AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶತ್ರುಗಳ ಮುಂದೆ ಮಂಡಿಯೂರದ ಏಕೈಕ ವ್ಯಕ್ತಿ ಟಿಪ್ಪು ಸುಲ್ತಾನ್, ಅವರ ಜಯಂತಿ ಮಾಡುತ್ತಿರುವುದು ನನಗೆ ಖುಷಿ ತಂದಿದೆ -ಹೆಚ್.ವಿಶ್ವನಾಥ್

ಟಿಪ್ಪು ಬಗ್ಗೆ ಬಹಳ ಜನ ಬೇರೆ ಬೇರೆ ಹೇಳುತ್ತಾರೆ. ಆದರೆ ಇತಿಹಾಸವನ್ನು ತಿರುಚಬಾರದು. ಕನ್ನಂಬಾಡಿ ಕಟ್ಟೆಯನ್ನ ಯದುವಂಶದವರು ಕಟ್ಟಿದರು ಅದಕ್ಕೆ ಭೂಮಿ ಪೂಜೆ ಮಾಡಿದವರು ಟಿಪ್ಪು.

ಶತ್ರುಗಳ ಮುಂದೆ ಮಂಡಿಯೂರದ ಏಕೈಕ ವ್ಯಕ್ತಿ ಟಿಪ್ಪು ಸುಲ್ತಾನ್, ಅವರ ಜಯಂತಿ ಮಾಡುತ್ತಿರುವುದು ನನಗೆ ಖುಷಿ ತಂದಿದೆ -ಹೆಚ್.ವಿಶ್ವನಾಥ್
ಹೆಚ್ ವಿಶ್ವನಾಥ, ಎಮ್ ಎಲ್ ಸಿ
TV9 Web
| Updated By: ಆಯೇಷಾ ಬಾನು|

Updated on:Nov 10, 2022 | 3:39 PM

Share

ಮೈಸೂರು: ಟಿಪ್ಪು ಜಯಂತಿ(Tipu Jayanti) ಆಚರಣೆ ಮಾಡುತ್ತಿರುವುದು ನನಗೆ ಖುಷಿ ತಂದಿದೆ. ಟಿಪ್ಪು ಕನ್ನಡ ವಿರೋಧಿ ಎಂದು ಬಿಂಬಿಸುವವರಿಗೆ ಇದು ತಕ್ಕ ಉತ್ತರ ಎಂದು ಮೈಸೂರಿನಲ್ಲಿ ಪರಿಷತ್​ನ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್(H Vishwanath) ಸಂತಸ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಎನ್​​.ಆರ್​.ಮೊಹಲ್ಲಾದ ಮಸೀದಿ ಮೈದಾನದಲ್ಲಿ ಇಂದು ಟಿಪ್ಪು ಜಯಂತಿ ಆಚರಿಸಲಾಯಿತು. ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ MLC ಹೆಚ್.ವಿಶ್ವನಾಥ್, ಟಿಪ್ಪು ಸುಲ್ತಾನ್​ನ ಸಾಧನೆಯನ್ನು ಕೊಂಡಾಡಿದ್ದಾರೆ. ಶತ್ರುಗಳ ಮುಂದೆ ಮಂಡಿಯೂರದ ಏಕೈಕ ವ್ಯಕ್ತಿ ಟಿಪ್ಪು ಸುಲ್ತಾನ್. ಕರ್ನಾಟಕದಲ್ಲಿ ಆರ್ಥಿಕ ವಲಯವನ್ನು ಉತ್ತಮ ಪಡಿಸಿದ್ದು ಟಿಪ್ಪು. ಮೈಸೂರು ಹುಲಿ ಎಂಬ ಬಿರುದು ಯಾರೋ ಮಹಾರಾಜರು ನೀಡಿಲ್ಲ. ಈ ನಾಡಿನ ಪ್ರಜೆಗಳು ಟಿಪ್ಪುಗೆ ಮೈಸೂರು ಹುಲಿ ಬಿರುದು ನೀಡಿದ್ದಾರೆ. ಟಿಪ್ಪು ಮತಾಂತರ ಮಾಡಿದ, ಹಲವರನ್ನು ಕೊಂದ ಎಂದು ಹೇಳುತ್ತಾರೆ. ಟಿಪ್ಪು ಮತಾಂತರ ಮಾಡಿಲ್ಲ, ಯಾರನ್ನೂ ಕೊಂದಿಲ್ಲ ಎಂದು ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ MLC ಹೆಚ್.ವಿಶ್ವನಾಥ್ ಹೇಳಿದರು.

