋಡು, ಕಣ್ಣೂರು ಜಿಲ್ಲೆಗಳ ಸಮುದ್ರ ತೀರದಲ್ಲಿ ಭಾನುವಾರ ಏಕಕಾಲಕ್ಕೆ 20 ಸಾವಿರ ಮಂದಿ ಅರಬ್ಬೀ ಸಮುದ್ರದ 108 ಕಡೆ ಏಕಕಾಲಕ್ಕೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರು. ಸಂಜೆ 4 ರಿಂದ 6ರವರೆಗೂ ವಿಷ್ಣು ಸಹಸ್ರನಾಮ ಪಾರಾಯಣ ಮಾಡಲಾಯಿತು.

ವಿಷ್ಣು ಸಹಸ್ರನಾಮ ಪಾರಾಯಣಕ್ಕೂ ಮುನ್ನ ಸಮುದ್ರಕ್ಕೆ ಕ್ಷೀರ ಅರ್ಪಣೆ ಮಾಡಲಾಯಿತು. ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಸಮಿತಿ ನೇತೃತ್ವ ಪಾರಾಯಣ ಮಾಡಲಾಯಿತು. ಈ ಹಿಂದೆ 2005ರಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ನಡೆದಿತ್ತು. ಆ ಬಳಿಕ ಕಡಲು ಕೊರೆತ ಕಡಿಮೆಯಾಗಿದೆ ಎನ್ನುತ್ತಿದ್ದಾರೆ ಆಯೋಜಕರು. ಬೈಂದೂರು ತಾಲೂಕಿನ ಮರವಂತೆಯಲ್ಲಿ ಸಾಮೂಹಿಕ ಪಠಣದಿಂದ ಕಡಲು ಕೊರೆತ ಕಡಿಮೆಯಾಗಿದೆಯಂತೆ.

ಈಗ ಮತ್ತೆ ಪ್ರಕೃತಿಯಲ್ಲಿ ಏರುಪೇರು ಕಾಣಿಸುತ್ತಿದೆ ಹೀಗಾಗಿ ವಿಷ್ಣುವಿನ ಮೊರೆಹೋಗುವುದು ಅನಿವಾರ್ಯವಿದೆ ಎಂದರು. ಅಷ್ಟೇ ಅಲ್ಲದೆ ಸನಾತನ ಧರ್ಮ ಉಳಿಯಬೇಕು, ಭಾರತ ವಿಶ್ವಗುರವಾಗಿ ಮೆರೆಯಬೇಕು, ಪ್ರಕೃತಿ ವಿಕೋಪಗಳು ಉಂಟಾಗಾಬಾರದು, ಸಮುದ್ರದಿಂದ ಯಾವುದೇ ಅಪತ್ತು ಎದುರಾಗಬಾರದು, ಕಡಲ್ಕೊರೆತ ಸಂಭವಿಸಬಾರದು ಎಂಬ ಸಂಕಲ್ಪದೊಂದಿಗೆ ಪಠಣ ಕೈಗೊಳಲಾಯಿತು. ಸಮುದ್ರರಾಜನಿಗೆ ಹಾಲೆರೆಯುವ ಮೂಲಕ ಸಂಕಲ್ಪ ಕೈಗೊಂಡು ಸತತವಾಗಿ ಎರಡು ಗಂಟೆಗಳ ಕಾಲ ಮಂತ್ರ ಪಠಣ ನಡೆಯಿತು.

ಕಾಸರಗೋಡಿನ ಕಣ್ಣೂರಿನಿಂದ ಉಡುಪಿಯ ಶಿರೂರಿನವರೆಗೆ ವಿಷ್ಣು ಸಹಸ್ರನಾಮ ಪಠಣ ನಡೆದಿದೆ. ಏಕಕಾಲದಲ್ಲಿ 108 ಸ್ಥಳಗಳಲ್ಲಿ ಮಂತ್ರ ಪಠಣ ಮಲ್ಪೆ ಬೀಚ್, ಪಡುಕೆರೆ ಬೀಚ್ ಸೇರಿದಂತೆ ಉಡುಪಿ 50 ಕಡೆ ನೂರಾರು ಮಂದಿ ಸೇರಿ 4 ರಿಂದ 6 ಗಂಟೆಯವರೆಗೆ ವಿಷ್ಣು ಸಹಸ್ರ ನಾಮ ಮಂತ್ರ ಪಠಿಸಿದರು.

ಎಲ್ಲಾ ಗುಂಪುಗಳು ಆರು ಬಾರಿ ವಿಷ್ಣು ಸಹಸ್ರನಾಮ ಪಠಿಸಿದರು. ಮಹಿಳೆಯರು, ಪುರುಷರು ಸೇರಿದಂತೆ 20 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ವೇದ ಕೃಷಿಕ ಕೆಎಸ್ ನಿತ್ಯಾನಂದ ಮಾರ್ಗದರ್ಶನದಲ್ಲಿ ಮೂರನೇ ಬಾರಿಗೆ ಅಭಿಯಾನ ಕರಾವಳಿ ತೀರದಲ್ಲಿ ನಡೆದಿದೆ.

ಒಟ್ಟಾರೆ ಕಡಲತೀರದಲ್ಲಿ ಎದುರಾಗಲಿರುವ ಅಪಾಯವನ್ನ ತಪ್ಪಿಸಲು ವಿಷ್ಣು ಸಹಸ್ರನಾಮ ಪಠಣ ಸಮಿತಿ ಮುಂದಾಗಿದೆ. 72 ಸಾವಿರ ಅಕ್ಷರ ಇರುವ ಸಹಸ್ರನಾಮ ಪಠಣ ಕಡಲತೀರದ ಉದ್ದಗಲಕ್ಕೂ ಮೊಳಗಿದೆ.