ಉತ್ತರ ಪ್ರದೇಶದ ಹುಲಿಗಳ ಸಂರಕ್ಷಣೆಗೆ ಮುಂದಾದ ಕರ್ನಾಟಕದ 4 ಆನೆಗಳು, ಸಾರಥ್ಯ ವಹಿಸಿದ ಮಣಿಕಂಠ ಆನೆ

ಉತ್ತರ ಪ್ರದೇಶದ ಪಿಲಿಭಿತ್ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಕರ್ನಾಟಕದ ಅರಣ್ಯ ಇಲಾಖೆಯಿಂದ 4 ಆನೆಗಳನ್ನು ತರಲಾಗಿದೆ. ಪಿಲಿಭಿತ್ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅನೇಕ ಹುಲಿಗಳು ಕಾಡಿನಿಂದ ನಾಡಿಗೆ ಬರುತ್ತಿದೆ. ಇದನ್ನು ತಡೆಯಲು ಕರ್ನಾಟಕದ

ಉತ್ತರ ಪ್ರದೇಶದ ಹುಲಿಗಳ ಸಂರಕ್ಷಣೆಗೆ ಮುಂದಾದ ಕರ್ನಾಟಕದ 4 ಆನೆಗಳು, ಸಾರಥ್ಯ ವಹಿಸಿದ ಮಣಿಕಂಠ ಆನೆ
ಆನೆ (ಪ್ರಾತಿನಿಧಿಕ ಚಿತ್ರ)
Edited By:

Updated on: Nov 10, 2022 | 3:50 PM

ಉತ್ತರ ಪ್ರದೇಶ : ಉತ್ತರ ಪ್ರದೇಶದ ಪಿಲಿಭಿತ್ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಕರ್ನಾಟಕದ ಅರಣ್ಯ ಇಲಾಖೆಯಿಂದ 4 ಆನೆಗಳನ್ನು ತರಲಾಗಿದೆ. ಅರಣ್ಯದ ಪಕ್ಕದ ಗ್ರಾಮೀಣ ಪ್ರದೇಶಗಳಲ್ಲಿ ಮನುಷ್ಯರು ಮತ್ತು ವನ್ಯಜೀವಿಗಳ ಸಂಘರ್ಷವನ್ನು ತಡೆಯಲು ಮತ್ತು ಅವುಗಳನ್ನು ರಕ್ಷಣೆಗಾಗಿ ಈ ನಾಲ್ಕು ಆನೆಗಳನ್ನು ಕರೆತರಲಾಗಿದ್ದು, ಇದರ ಜೊತೆಗೆ ಗಸ್ತು ಮೂಲಕ ನಿಗಾ ವಹಿಸಲಾಗುವುದು ಎಂದು ಪಿಟಿಆರ್ ಉಪ ನಿರ್ದೇಶಕ ನವೀನ್ ಖಂಡೇಲ್ವಾಲ್ ಹೇಳಿದ್ದಾರೆ.

ಖಂಡೇಲ್ವಾಲ್ ಪ್ರಕಾರ, ಮೀಸಲು ಪ್ರದೇಶದಿಂದ ಹೊರಬರುವ ಹುಲಿಗಳನ್ನು ರಕ್ಷಿಸಲು ಮತ್ತು ಕಾಡಿನೊಳಗೆ ಮತ್ತೆ ಅವುಗಳನ್ನು ಸಾಗಿಸಲು ಈ ಆನೆಗಳು ವಿಶೇಷ ಸಹಾಯವನ್ನು ನೀಡುತ್ತವೆ. ಈ ಆನೆಗಳ ಪಾಲನೆ, ಆಜ್ಞೆ ಮತ್ತು ಆಹಾರ, ಪಾನೀಯ ಮತ್ತು ನಿರ್ವಹಣೆಯಂತಹ ಇತರ ಅಗತ್ಯತೆಗಳನ್ನು ಒಳಗೊಂಡಂತೆ ನೋಡಿಕೊಳ್ಳಲು ಎಂಟು ಮಾವುತರನ್ನು ಕರೆತರಲಾಗಿದೆ ಎಂದು ಹೇಳಿದ್ದಾರೆ.

12 ವರ್ಷದ ನಿಸರ್ಗ, 12 ವರ್ಷದ ಮಣಿಕಂಠ, 7 ಮತ್ತು 14 ವರ್ಷ ವಯಸ್ಸಿನ ಇತರ ಎರಡು ಆನೆಗಳನ್ನು ತರಲಾಗಿದೆ. ಇವುಗಳ ಜೊತೆಗೆ 8 ಮಾವುತರನ್ನು ತರಲಾಗಿದೆ. ಅರಣ್ಯ ಸಚಿವ ಅರುಣ್ ಸಕ್ಸೇನಾ ಅವರು ಈ ಆನೆಗಳಿಗೆ ಸ್ವಾಗತಿಸಿ, ಪೂಜೆ ಸಲ್ಲಿಸಿದರು. ಆನೆಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಲಿವೆ ಎಂದು ಸಕ್ಸೇನಾ ಹೇಳಿದರು.

ಪಿಲಿಭಿತ್ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಆನೆಗಳಿಗೆ ಇಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಸಹಾಯ ಮಾಡುವಲ್ಲಿ ಕೆಲಸ ಮಾಡುತ್ತಾರೆ ಎಂದು ಖಂಡೇಲ್ವಾಲ್ ಹೇಳಿದರು.