2nd PUC Exam Result 2022: ಜೂನ್ 3 ಅಥವಾ 4ನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ

| Updated By: ವಿವೇಕ ಬಿರಾದಾರ

Updated on: Jun 01, 2022 | 3:44 PM

ಜೂನ್​​ 3 ಅಥವಾ 4ನೇ ವಾರದಲ್ಲಿ ಪಿಯುಸಿ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಸಂಬಂಧ ಪಿಯು ಬೋರ್ಡ್ ತಾತ್ಕಾಲಿಕ ದಿನಾಂಕವನ್ನು ಸಿದ್ದಪಡಿಸಿದೆ.

2nd PUC Exam Result 2022: ಜೂನ್ 3 ಅಥವಾ 4ನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ
ಸಾಂಧರ್ಬಿಕ ಚಿತ್ರ
Image Credit source: Times Now
Follow us on

ಬೆಂಗಳೂರು:  ಜೂನ್​​ 3 ಅಥವಾ 4ನೇ ವಾರದಲ್ಲಿ ಪಿಯುಸಿ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಸಂಬಂಧ ಪಿಯು ಬೋರ್ಡ್ ತಾತ್ಕಾಲಿಕ ದಿನಾಂಕವನ್ನು ಸಿದ್ದಪಡಿಸಿದೆ. ಮೂರನೇ ವಾರವಾದ್ರೆ ಜೂ.24ರಂದು ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಜೂನ್ ಕೊನೇ ವಾರವಾದ್ರೆ ಜೂ.28ಕ್ಕೆ ಫಲಿತಾಂಶ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇದನ್ನು ಓದಿ:  ಬೆಳಗಿನ ಹೊತ್ತು ಹಾಲಿನ ಪುಡಿಯಿಂದ ತಯಾರಾದ ಕಾಫಿ, ಚಹಾ ಸೇವಿಸುತ್ತಿದ್ದರೆ ಈ ನಾಲ್ಕು ಅಂಶಗಳ ಬಗ್ಗೆ ಎಚ್ಚರವಿರಲಿ!

SSLC ಫಲಿತಾಂಶದ ರೀತಿಯೇ ವಿದ್ಯಾರ್ಥಿಗಳ ಮೊಬೈಲ್ ಗೆ ಫಲಿತಾಂಶ ಬರಲಿದೆ. ವಿದ್ಯಾರ್ಥಿಗಳ ಮೊಬೈಲ್ ಗೆ ಮೆಸೇಜ್ ಮೂಲಕ ಫಲಿತಾಂಶ ರವಾನೆ ಮಾಡಲಾಗುತ್ತದೆ. ಏ.22 ರಿಂದ ಮೇ 18ರವರೆಗೆದ್ವಿತೀಯ ಪಿಯು ಪರೀಕ್ಷೆ ನಡೆದಿತ್ತು. ಸದ್ಯ ಮೌಲ್ಯಮಾಪನ ಕಾರ್ಯ ಅರ್ಧದಷ್ಟು ಮುಗಿದಿದೆ. ಒಟ್ಟು 6,84,255 ವಿದ್ಯಾರ್ಥಿಗಳು ಈ ಬಾರೀ ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದರು.

ಇದನ್ನು ಓದಿ: ಬೆಳಗಾವಿ ಸುವರ್ಣಸೌಧದಲ್ಲಿ ಶಾವಿಗೆ ಒಣಗಿಹಾಕಿದ್ದ ಕಾರ್ಮಿಕ ಮಹಿಳೆ ಗುತ್ತಿಗೆಯಿಂದ ವಜಾ; ಗುತ್ತಿಗೆದಾರನಿಗೆ ಲೋಕೋಪಯೋಗಿ ಇಲಾಖೆಯಿಂದ ನೋಟಿಸ್ ಜಾರಿ

ಫಲಿತಾಂಶ ನೀಡುವ ವಿಚಾರದಲ್ಲಿ ವಿಳಂಬ ಆಗೋದಿಲ್ಲ. ಹೆಚ್ಚು ಉಪನ್ಯಾಸಕರನ್ನ ಬಳಸಿಕೊಂಡು ಮೌಲ್ಯಮಾಪನ ಕಾರ್ಯ ನಡೆದಿದೆ. ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಯಾವುದೇ ತೊಂದರೆ ಆಗೊದಿಲ್ಲ. ಸಚಿವರ ಸಮಯ ಸಿಕ್ಕ ಬಳಿಕ ಫಲಿತಾಂಶದ ದಿನಾಂಕ ಪ್ರಕಟ ಮಾಡಲಾಗುತ್ತದೆ. ಎಲ್ಲ ಅಂದುಕೊಂಡಂತೆ ಆದ್ರೆ ಜೂನ್ 3ನೇ ವಾರವೇ ಫಲಿತಾಂಶ ಪ್ರಕಟವಾಗಲಿದೆ. ಪಿಯು ಬೋರ್ಡ್ ನಿರ್ದೇಶಕ ಆರ್.ರಾಮಚಂದ್ರನ್ ಹೇಳಿದ್ದಾರೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.  ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:44 pm, Wed, 1 June 22