ಪಂಜರದೊಳಗಿದ್ದ ಸಿಂಹವನ್ನು ಕೆಣಕಿ ಕೈ ಬೆರಳನ್ನೇ ಕಳೆದುಕೊಂಡ ಯುವಕ
ಜಮೈಕಾ ಮೃಗಾಲಯದಲ್ಲಿ ನಡೆದ ಆಘಾತಕಾರಿ ಘಟನೆಯು ಕಾಡು ಪ್ರಾಣಿಗಳನ್ನು ಪ್ರಚೋದಿಸುವ ಅಪಾಯವನ್ನು ಎತ್ತಿ ತೋರಿಸಿದೆ. ಸಿಂಹವನ್ನು ಅದರ ಪಂಜರದ ಬಾರ್‌ಗಳ ಮೂಲಕ ರೇಗಿಸಿದ ವ್ಯಕ್ತಿಯೊಬ್ಬ ಬೆರಳನ್ನೇ ಕಳೆದುಕೊಂಡಿದ್ದಾನೆ.
ಜಮೈಕಾ ಮೃಗಾಲಯದಲ್ಲಿ ವ್ಯಕ್ತಿಯೊಬ್ಬ ಪಂಜರದೊಳಗೆ ಕೈ ಹಾಕಿ ಸಿಂಹವನ್ನು ಕೆಣಕುತ್ತಿದ್ದ. ಆತನಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ ಸಿಂಹ ಆತನ ಕೈಗಳನ್ನು ಕಚ್ಚಿ ಹಿಡಿದಿದೆ. ಬಿಡಿಸಿಕೊಳ್ಳಲು ಎಷ್ಟೇ ಒದ್ದಾಡಿದರೂ ಆತನಿಗೆ ಸಾಧ್ಯವಾಗಿಲ್ಲ. ಕೊನೆಗೆ ಆತ ಬೆರಳನ್ನೇ ಕಚ್ಚಿ ತಿಂದ ಸಿಂಹದಿಂದ ಆತ ಪಾರಾಗಿದ್ದಾನೆ. ಈ ವಿಡಿಯೋ ಭಾರೀ ವೈರಲ್ ಆಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos