ಕರ್ನಾಟಕದ 27 ಮೆಡಿಕಲ್​ ಕಾಲೇಜ್-ಆಸ್ಪತ್ರೆ​​ಗಳಿಗೆ ದಂಡ, ಎಷ್ಟೆಷ್ಟು ಗೊತ್ತಾ?

|

Updated on: Jul 09, 2024 | 8:05 PM

ಅಗತ್ಯ ಸಿಬ್ಬಂದಿಗಳಿಲ್ಲ. ಸೂಕ್ತ ಕಟ್ಟಡವಿಲ್ಲ. ವ್ಯವಸ್ಥಿತ ಲ್ಯಾಬ್​​ ಇಲ್ಲ.. ಮೂಲಸೌಕರ್ಯ ವ್ಯವಸ್ಥೆಯಿಲ್ಲ.. ಹೀಗೆ, ಹತ್ತಾರು ಸಮಸ್ಯೆಗಳ ನಡುವೆಗಳ ನಡುವೆಯೇ ಸಾಗುತ್ತಿದ್ದ ಕರ್ನಾಟಕದ 27 ಮೆಡಿಕಲ್​​​ ಕಾಲೇಜುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ದಂಡ ವಿಧಿಸಿದೆ. ಹಾಗಾದ್ರೆ, ಯಾವೆಲ್ಲಾ ಮೆಡಿಕಲ್​ ಕಾಲೇಜ್, ಆಸ್ಪತ್ರೆ​​ಗಳಿಗೆ ಎಷ್ಟು ದಂಡ ವಿಧಿಸಲಾಗಿದೆ ಎನ್ನುವ ವಿವರ ಇಲ್ಲಿದೆ.

ಕರ್ನಾಟಕದ  27 ಮೆಡಿಕಲ್​ ಕಾಲೇಜ್-ಆಸ್ಪತ್ರೆ​​ಗಳಿಗೆ ದಂಡ, ಎಷ್ಟೆಷ್ಟು ಗೊತ್ತಾ?
Follow us on

ಬೆಂಗಳೂರು, (ಜುಲೈ 09): ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳಲ್ಲಿ ಯಾವುದಕ್ಕೂ ಕೊರತೆ ಆಗಬಾರದು, ಮೂಲಸೌಕರ್ಯ ವ್ಯವಸ್ಥೆಯಲ್ಲಿ ತೊಂದರೆ ಉಂಟಾದ್ರೆ ಅದು, ರೋಗಿಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ರೆ, ಕರ್ನಾಟಕದಲ್ಲಿ ಅನೇಕ ಮೆಡಿಕಲ್ ಕಾಲೇಜುಗಳು ಸಮಸ್ಯೆಗಳ ನಡುವೆಯೇ ಸಾಗುತ್ತಿವೆ. ಹೀಗಾಗಿ ರಾಜ್ಯದ 27 ಮೆಡಿಕಲ್ ಕಾಲೇಜುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ 2 ರಿಂದ 15 ಲಕ್ಷದವರೆಗೂ ದಂಡ ವಿಧಿಸಿದೆ. ಇದರಲ್ಲಿ 11 ಖಾಸಗಿ ಮೆಡಿಕಲ್​ ಕಾಲೇಜುಗಳಿ ಇದ್ದರೆ, ಉಳಿದೆಲ್ಲವೂ ಸರ್ಕಾರಿ ಮೆಡಿಕಲ್‌ ಕಾಲೇಜುಗಳಾಗಿವೆ.

ಯಾವ ಮೆಡಿಕಲ್​ ಕಾಲೇಜ್, ಆಸ್ಪತ್ರೆ​​ಗಳಿಗೆ ಎಷ್ಟು ದಂಡ?

