ಬಳ್ಳಾರಿ, ಬೆಳಗಾವಿ ಬೆನ್ನಲ್ಲೇ ಹುಬ್ಬಳ್ಳಿ ಕಿಮ್ಸ್​ನಲ್ಲೂ ಗರ್ಭಿಣಿಯರು, ಶಿಶುಗಳ ಮರಣ ಬೆಳಕಿಗೆ!

| Updated By: ಗಂಗಾಧರ​ ಬ. ಸಾಬೋಜಿ

Updated on: Dec 09, 2024 | 2:55 PM

ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಬೆನ್ನಲ್ಲೇ ಇದೀಗ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಜನವರಿಯಿಂದ ಈವರೆಗೆ 33 ಗರ್ಭಿಣಿಯರು ಮತ್ತು 148 ಶಿಶುಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ವಿವಿಧ ಕಾರಣಗಳಿಂದ ಸಾವು ಸಂಭವಿಸಿದೆ ಎಂದು ಆಸ್ಪತ್ರೆಯ ನಿರ್ದೇಶಕರು ಹೇಳಿದ್ದಾರೆ. ಆದರೆ, ಡ್ರಗ್ ಡಿಯಾಕ್ಟ್​ನಿಂದ ಯಾರೂ ಮೃತಪಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಬಳ್ಳಾರಿ, ಬೆಳಗಾವಿ ಬೆನ್ನಲ್ಲೇ ಹುಬ್ಬಳ್ಳಿ ಕಿಮ್ಸ್​ನಲ್ಲೂ ಗರ್ಭಿಣಿಯರು, ಶಿಶುಗಳ ಮರಣ ಬೆಳಕಿಗೆ!
ಬಳ್ಳಾರಿ, ಬೆಳಗಾವಿ ಆಯ್ತು ಇದೀಗ ಹುಬ್ಬಳ್ಳಿ ಕಿಮ್ಸ್​ನಲ್ಲೂ ಗರ್ಭಿಣಿಯರು, ಶಿಶುಗಳ ಮರಣ!
Follow us on

ಹುಬ್ಬಳ್ಳಿ, ಡಿಸೆಂಬರ್​ 09: ಬಳ್ಳಾರಿಯಲ್ಲಿ (ballari) ಬಾಣಂತಿಯರ ಸರಣಿ ಸಾವು ಪ್ರಕರಣ ಕರ್ನಾಟಕದಾದ್ಯಂತ ಸದ್ದು ಮಾಡಿದೆ. ಇದರ ಬೆನ್ನಲ್ಲೇ ಬೆಳಗಾವಿಯಲ್ಲಿ ಆರು ತಿಂಗಳಲ್ಲಿ 29 ಬಾಣಂತಿಯರು ಹಾಗೂ 322 ಶಿಶುಗಳು ಮೃತಪಟ್ಟಿರುವ ಸಂಗತಿ ಬಯಲಾಗಿತ್ತು. ಇದೀಗ ಹುಬ್ಬಳ್ಳಿ ಕಿಮ್ಸ್​​ ಆಸ್ಪತ್ರೆನಲ್ಲೂ ಗರ್ಭಿಣಿ ಮತ್ತು ಶಿಶುಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಜನವರಿಯಿಂದ ಈವರೆಗೆ 33 ಗರ್ಭಿಣಿಯರು ಹಾಗೂ 148 ಶಿಶುಗಳ ಸಾವಾಗಿದೆ ಎಂದು ಕಿಮ್ಸ್​​​​ ನಿರ್ದೇಶಕ ಡಾ.ಎಸ್​.ಎಫ್​.ಕಮ್ಮಾರ್ ಹೇಳಿದ್ದಾರೆ.

ನಗರದಲ್ಲಿ ಟಿವಿ9 ಜೊತೆಗೆ ಮಾತನಾಡಿದ ಅವರು, ಜನವರಿಯಿಂದ ಈವರೆಗೆ 33 ಗರ್ಭಿಣಿಯರು, 148 ಶಿಶುಗಳ ಸಾವಾಗಿದೆ. ಬೇರೆ ಬೇರೆ ಕಾರಣಗಳಿಂದ ಗರ್ಭಿಣಿಯರು, ನವಜಾತ ಶಿಶುಗಳ ಸಾವಾಗಿದೆ, ಆದರೆ ಡ್ರಗ್ ಡಿಯಾಕ್ಟ್​ನಿಂದ ಯಾರೂ ಮೃತಪಟ್ಟಿಲ್ಲ. ನ್ಯಾಷನಲ್ ಲೇವಲ್ ಡೆತ್​ ರೇಟ್ ಹೇಗಿದೆ, ಹಾಗೆ ಹುಬ್ಬಳ್ಳಿ ಕಿಮ್ಸ್​ನಲ್ಲಿ ಡೆತ್​ ರೇಟ್​ ಶೇಕಡ 3 ರಿಂದ 4 ರಷ್ಟಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಬಾಣಂತಿಯರ ಸಾವು ಕೇಸ್​: ಐಎಎಸ್ ಅಧಿಕಾರಿ ನೇತೃತ್ವದಲ್ಲಿ ಪರಿಶೀಲನಾ ತಂಡ ರಚನೆ

