ರಾಜ್ಯದಲ್ಲಿ 24 ಗಂಟೆಗಳಲ್ಲಿ 84 ಜನ ಕೊವಿಡ್-19 ಸೋಂಕಿಗೆ ಬಲಿ
ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಿಂದ ಇಂದು ಸಾಯಂಕಾಲ ದೊರೆತಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಸೋಮವಾರದಂದು ಕೊವಿಡ್-19 ಸೋಂಕಿಗೆ 84 ಜನ ಬಲಿಯಾಗಿದ್ದು ಹೊಸದಾಗಿ 7,051 ಜನರಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಇದುವರೆಗೆ ಮಹಾಮಾರಿಯಿಂದ ಮರಣಿಸಿದವರ ಸಂಖ್ಯೆ 9,370 ತಲುಪಿದ್ದು ಒಟ್ಟು ಸೋಂಕಿತರ ಸಂಖ್ಯೆ 6,47,712ಕ್ಕೇರಿದೆ. ಅವರ ಪೈಕಿ 5,22,846 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರೆ ಮಿಕ್ಕಿದ 1,15,477 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೆಯೇ, ಬೆಂಗಳೂರಲ್ಲಿ ಇಂದು ಕೊವಿಡ್-19 ಸೋಂಕಿಗೆ 34 ಜನ […]

ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಿಂದ ಇಂದು ಸಾಯಂಕಾಲ ದೊರೆತಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಸೋಮವಾರದಂದು ಕೊವಿಡ್-19 ಸೋಂಕಿಗೆ 84 ಜನ ಬಲಿಯಾಗಿದ್ದು ಹೊಸದಾಗಿ 7,051 ಜನರಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಇದುವರೆಗೆ ಮಹಾಮಾರಿಯಿಂದ ಮರಣಿಸಿದವರ ಸಂಖ್ಯೆ 9,370 ತಲುಪಿದ್ದು ಒಟ್ಟು ಸೋಂಕಿತರ ಸಂಖ್ಯೆ 6,47,712ಕ್ಕೇರಿದೆ. ಅವರ ಪೈಕಿ 5,22,846 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರೆ ಮಿಕ್ಕಿದ 1,15,477 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಾಗೆಯೇ, ಬೆಂಗಳೂರಲ್ಲಿ ಇಂದು ಕೊವಿಡ್-19 ಸೋಂಕಿಗೆ 34 ಜನ ಸಾವಿಗೀಡಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ ಹೊಸದಾಗಿ 2,189 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ರಾಜಧಾನಿಯಲ್ಲಿ ಕೊವಿಡ್-19 ವ್ಯಾಧಿಗೆ ಈವರೆಗೆ 3,101 ಜನರ ಸಾವನ್ನಪ್ಪಿದ್ದು ಸೋಂಕು ಪೀಡಿತರ ಸಂಖ್ಯೆ 2,52,229 ತಲುಪಿದೆ. ಅವರ ಪೈಕಿ 1,95,015 ಗುಣಮುಖರಾಗಿದ್ದಾರೆ ಮತ್ತು ಉಳಿದ 54,112 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ.




