ಮುಡಾ ಹಗರಣ: ಸಾಕಷ್ಟು ಜಟಾಪಟಿ ನಡುವೆ ರಾಜ್ಯಪಾಲರ ಭೇಟಿಯಾದ ಸಿದ್ದರಾಮಯ್ಯ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣ ಆರೋಪ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್​ಗೆ ಇತ್ತೀಚೆಗೆ ಅನುಮತಿ ನೀಡಿದ್ದರು. ಇದು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚನಕ್ಕೆ ಕಾರಣವಾಗಿತ್ತು. ಸಾಕಷ್ಟು ಜಟಾಪಟಿ ನಡುವೆ ಇದೀಗ ರಾಜ್ಯಪಾಲರ ಥಾವರ್​ಚಂದ್ ಗೆಹ್ಲೋಟ್​ರನ್ನು ಸಿದ್ದರಾಮಯ್ಯ ಭೇಟಿಯಾಗಿದ್ದಾರೆ.

ಮುಡಾ ಹಗರಣ: ಸಾಕಷ್ಟು ಜಟಾಪಟಿ ನಡುವೆ ರಾಜ್ಯಪಾಲರ ಭೇಟಿಯಾದ ಸಿದ್ದರಾಮಯ್ಯ
ಮುಡಾ ಹಗರಣ: ಸಾಕಷ್ಟು ಜಟಾಪಟಿ ನಡುವೆ ರಾಜ್ಯಪಾಲರ ಭೇಟಿಯಾದ ಸಿದ್ದರಾಮಯ್ಯ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Oct 09, 2024 | 3:48 PM

ಬೆಂಗಳೂರು, ಅಕ್ಟೋಬರ್​​ 09: ಮುಡಾ ಪ್ರಕರಣದ ತನಿಖೆ ಚುರುಕುಗೊಂಡಿದೆ. ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಆಯೋಗ ದಾಖಲೆ ಕೆದಕೋದಕ್ಕೆ ಮುಂದಾಗಿದೆ. ಇದೆಲ್ಲಾ ಜಟಾಪಟಿ ನಡುವೆ ಸಿಎಂ ಸಿದ್ದರಾಮಯ್ಯ (Siddaramaiah) ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ರನ್ನು ಭೇಟಿ ನೀಡಿದ್ದಾರೆ. ಬೆಂಗಳೂರಿಗೆ ಮಾಲ್ಡೀವ್ಸ್ ಅಧ್ಯಕ್ಷರ ಭೇಟಿ ಹಿನ್ನೆಲೆಯಲ್ಲಿ ರಾಜಭವನದಲ್ಲಿ ಔತಣಕೂಟ ಆಯೋಜಿಸಲಾಗಿತ್ತು. ಹೀಗಾಗಿ ರಾಜ್ಯಪಾಲರ ಆಹ್ವಾನ ಮೇರೆಗೆ ರಾಜಭವನಕ್ಕೆ ತೆರಳಿದ್ದ ಸಿದ್ದರಾಮಯ್ಯ ಈ ವೇಳೆ ಭೇಟಿ ಮಾಡಿ ನಗುಮುಖದಿಂದಲೇ ಕೈಕುಲುಕಿ ಕುಶಲೋಪರಿ ವಿಚಾರಿಸಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣ ಆರೋಪ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್​ಗೆ ಇತ್ತೀಚೆಗೆ ಅನುಮತಿ ನೀಡಿದ್ದರು. ಇದು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚನಕ್ಕೆ ಕಾರಣವಾಗಿತ್ತು. ಕಾಂಗ್ರೆಸ್​ ನಾಯಕರು ರಾಜ್ಯಪಾಲರ ವಿರುದ್ಧ ಕಿಡಿಕಾರಿದ್ದರು. ಇದನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಬಿಜೆಪಿ ಹೋದಲ್ಲಿ‌ ಬಂದಲ್ಲಿ ಸಿದ್ದರಾಮಯ್ಯರನ್ನೇ ಗುರಿಯಾಗಿಸಿಕೊಂಡು ವಾಗ್ದಾಳಿ ಮಾಡುತ್ತಿದ್ದರು.