ಸೆಪ್ಟೆಂಬರ್​ನಲ್ಲೂ ಅದೇ ಬ್ರ್ಯಾಂಡ್​ನ ಸಲಾಯಿನ್ ಬಳಸಲಾಗಿದೆ. ಎಲ್ಲಾ ವಾರ್ಡ್​ಗಳಲ್ಲಿರುವ ರೋಗಿಗಳಿಗೆ ಸಲಾಯಿನ್ ನೀಡಲಾಗಿತ್ತು. ಸಲಾಯಿನ್ ಬಳಕೆಯಿಂದ ಯಾವ ರೋಗಿಯೂ ಮೃತಪಟ್ಟಿಲ್ಲ. ಕಿಮ್ಸ್​ನಲ್ಲಿ ಡ್ರಗ್​ ರಿಯಾಕ್ಟ್​ನಿಂದ ಮೃತಪಟ್ಟಿರುವ ವರದಿಯಾಗಿಲ್ಲ, ಆದರೂ ಮುಂಜಾಗ್ರತಾ ಕ್ರಮವಾಗಿ ಸಮಿತಿ ರಚನೆ ಮಾಡಿದ್ದೇವೆ. ಯಾರಿಗಾದರೂ ಸಮಸ್ಯೆ ಆಗಿದ್ಯಾ ಎಂಬ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಸಮಿತಿ ರಚಿಸಲಾಗಿದೆ ಎಂದಿದ್ದಾರೆ.

ಬೆಳಗಾವಿಯಲ್ಲೂ ಬಾಣಂತಿಯರು, ಶಿಶುಗಳ ಮರಣ ಮೃದಂಗ!

ಬೆಳಗಾವಿಯಲ್ಲೂ ಬಾಣಂತಿಯರ ಮರಣ ಮೃದಂಗ ನಡೆದಿದೆ. 6 ತಿಂಗಳಲ್ಲಿ 29 ಬಾಣಂತಿಯರ ಸಾವಾಗಿರುವುದು ಬೆಳಕಿಗೆ ಬಂದಿದೆ. ಸೂಕ್ತ ಚಿಕಿತ್ಸೆ ಸಿಗದೇ, ರಕ್ತಸ್ರಾವ, ವೈದ್ಯರ ನಿರ್ಲಕ್ಷ್ಯ ಸೇರಿ 10 ಹಲವು ಕಾರಣಗಳಿಂದ ಆಸ್ಪತ್ರೆಯಲ್ಲಿ ಬಾಣಂತಿಯರು ಬಲಿಯಾಗಿದ್ದಾರೆ. ಏಪ್ರಿಲ್ ತಿಂಗಳಿಂದಲ್ಲೇ ಆಸ್ಪತ್ರೆಗಳಿಗೆ ಐವಿ ಗ್ಲುಕೋಸ್ ಸಪ್ಲೈ ಮಾಡಲಾಗಿತ್ತು.

ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಗೆ ದಿನೇಶ್‌ ಗುಂಡೂರಾವ್ ಭೇಟಿ: IV ಫ್ಲ್ಯೂಯೆಡ್‌ ಕಂಪನಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಹೋಗ್ತಿದ್ದೇವೆ ಎಂದ ಸಚಿವ

ಬಾಣಂತಿಯರಷ್ಟೇ ಅಲ್ಲ ಸಾಲು ಸಾಲು ಶಿಶುಗಳ ಮರಣ ಮೃದಂಗವೇ ನಡೆದಿದೆ. ಕಳೆದ 6 ತಿಂಗಳಲ್ಲಿ ಬರೋಬ್ಬರಿ 322 ಶಿಶುಗಳು ಸಾವನ್ನಪ್ಪಿವೆ. ಪ್ರತಿ ತಿಂಗಳು 45 ರಿಂದ 52 ಸರಾಸರಿಯಲ್ಲಿ ಶಿಶುಗಳ ಸಾವಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:49 pm, Mon, 9 December 24