ಬಸನಗೌಡ ಯತ್ನಾಳ್ ಶೋಕಾಸ್ ನೋಟೀಸ್ಗೆ ಇನ್ನೂ ಉತ್ತರ ನೀಡಿಲ್ಲವೆಂದ ರಾಜ್ಯ ಬಿಜೆಪಿ ಉಸ್ತುವಾರಿ ಅಗರವಾಲ್
ಪಂಚಾಯತ್ ಚುನಾವಣೆಗಳ ಹಿನ್ನೆಲೆಯಲ್ಲಿ ಪಕ್ಷದ ಸಂಸದರು ಮತ್ತು ಇತರ ನಾಯಕರೊಂದಿಗೆ ಸಭೆ ನಡೆಸಲು ಬೆಂಗಳೂರಿಗೆ ಬಂದಿರುವುದಾಗಿ ಹೇಳಿದ ಅಗರವಾಲ್, ಯತ್ನಾಳ್ ಪಕ್ಷದ ಒಬ್ಬ ಶಿಸ್ತಿನ ಕಾರ್ಯಕರ್ತ, ರಾಜ್ಯದಲ್ಲಿ ಒಟ್ಟು 71 ಲಕ್ಷ ಕಾರ್ಯಕರ್ತರಿದ್ದಾರೆ, ಎಲ್ಲರೂ ಒಂದೇ ತೆರನಾಗಿರುವುದಿಲ್ಲ, ಅಭಿಪ್ರಾಯ ಮತ್ತು ಅನಿಸಿಕೆಗಳು ಬೆರೆ ಬೇರೆಯಾಗಿರುತ್ತವೆ ಎಂದರು.
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬಣ ಬಡಿದಾಟವನ್ನು ತಹಬದಿಗೆ ತರಲು ರಾಜ್ಯದ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಬೆಂಗಳೂರಿಗೆ ಬಂದಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಶೋಕಾಸ್ ನೀಡಿದ್ದನ್ನು ಮತ್ತು ಶಾಸಕ ಉತ್ತರ ನೀಡಿದ ಬಳಿಕ ಹೈಕಮಾಂಡ್ ತನ್ನ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಅನ್ನೋದನ್ನು ನಾಲ್ಕೈದು ಬಾರಿ ಹೇಳಿದರು. ಆದರೆ, ಯತ್ನಾಳ್ ಈಗಾಗಲೇ ದೆಹಲಿಗೆ ತೆರಳಿ ಪಕ್ಷದ ಶಿಸ್ತು ಪಾಲನಾ ಸಮಿತಿಯ ಮುಂದೆ ಹಾಜರಾಗಿದ್ದಾರೆ ಮತ್ತು ವರಿಷ್ಠರನ್ನೂ ಭೇಟಿಯಾಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಖ್ಯಮಂತ್ರಿ ಆಗಬೇಕು, ಸಾಕಷ್ಟು ದುಡ್ಡು ಮಾಡಿಕೊಳ್ಳಬೇಕು ಎಂಬ ಆಸೆ ನನಗಿಲ್ಲ: ಬಸನಗೌಡ ಯತ್ನಾಳ್
Latest Videos