ಟಿಪ್ಪು ಬಗ್ಗೆ ಬಹಳ ಜನ ಬೇರೆ ಬೇರೆ ಹೇಳುತ್ತಾರೆ. ಆದರೆ ಇತಿಹಾಸವನ್ನು ತಿರುಚಬಾರದು. ಕನ್ನಂಬಾಡಿ ಕಟ್ಟೆಯನ್ನ ಯದುವಂಶದವರು ಕಟ್ಟಿದರು ಅದಕ್ಕೆ ಭೂಮಿ ಪೂಜೆ ಮಾಡಿದವರು ಟಿಪ್ಪು. ಯಾರೋ ಏನೋ ಹೇಳಬಹುದು, ರೈಲಿನ ಹೆಸರನ್ನು ತೆಗೆಯಬಹುದು. ಆದರೆ ನಾಡಿನ ಜನರ ಮನಸ್ಸಿನಿಂದ ಯಾರು ತೆಗೆಯಲು ಸಾಧ್ಯವಾಗದು. ಟಿಪ್ಪು ಆಡಳಿತ, ಧೈರ್ಯ ಶೌರ್ಯ, ಕಲ್ಯಾಣ ಕಾರ್ಯಕ್ರಮಗಳನ್ನು ಯಾರು ಅಲ್ಲೆಗೆಳೆಯಲು ಸಾಧ್ಯವಾಗದು. ಮೈಸೂರಿನ ಸಂಸ್ಥಾನದಲ್ಲಿ ಅಂದು ಎಷ್ಟು ಜನಸಂಖ್ಯೆ ಇತ್ತು? 70 ಸಾವಿರ ಜನರನ್ನು ಕೊಂದ, ಮತಾಂತರ ಮಾಡಿದ ಎಂದು ಹೇಳುತ್ತಾರೆ. ಹಾಗಾದರೆ ಅಂದು ಜನಸಂಖ್ಯೆ ಎಷ್ಟಿತ್ತು? ಶೃಂಗೇರಿ ಮಠ ಸಂಕಷ್ಟದಲ್ಲಿದ್ದಾಗ ಧರ್ಮಧಿಕಾರಿಗಳು ಟಿಪ್ಪುಗೆ ಪತ್ರ ಬರೆಯುತ್ತಾರೆ. ಅಂದು ಟಿಪ್ಪು ಮಠವನ್ನು ರಕ್ಷಣೆ ಮಾಡುತ್ತಾರೆ. ಟಿಪ್ಪು ಧರ್ಮದ ಪರವೂ ಆಡಳಿತ ಪರವೂ ಇದ್ದರು. ಮಹಿಳೆಯರಿಗೆ ಕೇರಳದಲ್ಲಿ ವಸ್ತ್ರ ಸಂಹಿತೆಯನ್ನ ಜಾರಿಗೆ ತಂದಿದ್ದು ಟಿಪ್ಪು ಸುಲ್ತಾನ್ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಟಿಪ್ಪು ಜಯಂತಿಯ ಶುಭಾಶಯ ಕೋರಿದ ಹೆಚ್​.ಡಿ.ದೇವೇಗೌಡ

ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ವೀರ ಪರಾಕ್ರಮಿ ಟಿಪ್ಪು ಸುಲ್ತಾನ್​ಗೆ ನನ್ನ ಗೌರವಪೂರ್ವಕ ನಮನ ಅರ್ಪಿಸುತ್ತೇನೆ. ದೇಶಪ್ರೇಮ, ಮಾದರಿ ಆಡಳಿತಕ್ಕೆ ಟಿಪ್ಪು ಹೆಸರುವಾಸಿಯಾಗಿದ್ದರು. ಇಂದು ಟಿಪ್ಪುರನ್ನು ಸ್ಮರಿಸೋಣ ಎಂದು H.D.ದೇವೇಗೌಡ ಟ್ವೀಟ್​​ ಮಾಡಿದ್ದಾರೆ.

Published On - 3:28 pm, Thu, 10 November 22

ಪ್ರವಾಹದಲ್ಲಿ ಸಿಲುಕಿದ್ದ ಶಾಲಾ ಮಕ್ಕಳನ್ನು ಕಾಪಾಡಿದ ಮುಂಬೈ ಪೊಲೀಸರು
ಪ್ರವಾಹದಲ್ಲಿ ಸಿಲುಕಿದ್ದ ಶಾಲಾ ಮಕ್ಕಳನ್ನು ಕಾಪಾಡಿದ ಮುಂಬೈ ಪೊಲೀಸರು
ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ
ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ
ಧರ್ಮಸ್ಥಳ ಪ್ರಕರಣ ತನಿಖೆಯಲ್ಲಿ ಏನೇನಾಯ್ತು? ಗೃಹ ಸಚಿವ ಕೊಟ್ಟ ಮಾಹಿತಿ
ಧರ್ಮಸ್ಥಳ ಪ್ರಕರಣ ತನಿಖೆಯಲ್ಲಿ ಏನೇನಾಯ್ತು? ಗೃಹ ಸಚಿವ ಕೊಟ್ಟ ಮಾಹಿತಿ
ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?
ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?
ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು
ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು
ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಎಲ್ಲರಿಗೂ ಇದೆ ಮಾರಿ ಹಬ್ಬ
ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಎಲ್ಲರಿಗೂ ಇದೆ ಮಾರಿ ಹಬ್ಬ
ದಾರಿಯುಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮುಖ ಕಚ್ಚಿದ ಬೀದಿ ನಾಯಿ
ದಾರಿಯುಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮುಖ ಕಚ್ಚಿದ ಬೀದಿ ನಾಯಿ
ಬೆಂಗಳೂರು: ಮೂರು ತಿಂಗಳಲ್ಲಿ ಮತ್ತೆ ಹೆಬ್ಬಾಳ ಫ್ಲೈಓವರ್ ವಿಸ್ತರಣೆ
ಬೆಂಗಳೂರು: ಮೂರು ತಿಂಗಳಲ್ಲಿ ಮತ್ತೆ ಹೆಬ್ಬಾಳ ಫ್ಲೈಓವರ್ ವಿಸ್ತರಣೆ
ಸಿಎಂ ವಿರುದ್ಧ ಕೊಲೆ ಮಾಡಿದ ಆರೋಪ, ಎಸ್​ಐಟಿ ರಚಿಸ್ತೀರಾ: ಅಶೋಕ್ ಪ್ರಶ್ನೆ
ಸಿಎಂ ವಿರುದ್ಧ ಕೊಲೆ ಮಾಡಿದ ಆರೋಪ, ಎಸ್​ಐಟಿ ರಚಿಸ್ತೀರಾ: ಅಶೋಕ್ ಪ್ರಶ್ನೆ