
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಮಂಗಳವಾರ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕೊವಿಡ್-19 ವ್ಯಾಧಿಯಿಂದ 26 ಜನ ಮರಣಿಸಿದ್ದಾರೆ ಮತ್ತು ಹೊಸದಾಗಿ 2,756 ಜನರಲ್ಲಿ ಸೋಂಕು ದೃಢಪಟ್ಟಿದೆ.
ರಾಜ್ಯದಲ್ಲಿ ಇದುವರೆಗೆ ಕೊರೊನ ಸೋಂಕಿನಿಂದ11,247 ಜನ ಸತ್ತಿದ್ದು ಒಟ್ಟು ಸೋಂಕಿತರ ಸಂಖ್ಯೆ ಇಂದು 8,32,396ಕ್ಕೇರಿದೆ. ಸೋಂಕಿತರ ಪೈಕಿ 7,80,735 ಜನ ಗುಣಮುಖರಾಗಿದ್ದಾರೆ, ಮಿಕ್ಕಿದ 40,395 ಜನರಿಗೆ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 13 ಜನ ಬಲಿಯಾಗಿದ್ದಾರೆ ಮತ್ತು 1,479 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ನಗರದಲ್ಲಿ ಮಹಾಮಾರಿಯಿಂದ ಈವರೆಗೆ 3,901 ಜನರ ಸಾವಾಗಿದೆ ಹಾಗೂ ಪೀಡಿತರ ಸಂಖ್ಯೆ 3,41,554 ತಲುಪಿದೆ.
ಸೋಂಕಿತರ ಪೈಕಿ 3,14,956 ಜನರು ಗುಣಮುಖರಾಗಿದ್ದಾರೆ ಮತ್ತು ಉಳಿದ 22,696 ಜನರಿಗೆ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆಯೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ದೊರೆತಿರುವ ಮಾಹಿತಿ ತಿಳಿಸುತ್ತದೆ.