ಬಳ್ಳಾರಿ ಜಿಲ್ಲಾಸ್ಪತ್ರೆಗೆ ದಿನೇಶ್ ಗುಂಡೂರಾವ್ ಭೇಟಿ: IV ಫ್ಲ್ಯೂಯೆಡ್ ಕಂಪನಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಹೋಗ್ತಿದ್ದೇವೆ ಎಂದ ಸಚಿವ
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಐವಿ ಫ್ಲ್ಯೂಯೆಡ್‌ನ ಬಳಕೆಯಿಂದ ಸಾವು ಸಂಭವಿಸಿರಬಹುದು ಎಂಬ ಅನುಮಾನದ ಮೇಲೆ ತನಿಖೆ ನಡೆಯುತ್ತಿದೆ. ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಸಂಪೂರ್ಣ ತನಿಖೆಗೆ ಭರವಸೆ ನೀಡಿದೆ. ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ವೈದ್ಯರ ಟೀಂ ವಾಪಸ್ಸಾಗಿದೆ.
ಬಳ್ಳಾರಿ, ಡಿಸೆಂಬರ್ 07: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಸ್ಪತ್ರೆ ಎದುರು ಶ್ರೀರಾಮುಲು ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ಇದೀಗ ಘಟನೆ ನಡೆದು 25 ದಿನಗಳ ಬಳಿಕ ಬಳ್ಳಾರಿಗೆ ಇಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಭೇಟಿ ನೀಡಿದ್ದಾರೆ. ಐವಿ ಫ್ಲ್ಯೂಯೆಡ್ ಕಂಪನಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಹೋಗುತ್ತಿದ್ದೇವೆ. ಬಾಣಂತಿಯರ ಸರಣಿ ಸಾವಿನ ಬಗ್ಗೆ ಸಂಪೂರ್ಣ ತನಿಖೆ ಆಗಲಿದೆ ಎಂದು ಹೇಳಿದ್ದಾರೆ.
ಬಳ್ಳಾರಿ ಜಿಲ್ಲಾಸ್ಪತ್ರೆಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ, ಪರಿಶೀಲನೆ
ಬಳ್ಳಾರಿ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್‌ಗೆ ಭೇಟಿ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪರಿಶೀಲನೆ ಮಾಡಿದ್ದು, ಡಿಹೆಚ್‌ಒ, ಜಿಲ್ಲಾ ಸರ್ಜನ್‌ರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಪರಿಶೀಲನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾಣಂತಿಯರ ದಿಢೀರ್ ಸಾವಾಗಿದೆ, ವೈದ್ಯರ ಮೂಲಕ ವರದಿ ಕೇಳಿದ್ವಿ. ಐವಿ ಫ್ಲ್ಯೂಯೆಡ್ ಬಗ್ಗೆ ಅನುಮಾನವಿತ್ತು, ಲ್ಯಾಬ್‌ನಲ್ಲಿ ಟೆಸ್ಟ್ ಮಾಡಲಾಗಿತ್ತು. ಲ್ಯಾಬ್‌ನಲ್ಲಿ ಟೆಸ್ಟ್ ಬಳಿಕ ಐವಿ ಬಳಕೆ ನಿಷೇಧ ಮಾಡಲಾಗಿತ್ತು ಎಂದಿದ್ದಾರೆ.
