ತಬ್ಲಿಘಿ, ಅಜ್ಮೀರ್ ಧೂರ್ತರಿಂದ ಭಾನುವಾರ ರಾಜ್ಯದಲ್ಲಿ ಕಾಣಿಸಿಕೊಂಡ ಸೋಂಕಿತರ ಸಂಖ್ಯೆ ಎಷ್ಟು?
ಬೆಂಗಳೂರು: ತಬ್ಲಿಘಿ ಭೂತಗಳು ಅಹಮದಾಬಾದ್ನಿಂದ ಹಾರಿ ಬಂದು ಸೀದ ಮುಖ್ಯಮಂತ್ರಿ ಯಡಿಯೂರಪ್ಪನವರ ಸ್ವಕ್ಷೇತ್ರ ಶಿಕಾರಿಪುರದಲ್ಲೇ 7 ಮಂದಿಯ ಶಿಕಾರಿ ಮಾಡಿ, ಇನ್ನೂ ಒಂದಿರಲಿ ಎಂದು ಪಕ್ಕದ ತೀರ್ಥಹಳ್ಳಿಗೂ ಕೊಡುಗೆ ನೀಡಿದ್ದಾರೆ. ಧೂರ್ತರು ಒಟ್ಟಾರೆಯಾಗಿ ರಾಜ್ಯದಲ್ಲಿ 39 ಪ್ರಕರಣಗಳನ್ನು ಕೊಡಗೆಯಾಗಿ ನೀಡಿದ್ದಾರೆ. ಕೊರೊನಾ ಕಾಲದಲ್ಲಿ ಹಸಿರಿನಿಂದ ಕಂಗೊಳಿಸುತ್ತಿದ್ದ ಶಿವಮೊಗ್ಗವನ್ನು ತಬ್ಲಿಘಿ ಕಂಟಕರು ಹೀಗೆ ರೆಡ್ ಜೋನ್ಗೆ ತಳ್ಳಿದ್ದಾರೆ. ಇಂದು ಭಾನುವಾರ ತಬ್ಲಿಘಿ ಮತ್ತು ಅಜ್ಮೀರ್ ಧೂರ್ತರಿಂದಾಗಿ ರಾಜ್ಯದ ಇತರೆಡೆ ಅಂದ್ರೆ ಬೆಳಗಾವಿಯಲ್ಲಿ 22, ಬಾಗಲಕೋಟೆಯಲ್ಲಿ 8, ಶಿವಮೊಗ್ಗ 8, ದಾವಣೆಗೆರೆಯಲ್ಲಿ […]

ಬೆಂಗಳೂರು: ತಬ್ಲಿಘಿ ಭೂತಗಳು ಅಹಮದಾಬಾದ್ನಿಂದ ಹಾರಿ ಬಂದು ಸೀದ ಮುಖ್ಯಮಂತ್ರಿ ಯಡಿಯೂರಪ್ಪನವರ ಸ್ವಕ್ಷೇತ್ರ ಶಿಕಾರಿಪುರದಲ್ಲೇ 7 ಮಂದಿಯ ಶಿಕಾರಿ ಮಾಡಿ, ಇನ್ನೂ ಒಂದಿರಲಿ ಎಂದು ಪಕ್ಕದ ತೀರ್ಥಹಳ್ಳಿಗೂ ಕೊಡುಗೆ ನೀಡಿದ್ದಾರೆ. ಧೂರ್ತರು ಒಟ್ಟಾರೆಯಾಗಿ ರಾಜ್ಯದಲ್ಲಿ 39 ಪ್ರಕರಣಗಳನ್ನು ಕೊಡಗೆಯಾಗಿ ನೀಡಿದ್ದಾರೆ. ಕೊರೊನಾ ಕಾಲದಲ್ಲಿ ಹಸಿರಿನಿಂದ ಕಂಗೊಳಿಸುತ್ತಿದ್ದ ಶಿವಮೊಗ್ಗವನ್ನು ತಬ್ಲಿಘಿ ಕಂಟಕರು ಹೀಗೆ ರೆಡ್ ಜೋನ್ಗೆ ತಳ್ಳಿದ್ದಾರೆ.