  • ಚಿತ್ರದುರ್ಗದ ಸರ್ಕಾರಿ ಮೆಡಿಕಲ್ ಕಾಲೇಜಿಗೆ 15 ಲಕ್ಷ ರೂ. ದಂಡ
  • ಚಿತ್ರದುರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೂ 15 ಲಕ್ಷ ರೂ.
  • ಕಲಬುರಗಿಯ ಜಿಮ್ಸ್​ ಆಸ್ಪತ್ರೆಗೂ 15 ಲಕ್ಷ ರೂ. ದಂಡ
  • ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೂ (YIMS) 15 ಲಕ್ಷ ರೂ. ದಂಡ
  • ಚಾಮರಾಜನಗರದ ಮಿಮ್ಸ್‌ಗೂ ಬಿದ್ದಿದೆ 3 ಲಕ್ಷ ದಂಡ
  • ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆ 15 ಲಕ್ಷ ರೂ.
  • ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ (MIMS)15 ಲಕ್ಷ ರೂ.
  • ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ (KRIMS)3 ಲಕ್ಷ ರೂ.
  • ಮೈಸೂರು ವೈದ್ಯಕೀಯ ಕಾಲೇಜು, ಸಂಶೋಧನಾ ಸಂಸ್ಥೆ (MMCRI)3 ಲಕ್ಷ ರೂ.
  • ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ (SIMS)3 ಲಕ್ಷ ರೂ.
  • ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ3 ಲಕ್ಷ ರೂ.
  • ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (CIMS)3 ಲಕ್ಷ ರೂ.
  • ಹುಬ್ಬಳ್ಳಿ ವೈದ್ಯಕೀಯ ವಿಜ್ಞಾನ ಸಂಸ್ಥೆ (KIMS)2 ಲಕ್ಷ ರೂ.

ಇದನ್ನೂ ಓದಿ: ಕನಕಪುರ, ರಾಮನಗರಕ್ಕೆ ಇಲ್ಲ ಮೆಡಿಕಲ್‌ ಕಾಲೇಜು: ಪ್ರಸ್ತಾವನೆ ತಿರಸ್ಕರಿಸಿದ ಎನ್‌ಎಂಸಿ

ಇನ್ನು ಈ ಬಗ್ಗೆ ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಪ್ರತಿಕ್ರಿಯಿಸಿದ್ದು, ಸರ್ಕಾರಿ ಮೆಡಿಕಲ್ ಕಾಲೇಜು ಸೇರಿ ಹಲವು ಕಾಲೇಜಿಗೆ ಮಾನದಂಡ ಪಾಲನೇ ಮಾಡದೇ ಇರುವುದಕ್ಕೆ ದಂಡ ಹಾಕಿದೆ. ಎಲ್ಲೆಲ್ಲಿ ಖಾಲಿ ಹುದ್ದೆ ಇದೆ ಅದನ್ನ ಭರ್ತಿ ಮಾಡಿ ಎಂದು ನಾವು ಸೂಚನೆ ಕೊಟ್ಟಿದ್ದೇವೆ ಎಂದರು.

ಕನಕಪುರ ಹಾಗೂ ರಾಮನಗರಕ್ಕೆ ಇಲ್ಲ ಮೆಡಿಕಲ್‌ ಕಾಲೇಜು

ಇನ್ನು ರಾಮನಗರದಲ್ಲಿ ಮೆಡಿಕಲ್​ ಕಾಲೇಜು ಸ್ಥಾಪನೆ ವಿಷ್ಯವಾಗಿ ದೊಡ್ಡ ರಾಜಕೀಯ ಜಟಾಪಟಿಯೇ ನಡೆದಿತ್ತು.. ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ದೊರಕಿದ್ದು, ರಾಮನಗರಕ್ಕೂ ಮೆಡಿಕಲ್ ಕಾಲೇಜು ತರೋದಾಗಿ ಡಿಕೆಶಿ ಶಪತ ಮಾಡಿದ್ರು.. ಆದ್ರೆ, ರಾಮನಗರ, ಕನಕಪುರದಲ್ಲಿ ಮೆಡಿಕಲ್​ ಕಾಲೇಜುಗಳ ಪ್ರಸ್ತಾವನೆಗೆ ಎನ್​​ಎಂಸಿ ಒಪ್ಪಿಗೆ ನೀಡಿಲ್ಲ.. ತಾಂತ್ರಿಕ ಸಮಸ್ಯೆ ಕಾರಣ ನೀಡಿ, ಪ್ರಸ್ತಾವನೆಯನ್ನ ತಿರಸ್ಕರಿಸಲಾಗಿದೆ..

ರಾಜ್ಯದ ಸರ್ಕಾರಿ ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಮೂಲಸೌಕರ್ಯ ಕೊರತೆ ಇದೆ. ಹಾಗಾಗಿ, 27 ಕಾಲೇಜುಗಳಿಗೆ ಎಂಎನ್​ಸಿ ದಂಡದ ಹೊಡೆತ ಕೊಟ್ಟಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