ಇದನ್ನೂ ಓದಿ: ಸಿಎಂರನ್ನು ನಾನು ಭೇಟಿಯಾಗದೆ ವಿರೋಧ ಪಕ್ಷದವರು ಭೇಟಿಯಾಗ್ತಾರಾ? ಡಿಕೆ ಶಿವಕುಮಾರ್

ಬಳಿಕ ಎಚ್ಚೆತ್ತುಕೊಂಡ ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಷನ್ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದರು. ಆ ಮೂಲಕ ಕಾನೂನು ಹೋರಾಟಕ್ಕೆ ಮುಂದಾದರು. ಕಾನುನೂ ತಜ್ಞರೊಂದಿಗೆ ಸಮಾಲೋಚನೆ ಮಾಡಿದ್ದರು. ಬಳಿಕ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಜನಪ್ರತಿನಿಧಿಗಳ ನ್ಯಾಯಾಲಯ ಮೈಸೂರು ಲೋಕಾಯುಕ್ತಕ್ಕೆ ಆದೇಶಿಸಿತ್ತು. ಕೋರ್ಟ್​ ಆದೇಶದ ಮೇರೆಗೆ ಮೈಸೂರು ಲೋಕಾಯುಕ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್​ಐಆರ್ ಕೂಡ ದಾಖಲಾಗಿದೆ.

ಇದನ್ನೂ ಓದಿ: ಸಿಎಂ ಮನೆಗೆ ಡಿಸಿಎಂ ಭೇಟಿ, ಕುತೂಹಲ ಮೂಡಿಸಿದ ಡಿಕೆ ಶಿವಕುಮಾರ್ ಆಗಮನ

ಮುಡಾ ಹಗರಣದಲ್ಲಿ ಇಡಿ ಎಂಟ್ರಿ ಬಳಿಕ ಪಕ್ಷದಲ್ಲಿ ಕೆಲ ಬೆಳವಣಿಗೆಗಳಾಗುತ್ತಿವೆ. ಸಿಎಂ ಆಗಿ ಸಿದ್ದರಾಮಯ್ಯ ಅವರು ಇರ್ತಾರಾ ಅಥವಾ ಇಲ್ವಾ ಅನ್ನೋ ಗುಮಾನಿ ಹಿಂದಿಗಿಂತ್ಲೂ ತುಸು ಜೋರಾಗಿಯೇ ಇದೆ. ಇದೇ ವಿಚಾರಕ್ಕೆ ಕಾಂಗ್ರೆಸ್​ ಕೋಟೆಯೊಳಗೆ ರಹಸ್ಯ ಸಭೆಗಳು ಆಗುತ್ತಿರುವ ಮಾಹಿತಿ ಇದೆ. ಹೀಗಾಗಿ ಕಾಂಗ್ರೆಸ್​ನಲ್ಲಿ ಯಾವುದೇ ಅಸಮಾಧಾನಗಳು ಭುಗಿಲೇಳದಂತೆ ಎಚ್ಚರಿಕೆ ವಹಿಸಲು, ಪ್ರತಿನಿತ್ಯದ ಚಟುವಟಿಕೆಗಳ ಮೇಲೆ ವರಿಷ್ಠರು ಕಣ್ಣಿಟ್ಟಿದ್ದಾರೆ.

ವರದಿ: ಈರಣ್ಣ ಬಸವ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:10 pm, Wed, 9 October 24

