ಬಿಡಿಎಗೆ ನಕಲಿ ದಾಖಲೆ ಸಲ್ಲಿಸಿ 70 ಕೋಟಿ ರೂ ಪರಿಹಾರಕ್ಕೆ ಪ್ಲ್ಯಾನ್: ಐವರು ಆರೋಪಿಗಳ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 09, 2024 | 4:19 PM

ಬಿಡಿಎಗೆ ನಕಲಿ ದಾಖಲೆ ಸಲ್ಲಿಸಿ 70 ಕೋಟಿ ರೂ. ಪರಿಹಾರಕ್ಕೆ ಮುಂದಾಗಿದ್ದ ಐವರು ಆರೋಪಿಗಳನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ವ್ಯಕ್ತಿಗಳು ಮತ್ತು ಅಧಿಕಾರಿಗಳು ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಸದ್ಯ ಬಿಡಿಎ ವಿಚಕ್ಷಣಾ ದಳದ DySP ಪಿ.ಮಲ್ಲೇಶ್ ದೂರು ಆಧರಿಸಿ ಐವರನ್ನು ಬಂಧಿಸಲಾಗಿದೆ.

ಬಿಡಿಎಗೆ ನಕಲಿ ದಾಖಲೆ ಸಲ್ಲಿಸಿ 70 ಕೋಟಿ ರೂ ಪರಿಹಾರಕ್ಕೆ ಪ್ಲ್ಯಾನ್: ಐವರು ಆರೋಪಿಗಳ ಬಂಧನ
ಬಿಡಿಎಗೆ ನಕಲಿ ದಾಖಲೆ ಸಲ್ಲಿಸಿ 70 ಕೋಟಿ ರೂ. ಪರಿಹಾರಕ್ಕೆ ಪ್ಲ್ಯಾನ್: ಐವರು ಆರೋಪಿಗಳ ಬಂಧನ
Follow us on

ಬೆಂಗಳೂರು, ಅಕ್ಟೋಬರ್​ 9: ಬಿಡಿಎಗೆ (BDA) ನಕಲಿ ದಾಖಲೆ ನೀಡಿ ಪರಿಹಾರ ಪಡೆಯಲು ಮುಂದಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡಿಎ ವಿಚಕ್ಷಣ ಡಿವೈಎಸ್ಪಿ ಪಿ.ಮಲ್ಲೇಶ್ ನೀಡಿದ ದೂರಿನ ಮೇರೆಗೆ ಶೇಷಾದ್ರಿ ಪುರಂ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಶ್ರೀನಿವಾಸ್​, ನಾಗರಾಜ್​, ರವಿಕುಮಾರ್​, ಭರತ್​​, ಸ್ವಾಮಿ ಬಂಧಿತ ಆರೋಪಿಗಳು. ನಾಗರಾಜ್​ನನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಮಾಡಲಾಗುತ್ತಿದ್ದು, ಉಳಿದ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿಗೆ ರವಾನೆ ಮಾಡಲಾಗಿದೆ.

ಆರೋಪಿಗಳು ನಕಲಿ ದಾಖಲೆ ಸಲ್ಲಿಸಿ 70 ಕೋಟಿ ರೂ. ಪರಿಹಾರಕ್ಕೆ ಮುಂದಾಗಿದ್ದರು. ಖಾಸಗಿ ವ್ಯಕ್ತಿಗಳು ಮತ್ತು ಅಧಿಕಾರಿಗಳು ಸೇರಿದಂತೆ ಹಲವರ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಿಡಿಎ, ಕಂದಾಯ, ತಹಶೀಲ್ದಾರ್, ಭೂಸ್ವಾಧೀನ ಸೇರಿದಂತೆ ಸಂಬಂಧಪಟ್ಟ ಕೆಲ ಅಧಿಕಾರಿಗಳಿಗೆ ಪೊಲೀಸರಿಂದ ನೋಟಿಸ್​ ಜಾರಿ ಮಾಡಲಾಗಿದೆ. ಕೆಲ ಅಧಿಕಾರಿಗಳ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಪೊಲೀಸರಿಂದ ಸಂಪರ್ಕಕ್ಕೆ ಪ್ರಯತ್ನಿಸಲಾಗುತ್ತಿದೆ.

ಇದನ್ನೂ ಓದಿ: ಬಹುಕೋಟಿ ಬಿಟ್ ಕಾಯಿನ್ ಹಗರಣ ಕೇಸ್​: ಡಿವೈಎಸ್​ಪಿ ಶ್ರೀಧರ್ ಪೂಜಾರಿ ಬಂಧಿಸಿದ ಎಸ್​ಐಟಿ

ಆರೋಪಿಗಳು ಮೂಲ ಮಾಲೀಕರ ಸಂಬಂಧಿಕರೆಂದು ಹೇಳಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದರು. ಚಲ್ಲಘಟ್ಟದ ಒಟ್ಟು ಆರು ಎಕರೆ ಜಮೀನಿಗೆ ಸಂಬಂಧಪಟ್ಟಂತೆ ಮೂಡ್ಲಪ್ಪ ಎಂಬುವವರಿಗೆ ಸೇರಿದ ಆಸ್ತಿಗೆ ಸುಳ್ಳು ದಾಖಲೆ ಸಲ್ಲಿಸಿ ಪರಿಹಾರಕ್ಕೆ ಯತ್ನಿಸಿದ್ದರು.

ಅಧಿಕಾರಿಗಳ ವಿರುದ್ಧ ಎಫ್​ಐಆರ್

ಪುಟ್ಟಮ್ಮ, ಗಂಗಮ್ಮ, ಉಮೇಶ್, ಲಕ್ಷ್ಮಮ್ಮ, ಶ್ರೀನಿವಾಸ್, ಸಂತೋಷ್, ರವಿಕುಮಾರ್, ಭರತ್, ಸುನೀತ್, ಆಶಾ, ಸ್ವಾಮಿ, ನಾಗರಾಜ್ ಎಂಬುವವರ ವಿರುದ್ಧ ಆರೋಪ ಮಾಡಲಾಗಿತ್ತು. ದಾಖಲೆಗಳ ಪರಿಶೀಲನೆ ನಡೆಸದೆ ಕರ್ತವ್ಯಲೋಪ ಎಸಗಿದ್ದಕ್ಕಾಗಿ ಅಧಿಕಾರಿಗಳ ಮೇಲೂ ದೂರು ನೀಡಲಾಗಿದೆ.

ಇದನ್ನೂ ಓದಿ: ಸಾಮಾಜಿಕ ಕಾರ್ಯಕರ್ತೆಗೆ ಲೈಂಗಿಕ ದೌರ್ಜನ್ಯ: ವಿನಯ್ ಕುಲಕರ್ಣಿ ವಿರುದ್ಧ ಎಫ್​ಐಆರ್​

ಸುಧಾ, ಶಿವಣ್ಣ, ರವಿಪ್ರಕಾಶ್ ಸೇರಿದಂತೆ ಕೆಲ ಕಂದಾಯ ಮತ್ತು ಬಿಡಿಎ ಅಧಿಕಾರಿಗಳ ವಿರುದ್ಧ ಬಿಡಿಎ ವಿಚಕ್ಷಣ ದಳದ ಡಿವೈಎಸ್​ಪಿ ಮಲ್ಲೇಶ್ ನೀಡಿದ ದೂರಿನ ಮೇಲೆ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.