ಇದನ್ನೂ ಓದಿ: 5 ಬಾಣಂತಿಯರ ಸಾವು: ಬಿಮ್ಸ್ ಆಸ್ಪತ್ರೆ ಮೇಲೆ ಲೋಕಾಯುಕ್ತ ದಾಳಿ
ಐವಿ ಫ್ಲ್ಯೂಯೆಡ್ ಸರಿಯಿದೆ ಅಂತಾ ಕೇಂದ್ರ ಲ್ಯಾಬ್ ರಿಪೋರ್ಟ್ ನೀಡಿದೆ. ಐವಿ ಫ್ಲ್ಯೂಯೆಡ್ ಬಗ್ಗೆ ನಮಗೂ ಹಿಂಜರಿಕೆಯಿತ್ತು, ಈ ಬಗ್ಗೆ ಸಂಶಯವಿದೆ. ಈ ಪ್ರಕರಣ ಬಂದ ತಕ್ಷಣ ಎಲ್ಲಾ ಆಸ್ಪತ್ರೆಯಲ್ಲಿ ಬಳಕೆ ಸ್ಥಗಿತಗೊಳಿಸಿದ್ದೇವೆ. 327 ಬಾಣಂತಿಯರ ಸಾವು ಆಡಿಟ್ ಆಗಲಿದೆ, ಸತ್ಯ ಗೊತ್ತಾಗಬೇಕಿದೆ. ಸಿಎಂ ಹಾಗೂ ನಾನು ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದೇವೆ. ವಿರೋಧ ಪಕ್ಷವಾಗಿ ನೀವು ಪ್ರತಿಭಟನೆ ಮಾಡುವುದು ಸರಿಯಿದೆ. ಇದು ಭಾವನಾತ್ಮಕ, ಮಾನವೀತೆ ವಿಚಾರ. ಸದನದಲ್ಲಿ ಈ ವಿಚಾರ ಚರ್ಚೆ ಮಾಡುತ್ತೇವೆ. ಸಾವುಗಳ ತಡೆಗೆ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈ ನೀವು ಪ್ರತಿಭಟನೆ ಹಿಂಪಡೆಯಬೇಕು. ಪರಿಹಾರ ವಿಚಾರವಾಗಿ ಸಿಎಂ ಜೊತೆಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಘಟನೆಯ ಕುರಿತು ಉನ್ನತ ತಜ್ಞರ ಸಮಿತಿ ರಚಿಸಿ ತನಿಖೆ ನಡೆಸುತ್ತೇವೆ. ತನಿಖೆ ನಡೆಸಿ ವರದಿ ಪಡೆಯಲಾಗುತ್ತದೆ. ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಬಳಕೆಗೆ ಯೋಗ್ಯವಲ್ಲ ಎಂದು ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ವರದಿ ನೀಡಿದೆ. ಆದರೆ ಸೆಂಟ್ರಲ್ ಡ್ರಗ್ಸ್ ಲ್ಯಾಬ್ (CDL) ಪಾಸಿಟಿವ್ ವರದಿ ನೀಡಿದೆ. ಇದನ್ನು ಉಲ್ಲೇಖಿಸಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಗೆ ಪತ್ರ ಬರೆದು ಪ್ರಶ್ನೆ ಮಾಡಿದ್ದೇವೆ. ಪಶ್ಚಿಮ್ ಬಂಗಾಳ ಫಾರ್ಮಾಸ್ಯುಟಿಕಲ್ಸ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಆದೇಶಿಸಲಾಗುವುದು. ಇಲ್ಲಿಯವರೆಗೂ ಒಂದೇ ಒಂದು ಫಾರ್ಮಾ ಕಂಪನಿಯ ಮೇಲೆ ಕ್ರಮ ಆಗಿಲ್ಲ. ಆದರೆ ಈ ಬಾರಿ ನಾವು ಇದನ್ನ ಗಂಭೀರ ಪರಿಗಣಸಿದ್ದೇವೆ ಎಂದಿದ್ದಾರೆ.
ರಾಜ್ಯಕ್ಕೆ ಮರಳಿದ ವೈದ್ಯರ ತಂಡ: ಸೋಮವಾರ ಸರ್ಕಾರಕ್ಕೆ ವರದಿ ಸಲ್ಲಿಕೆ
ಇನ್ನು ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ವೈದ್ಯರ ಟೀಂ ವಾಪಸ್ಸಾಗಿದೆ. ಐವಿ ಫ್ಲೂಯಿಡ್ ಕುರಿತ ವರದಿ ಜೊತೆಗೆ ತಂಡ ಆಗಮಿಸಿದೆ. ಬಂಗಾಳದ ಐವಿ ತಯಾರಿಕಾ ಘಟಕಕ್ಕೆ ವೈದ್ಯರು ಭೇಟಿ ನೀಡಿದ್ದರು. ಘಟಕದಲ್ಲಿನ ಸಂಪೂರ್ಣ ಮಾಹಿತಿ ಪಡೆದು ಟೀಂ ವಾಪಸ್ಸಾಗಿದೆ. ಸೋಮವಾರ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲ್ಲಿದೆ. ಬಂಗಾಳದ ಕಂಪನಿಯ ಪ್ರಾಸಿಕ್ಯೂಷನ್‌ಗೆ ಹೋಗೋದು ಫಿಕ್ಸ್ ಆಗಿದೆ. ಈ ಹಿನ್ನೆಲೆ ವೈದ್ಯರ ತಂಡ ಎಲ್ಲಾ ಮಾಹಿತಿ ಕಲೆ ಹಾಕಿದೆ. ಬಂಗಾಳದ ಕಂಪನಿಯನ್ನ ಬ್ಲಾಕ್ ಲಿಸ್ಟ್ಗೆ ಸೇರಿಸಲು ತಯಾರಿ ನಡೆಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:50 pm, Sat, 7 December 24