ದರ್ಶನ್-ಪವಿತ್ರಾ ಜಾಮೀನು ಅರ್ಜಿ ವಿಚಾರಣೆ LIVE
ದರ್ಶನ್-ಪವಿತ್ರಾ ಜಾಮೀನು ಅರ್ಜಿ ವಿಚಾರಣೆ LIVE
ಜೈಲಿಗೆ ಬಂದ ಡಾಕ್ಟರ್​ಗಳಲ್ಲಿ ಒಬ್ಬರೂ ಪರಿಣಿತರಲ್ಲ, ಎಲ್ಲರೂ ಜ್ಯೂನಿಯರ್​ಗಳು
ಜೈಲಿಗೆ ಬಂದ ಡಾಕ್ಟರ್​ಗಳಲ್ಲಿ ಒಬ್ಬರೂ ಪರಿಣಿತರಲ್ಲ, ಎಲ್ಲರೂ ಜ್ಯೂನಿಯರ್​ಗಳು
ರಿಹರ್ಸಲ್​​ನಲ್ಲಿ ನಿಶಾನೆ ಆನೆಯಾಗಿ ಮುಂಚೂಣಿಯಲ್ಲಿ ಸಾಗಿದ ಧನಂಜಯ
ರಿಹರ್ಸಲ್​​ನಲ್ಲಿ ನಿಶಾನೆ ಆನೆಯಾಗಿ ಮುಂಚೂಣಿಯಲ್ಲಿ ಸಾಗಿದ ಧನಂಜಯ
ಸಿಎಂ ಹುದ್ದೆ ರೇಸಲ್ಲಿ ಸತೀಶ್ ಜಾರಕಿಹೊಳಿ ಇದ್ದರೆ ಶಿವಕುಮಾರ್ ಎಲ್ಹೋದರು?
ಸಿಎಂ ಹುದ್ದೆ ರೇಸಲ್ಲಿ ಸತೀಶ್ ಜಾರಕಿಹೊಳಿ ಇದ್ದರೆ ಶಿವಕುಮಾರ್ ಎಲ್ಹೋದರು?
ಸಿಎಂ ಹುದ್ದೆಗೆ ಸತೀಶ್ ಹೆಸರು ಪ್ರಸ್ತಾಪ ಯಾಕೆ? ಅವರನ್ನೇ ಕೇಳಿ: ಪರಮೇಶ್ವರ್
ಸಿಎಂ ಹುದ್ದೆಗೆ ಸತೀಶ್ ಹೆಸರು ಪ್ರಸ್ತಾಪ ಯಾಕೆ? ಅವರನ್ನೇ ಕೇಳಿ: ಪರಮೇಶ್ವರ್
ಮಹದೇವಪ್ಪ ನಿವಾಸದಲ್ಲಿನ ರಹಸ್ಯ ಸಭೆಯ ಮಾಹಿತಿ ಬಿಚ್ಚಿಟ್ಟ ಜಿ ಪರಮೇಶ್ವರ
ಮಹದೇವಪ್ಪ ನಿವಾಸದಲ್ಲಿನ ರಹಸ್ಯ ಸಭೆಯ ಮಾಹಿತಿ ಬಿಚ್ಚಿಟ್ಟ ಜಿ ಪರಮೇಶ್ವರ
‘ಯಾವ ಸೀಮೆಯ ಕ್ಯಾಪ್ಟನ್ ನೀವು?’; ಹಂಸಾ ವಿರುದ್ಧ ಸಿಡಿದೆದ್ದ ಚೈತ್ರಾ
‘ಯಾವ ಸೀಮೆಯ ಕ್ಯಾಪ್ಟನ್ ನೀವು?’; ಹಂಸಾ ವಿರುದ್ಧ ಸಿಡಿದೆದ್ದ ಚೈತ್ರಾ
ನವರಾತ್ರಿಯ 7ನೇ ದಿನ ಕಾಲರಾತ್ರಿ ದೇವಿ ಆರಾಧನೆಯ ಮಹತ್ವ ತಿಳಿಯಿರಿ
ನವರಾತ್ರಿಯ 7ನೇ ದಿನ ಕಾಲರಾತ್ರಿ ದೇವಿ ಆರಾಧನೆಯ ಮಹತ್ವ ತಿಳಿಯಿರಿ
ನವರಾತ್ರಿ 7ನೇ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ನವರಾತ್ರಿ 7ನೇ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಅರಮನೆ ಮುಂದೆ ಕಣ್ಮನ ಸೆಳೆದ ಪೊಲೀಸ್ ಬ್ಯಾಂಡ್ ವೀಕ್ಷಿಸಿದ ರಾಜವಂಶಸ್ಥರು
ಅರಮನೆ ಮುಂದೆ ಕಣ್ಮನ ಸೆಳೆದ ಪೊಲೀಸ್ ಬ್ಯಾಂಡ್ ವೀಕ್ಷಿಸಿದ ರಾಜವಂಶಸ್ಥರು