ಇಂದು ಭಾನುವಾರ ತಬ್ಲಿಘಿ ಮತ್ತು ಅಜ್ಮೀರ್ ಧೂರ್ತರಿಂದಾಗಿ ರಾಜ್ಯದ ಇತರೆಡೆ ಅಂದ್ರೆ ಬೆಳಗಾವಿಯಲ್ಲಿ 22, ಬಾಗಲಕೋಟೆಯಲ್ಲಿ 8, ಶಿವಮೊಗ್ಗ 8, ದಾವಣೆಗೆರೆಯಲ್ಲಿ 1 ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಇಂದು ವರದಿಯಾದ 53 ರ ಪೈಕಿ 39 ಸೋಂಕು ಇವರದ್ದೇ ಕೊಡುಗೆಯಾಗಿದೆ.
ಕುಂದಾನಗರಿಯಲ್ಲಿ ಒಂದೇ ದಿನ 22 ಜನರಿಗೆ ಸೋಂಕು: ಕುಂದಾನಗರಿ ಬೆಳಗಾವಿಗೆ ಕೊರೊನಾ ಕಂಟಕ ಶುರುವಾಗಿದೆ. ಇವತ್ತು ಒಂದೇ ದಿನ 22 ಜನರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಹೀಗಾಗಿ ಸೋಂಕಿತ ಸಂಖ್ಯೆ ಶತಕದ ಗಡಿ ದಾಟಿ 105ಕ್ಕೆ ಏರಿಕೆಯಾಗಿದೆ.
ಅಜ್ಮೀರ್ ದರ್ಗಾಕ್ಕೆ ಹೋಗಿ ಬಂದಿದ್ದವರಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಮಾರ್ಚ್17ರಂದು 38 ಜನರು ಬಸ್ ಮಾಡಿಕೊಂಡು ಅಜ್ಮೀರಕ್ಕೆ ಹೋಗಿದ್ದರು. ನಂತರ ಮೇ 2ರಂದು ಖಾಸಗಿ ಬಸ್‌ನಲ್ಲಿ ಕಳ್ಳ ದಾರಿಯಲ್ಲಿ ಬೆಳಗಾವಿಗೆ ಎಂಟ್ರಿಕೊಟ್ಟಿದ್ದಾರೆ.
ಈ ವೇಳೆ ಮಹಾರಾಷ್ಟ್ರ ಗಡಿಯ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಬಿಡದ ಹಿನ್ನೆಲೆಯಲ್ಲಿ ಕಣ್ತಪ್ಪಿಸಿ ಬೆಳಗಾವಿ ಜಿಲ್ಲೆಯ ಒಳಗೆ ನುಸುಳಿದ್ದರು. ನಂತರ ನಿಪ್ಪಾಣಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಜಿಲ್ಲಾಡಳಿತದ ನಿಪ್ಪಾಣಿಯಲ್ಲಿ 38ಜನರನ್ನು ಕ್ವಾರಂಟೈನ್ ಮಾಡಿದ್ದರು.
ಸದ್ಯ 38 ಜನರ ಪರೀಕ್ಷಾ ವರದಿ ಬಂದಿದ್ದು, 38ರ ಪೈಕಿ ಬೆಳಗಾವಿಯ 22 ಮಂದಿಗೆ ಹಾಗೂ ಬಾಗಲಕೋಟೆ 8 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಮಾಹಿತಿ ನೀಡಿದ್ದಾರೆ. ಅಜ್ಮೀರ್ಗೆ ಹೋದವರ ಪೈಕಿ ಎಂಟು ಜನ ಬಾಗಲಕೋಟೆ, ಮೂವತ್ತು ಜನ ಬೆಳಗಾವಿ ಜಿಲ್ಲೆಯವರಾಗಿದ್ದರು. ಅಜ್ಮೀರ್ಗೆ ಹೋಗಿದ್ದ ಬಾಗಲಕೋಟೆಯ 8 ಮಂದಿಗೆ ಸೊಂಕು ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 59ಕ್ಕೆ ಏರಿಕೆಯಾಗಿದೆ.

Published On - 1:37 pm, Sun, 10 May 20
