ಯಾರೇ ಕಾಮೆಂಟ್ ಮಾಡಿದರೂ ಪ್ರತಿಕ್ರಿಯೆ ನೀಡಲ್ಲ, ಹೇಳಬೇಕಾಗಿದ್ದನ್ನು ಹೈಕಮಾಂಡ್ಗೆ ಹೇಳಿದ್ದೇನೆ: ಯತ್ನಾಳ್
ಪ್ರಾಯಶಃ ವಿಜಯೇಂದ್ರ ಮತ್ತು ಬಿಎಸ್ ಯಡಿಯೂರಪ್ಪನವರಿಗೆ ಇದೇ ಬೇಕಾಗಿತ್ತು-ಯತ್ನಾಳ್ ಅವರ ಬಾಯಿ ಮುಚ್ಚಿಸುವುದು! ಆದರೆ, ಪಕ್ಷದ ರಾಜ್ಯ ಘಟಕದಲ್ಲಿ ಕೆಲವರನ್ನು ಬಿಟ್ಟು ಬಹಳಷ್ಟು ಜನರಿಗೆ ಯತ್ನಾಳ್ ಕಾಮೆಂಟ್ ಮಾಡೋದು ಬೇಕಾಗಿತ್ತು. ರಾಜ್ಯ ನಾಯಕತ್ವದ ವಿರುದ್ಧ ಕೇವಲ ಯತ್ನಾಳ್ ಮಾತ್ರ ಧೈರ್ಯದಿಂದ ಮಾತಾಡುತ್ತಿದ್ದರು, ಅದೀಗ ನಿಂತುಹೋಗಿದೆ.
ಬಾಗಲಕೋಟೆ: ಬಿಜೆಪಿಯ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮಾತು ಕೇಳುತ್ತಿದ್ದರೆ, ಪಕ್ಷದ ಆಂತರಿಕ ವಿಷಯಗಳು ಮತ್ತು ನಾಯಕರ ಬಗ್ಗೆ ಸಾರ್ವಜನಿಕವಾಗಿ ಮಾತಾಡಬಾರದೆಂದು ಶಿಸ್ತು ಪಾಲನಾ ಸಮಿತಿಯಿಂದ ಕಟ್ಟಪ್ಪಣೆಯಾಗಿರೋದು ಸ್ಪಷ್ಟವಾಗುತ್ತದೆ. ಬಿವೈ ವಿಜಯೇಂದ್ರ ಯತ್ನಾಳ್ ಬಗ್ಗೆ ಮಾಡಿರುವ ಕಾಮೆಂಟ್ಗೆ ಪ್ರತಿಕ್ರಿಯೆ ಕೇಳಿದಾಗ ಅವರು ಸ್ಪಷ್ಟವಾಗಿ, ತಾನು ಅದರ ಬಗ್ಗೆಯೂ ಮಾತಾಡಲ್ಲ, ತಮ್ಮ ಬಗ್ಗೆ ಯಾರೇನೇ ಕಾಮೆಂಟ್ ಮಾಡಿದ್ದರೂ ಪ್ರತಿಕ್ರಿಯೆ ನೀಡಲ್ಲ, ಹೈಕಮಾಂಡನ್ನು ಭೇಟಿಯಾದಾಗ ಹೇಳಬೇಕಿರುವುದನ್ನೆಲ್ಲ ಹೇಳಿಯಾಗಿದೆ, ಒಂದೇ ವಿಷಯದ ಬಗ್ಗೆ ಪದೇಪದೆ ಮಾತಾಡೋದು ತನಗಿಷ್ಟವಿಲ್ಲ ಎಂದು ಯತ್ನಾಳ್ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಖ್ಯಮಂತ್ರಿ ಆಗಬೇಕು, ಸಾಕಷ್ಟು ದುಡ್ಡು ಮಾಡಿಕೊಳ್ಳಬೇಕು ಎಂಬ ಆಸೆ ನನಗಿಲ್ಲ: ಬಸನಗೌಡ ಯತ್ನಾಳ್