ಬೆಳಗಾವಿ ಸುವರ್ಣಸೌಧದಲ್ಲಿ ಶಾವಿಗೆ ಒಣಗಿಹಾಕಿದ್ದ ಕಾರ್ಮಿಕ ಮಹಿಳೆ ಗುತ್ತಿಗೆಯಿಂದ ವಜಾ; ಗುತ್ತಿಗೆದಾರನಿಗೆ ಲೋಕೋಪಯೋಗಿ ಇಲಾಖೆಯಿಂದ ನೋಟಿಸ್ ಜಾರಿ
ದಿನಗೂಲಿ ಆಧಾರದ ಮೇಲೆ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆಯನ್ನು ಗುತ್ತಿಗೆದಾರ ಕೆಲಸದಿಂದ ವಜಾ ಮಾಡಿದ್ದಾರೆ. ಅಚಾತುರ್ಯದಿಂದ ಘಟನೆ ನಡೆದಿದೆ ಎಂದು ಸಮಜಾಯಿಷಿ ನೀಡಿದ್ದು. ಘಟನೆ ಮರುಕಳಿಸಿದಂತೆ ಎಲ್ಲಾ ಗುತ್ತಿಗೆದಾರರಿಗೂ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಯಿಂದ ನೋಟಿಸ್ ಕಳಿಸಲಾಗಿದೆ.
ಬೆಳಗಾವಿ: ಜಿಲ್ಲೆಯ ಸುವರ್ಣಾಸೌಧದ ಮುಖ್ಯ ದ್ವಾರದ ಮೆಟ್ಟಿಲುಗಳ ಮೇಲೆ ಶಾವಿಗೆ ಒಣಗಿಸಲು ಹಾಕಿರುವ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿ ಗುತ್ತಿಗೆದಾರನಿಗೆ ಲೋಕೋಪಯೋಗಿ ಇಲಾಖೆಯಿಂದ ನೋಟಿಸ್ ಕಳಿಸಲಾಗಿದೆ. ಸ್ವಚ್ಛತಾ ಕಾರ್ಯ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರನಿಗೆ ಇಲಾಖೆ ನೋಟಿಸ್ ಕಳಿಸಿದ್ದು ಕೊಂಡಸಕೊಪ್ಪ ಗ್ರಾಮದ ಕಾರ್ಮಿಕ ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ದಿನಗೂಲಿ ಆಧಾರದ ಮೇಲೆ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆಯನ್ನು ಗುತ್ತಿಗೆದಾರ ಕೆಲಸದಿಂದ ವಜಾ ಮಾಡಿದ್ದಾರೆ. ಅಚಾತುರ್ಯದಿಂದ ಘಟನೆ ನಡೆದಿದೆ ಎಂದು ಸಮಜಾಯಿಷಿ ನೀಡಿದ್ದು. ಘಟನೆ ಮರುಕಳಿಸಿದಂತೆ ಎಲ್ಲಾ ಗುತ್ತಿಗೆದಾರರಿಗೂ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಯಿಂದ ನೋಟಿಸ್ ಕಳಿಸಲಾಗಿದೆ. ನೋಟಿಸ್ ನೀಡಿದ ಬಗ್ಗೆ ಬೆಳಗಾವಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ಪತ್ರದ ಮೂಲಕ ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಜೆಡಿಎಸ್ ನಿಯೋಗದಿಂದ ಸಿದ್ದರಾಮಯ್ಯ ಭೇಟಿ
