ಕನ್ನಡ ರಾಜ್ಯೋತ್ಸವ: ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕನ್ನಡ ಧ್ವಜಾರೋಹಣ

ಕನ್ನಡ ರಾಜ್ಯೋತ್ಸವ: ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕನ್ನಡ ಧ್ವಜಾರೋಹಣ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 01, 2023 | 10:48 AM

ಹಿರಿಯ ನಾಯಕ ದೇಶಪಾಂಡೆ ಸ್ವಾತಂತ್ರ್ಯ ಹೋರಾಟಗಾರರಂತೆ ಕಾಣುತ್ತಿರುವುದು ಮನಸ್ಸಿಗೆ ಮುದ ನೀಡುವ ಅಂಶವಾಗಿದೆ. ವೇದಿಕೆಯ ಮೇಲೆ ಒಂದು ಸೂಕ್ಷ್ಮವನ್ನು ಗಮನಿಸಿ. ದೇಶಪಾಂಡೆ ಅವರು ಮೇಲೆ ಬರುವವರೆಗೆ ಸಿದ್ದರಾಮಯ್ಯ ಧ್ವಜಹಾರಿಸಲ್ಲ. ಧ್ವಜಾರೋಹಣದ ನಂತರ ಸುಮಾರು 10,000 ಶಾಲಾ ಮಕ್ಕಳಿಂದ ಪಥಸಂಚಲನ ನಡೆಯಿತು.

ಬೆಂಗಳೂರು: ನಾಡಿನೆಲ್ಲೆಡೆ ಇವತ್ತು 68 ನೇ ಕನ್ನಡ ರಾಜ್ಯೋತ್ಸವದ (Kannada Rajyotsava) ಸಂಭ್ರಮ, ಕನ್ನಡಿಗರ ಮನೆಗಳಲ್ಲಿ ಸಿಹಿತಿಂಡಿಗಳು ತಯಾರಾಗುತ್ತಿವೆ, ತಾಯಿ ಭುವನೇಶ್ವರಿಗೆ (goddess Bhuvaneshwari) ಪೂಜೆ ಸಲ್ಲಿಸಲಗುತ್ತಿದೆ, ರಸ್ತೆ-ಬೀದಿಗಳಲ್ಲಿ ಜನ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಇತ್ತ ಬೆಂಗಳೂರಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕಂಠೀರವ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಮಾಡಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕರಾದ ರಿಜ್ವಾನ್ ಅರ್ಷದ್ ಮತ್ತು ಆರ್ ವಿ ದೇಶಪಾಂಡೆ ಅವರೊಂದಿಗೆ ಹಲವಾರು ಗಣ್ಯರು ಭಾಗಿಯಾಗಿದ್ದರು. ಹಿರಿಯ ನಾಯಕ ದೇಶಪಾಂಡೆ ಸ್ವಾತಂತ್ರ್ಯ ಹೋರಾಟಗಾರರಂತೆ ಕಾಣುತ್ತಿರುವುದು ಮನಸ್ಸಿಗೆ ಮುದ ನೀಡುವ ಅಂಶವಾಗಿದೆ. ವೇದಿಕೆಯ ಮೇಲೆ ಒಂದು ಸೂಕ್ಷ್ಮವನ್ನು ಗಮನಿಸಿ. ದೇಶಪಾಂಡೆ ಅವರು ಮೇಲೆ ಬರುವವರೆಗೆ ಸಿದ್ದರಾಮಯ್ಯ ಧ್ವಜಹಾರಿಸಲ್ಲ. ಧ್ವಜಾರೋಹಣದ ನಂತರ ಸುಮಾರು 10,000 ಶಾಲಾ ಮಕ್ಕಳಿಂದ ಪಥಸಂಚಲನ ನಡೆಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