ಮನೆ ಬಿಟ್ಟು ಹೋಗ್ತೀನೆಂದ ತ್ರಿವಿಕ್ರಮ್, ತಪ್ಪು ಆಗಿದ್ದು ಎಲ್ಲಿ
Bigg Boss Kannada season 11: ಬಿಗ್ಬಾಸ್ ಕನ್ನಡ ಸೀಸನ್ 11 ರಲ್ಲಿ ಈಗಾಗಲೇ ಸ್ಪರ್ಧಿ ಶೋಭಾ ಶೆಟ್ಟಿ ಮನೆಯಿಂದ ಸ್ವ ಇಚ್ಛೆಯಿಂದ ಹೊರಗೆ ಹೋಗಿದ್ದಾರೆ. ಇದೀಗ ತ್ರಿವಿಕ್ರಮ್ ಸಹ ಹೊರ ಹೋಗುವ ಮಾತನ್ನಾಡಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 11 ರಲ್ಲಿ ಈಗಾಗಲೇ ಒಬ್ಬರು ಮನೆ ಬಿಟ್ಟು ಹೋಗಿದ್ದಾರೆ. ಮನೆ ಬಿಟ್ಟು ಹೋಗುತ್ತೀನಿ ಎಂದವರನ್ನು ಸರಿ ಹೋಗಿ ಎಂದು ಕಳಿಸಿರುವುದು ಬಹುಷಃ ಇದೇ ಮೊದಲು ಎನಿಸುತ್ತದೆ. ರವಿ ಬೆಳಗೆರೆಯವರನ್ನು ಕಳಿಸಲಾಗಿತ್ತಾದರೂ ಅದನ್ನು ಟಿವಿಯಲ್ಲಿ ಪ್ರದರ್ಶಿಸಿರಲಿಲ್ಲ. ಇದೀಗ ಇದೇ ಸೀಸನ್ನ ಮತ್ತೊಬ್ಬ ಆಟಗಾರ ತ್ರಿವಿಕ್ರಮ್ ಸಹ ಈಗ ಮನೆ ಬಿಟ್ಟು ಹೋಗುವ ಮಾತನ್ನಾಡಿದ್ದಾರೆ. ಬಿಗ್ಬಾಸ್ ನಿರ್ಣಯದ ಬಗ್ಗೆ ತ್ರಿವಿಕ್ರಮ್ ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ, ಅಶಿಸ್ತು ಪ್ರದರ್ಶನ ಮಾಡಿದ್ದಾರೆಂಬ ಕಾರಣಕ್ಕೆ ಇದೀಗ ಸುದೀಪ್, ತ್ರಿವಿಕ್ರಮ್ ಅನ್ನು ಪ್ರಶ್ನೆ ಮಾಡಿದ್ದು, ತ್ರಿವಿಕ್ರಮ್ ಸಹ ಮನೆ ಬಿಟ್ಟು ಹೋಗುವೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 07, 2024 03:58 PM
Latest Videos