ಲ್ಯಾಪ್ ಟಾಪ್ ನೋಡುವಾಗ ಶುರುವಾದ ಜಗಳ ಚಾಕು ಇರಿತದಲ್ಲಿ ಅಂತ್ಯ.. ಯಾವೂರಲ್ಲಿ?
ಮೈಸೂರು: ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಸ್ನೇಹಿತನಿಗೆ ಚಾಕು ಇರಿದಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ತಾಂಡವಪುರ ಗ್ರಾಮದಲ್ಲಿ ನಡೆದಿದೆ. ರೋಹನ್ ಚಾಕು ಇರಿತಕ್ಕೆ ಒಳಗಾದ ಯುವಕ. 5ನೇ ತರಗತಿಯಿಂದ ದಿಲ್ ಶಾದ್ ಮತ್ತು ರೋಹನ್ ಸ್ನೇಹಿತರಾಗಿದ್ದವರು. ಸದ್ಯ ಇಬ್ಬರೂ ಎಂಜಿನಿಯರಿಂಗ್ ಓದುತ್ತಿದ್ದರು. ರೋಹನ್ ಮಂಗಳೂರಿನ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಹಾಗೂ ದಿಲ್ ಶಾದ್ ಮೈಸೂರಿನ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ. ಕೊರೊನಾ ಹಿನ್ನೆಲೆ ಇಬ್ಬರೂ ರಜೆಯಲ್ಲಿದ್ದರು. ಲ್ಯಾಪ್ ಟಾಪ್ ನೋಡುವ ವೇಳೆ ಕ್ಷುಲ್ಲಕ ಕಾರಣಕ್ಕೆ ಇವರ ನಡುವೆ ಜಗಳ […]

ಮೈಸೂರು: ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಸ್ನೇಹಿತನಿಗೆ ಚಾಕು ಇರಿದಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ತಾಂಡವಪುರ ಗ್ರಾಮದಲ್ಲಿ ನಡೆದಿದೆ. ರೋಹನ್ ಚಾಕು ಇರಿತಕ್ಕೆ ಒಳಗಾದ ಯುವಕ.
5ನೇ ತರಗತಿಯಿಂದ ದಿಲ್ ಶಾದ್ ಮತ್ತು ರೋಹನ್ ಸ್ನೇಹಿತರಾಗಿದ್ದವರು. ಸದ್ಯ ಇಬ್ಬರೂ ಎಂಜಿನಿಯರಿಂಗ್ ಓದುತ್ತಿದ್ದರು. ರೋಹನ್ ಮಂಗಳೂರಿನ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಹಾಗೂ ದಿಲ್ ಶಾದ್ ಮೈಸೂರಿನ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ.
ಕೊರೊನಾ ಹಿನ್ನೆಲೆ ಇಬ್ಬರೂ ರಜೆಯಲ್ಲಿದ್ದರು. ಲ್ಯಾಪ್ ಟಾಪ್ ನೋಡುವ ವೇಳೆ ಕ್ಷುಲ್ಲಕ ಕಾರಣಕ್ಕೆ ಇವರ ನಡುವೆ ಜಗಳ ಶುರುವಾಗಿದೆ. ಅದು ತಾರಕಕ್ಕೆ ಏರಿ ಇದ್ದಕ್ಕಿದ್ದಂತೆ ದಿಲ್ ಶಾದ್, ರೋಹನ್ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ. ಘಟನೆ ನಂತರ ನಂಜನಗೂಡು ಪೊಲೀಸರು ದಿಲ್ ಶಾದ್ನನ್ನು ವಶಕ್ಕೆ ಪಡೆದಿದ್ದು, ರೋಹನ್ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.