ಘಟನೆ ಹಿನ್ನೆಲೆ ಓರ್ವ ಕಾರ್ಮಿಕ ಮಹಿಳೆಗೆ ಸಾಂಬ್ರಾ ಮೂಲದ ಕಾರ್ಮಿಕ ಮಹಿಳೆ ಶಾವಿಗೆ ತಂದು ಕೊಟ್ಟಿದ್ದರು. ಶಾವಿಗೆ ಹಸಿ ಇದ್ದವು ಎಂಬ ಕಾರಣಕ್ಕೆ ಸೀರೆ ಹಾಸಿ ಮಹಿಳೆ ಶಾವಿಗೆ ಒಣಹಾಕಿದ್ದಾರೆ. ಮಧ್ಯಾಹ್ನ ಪೆಟ್ರೋಲಿಂಗ್ ವೇಳೆ ಶಾವಿಗೆ ಒಣಹಾಕಿದ್ದನ್ನು ಭದ್ರತಾ ಸಿಬ್ಬಂದಿ ಗಮನಿಸಿದ್ದಾರೆ. ತಕ್ಷಣ ಶಾವಿಗೆ ತೆರವುಗೊಳಿಸಿ ಕಾರ್ಮಿಕ ಮಹಿಳೆಯರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಟೋಗಳು ವೈರಲ್ ಆಗುತ್ತಿದ್ದಂತೆ ಸಾಕಷ್ಟು ಜನರು ಟೀಕೆ ಟಿಪ್ಪಣಿ ಮಾಡಿದ್ದಾರೆ. ಚಳಿಗಾಲ ಅಧಿವೇಶನಕ್ಕಾಗಿ ತಯಾರಿ ನಡೆಸುವ ಮುಂಚಿತವಾಗಿಯೇ ಸಂಡಿಗೆ, ಹಪ್ಪಳ ಒಣಗಿಸಲಾಗುತ್ತಿದೆ ಎಂದು ಕೆಲವರು ಹಾಸ್ಯಮಯವಾಗಿ ಟ್ವೀಟ್ ಮಾಡಿದ್ದಾರೆ. ಇನ್ನೂ ಕೆಲವರು ಸರ್ಕಾರ ಇಲ್ಲಿ ಸಂಡಿಗೆ, ಹಪ್ಪಳ ಮೇಳ ಹಮ್ಮಿಕೊಳ್ಳಲಿದೆ ಎಂದು ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: Theatre: ಅಂಕಪರದೆ: ‘ನಡುರಾತ್ರಿಯ ಪುಳಕ’ ನೋಡಲು ಜೂನ್ 1ಕ್ಕೆ ರಂಗಶಂಕರಕ್ಕೆ ಬನ್ನಿ
ಶ್ರಮಿಕ ವರ್ಗದವರಿಗೆ ಅವಮಾನಿಸುವ ಉದ್ದೇಶ ಇಲ್ಲ ಇನ್ನು ಶಾವಿಗೆ ಒಣ ಹಾಕಿದ ಮಹಿಳೆಯನ್ನ ಕೆಲಸದಿಂದ ವಜಾಗೊಳಿಸಿರುವ ವಿಚಾರಕ್ಕೆ ಸಂಬಂಧಿಸಿ ಬೆಳಗಾವಿಯಲ್ಲಿ ಶಾಸಕ ಪಿ. ರಾಜೀವ್ ಪ್ರತಿಕ್ರಿಯಿಸಿದ್ದಾರೆ. ಶಾವಿಗೆ ಒಣ ಹಾಕಿದ ಶ್ರಮಿಕ ವರ್ಗದವರಿಗೆ ಅವಮಾನಿಸುವ ಯಾವ ಉದ್ದೇಶ ಇಲ್ಲ. ಅವರ ಕರ್ತವ್ಯವನ್ನು ಗೌರವಿಸುತ್ತೇನೆ. ಆದ್ರೆ ಆ ಸ್ಥಳ ಉಪಯೋಗಿಸುವುದು ಸೂಕ್ತವಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿ ಹಾಗೂ ಆಡಳಿತ ಹಿಂದುಳಿದಿದೆ ಎಂಬ ಆರೋಪವಿದೆ. ಉತ್ತರ ಕರ್ನಾಟಕ ಅಭಿವದ್ಧಿಗೊಳಿಸುವ ಉದ್ದೇಶದಿಂದ ಸುವರ್ಣ ವಿಧಾನಸೌಧ ಕಟ್ಟಿದ್ದೇವೆ. ಸುವರ್ಣಸೌಧ ಸದ್ಭಳಿಕೆ ಆಗಬೇಕು ಕೆಲವೊಂದು ಇಲಾಖೆಗಳು ವರ್ಗಾವಣೆ ಮಾಡಿದ್ದೇವೆ. ಉಸ್ತುವಾರಿ ಹೊತ್ತಿರುವ ಅಧಿಕಾರಿಗಳು ಅದರ ಘನತೆ ಗೌರವ ಕಾಪಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೆ ಮಾತನಾಡುತ್ತೇನೆ. ಯಾರನ್ನೋ ಒಬ್ಬರನ್ನು ಬಲಿ ಹಾಕಿ ರಕ್ಷಣೆ ಮಾಡಿಕೊಳ್ಳೋದು ತಪ್ಪು. ಕೊನೆಗೆ ಬಲಿ ಆದವರು ಬಡಪಾಯಿಗಳೇ ಅದು ಆಗಬಾರದು ಇದರ ಬಗ್ಗೆ ಮಾತನಾಡುತ್ತೇನೆ. ಇನ್ನು ಮುಂದೆ ಈ ತರ ಘಟನೆಗಳು ಆಗಬಾರದು ಇದು ಸದ್ಬಳಕೆ ಆಗಬೇಕು ಎಂದ ಹೇಳಿದ್ರು.
Published On - 3:16 pm, Wed, 1 June 22