ಕೊರೊನಾ ವಿರುದ್ಧ ಹೋರಾಡಿ ಗೆದ್ದ 88 ವರ್ಷದ ವೃದ್ಧೆ; ಹೊನ್ನಮ್ಮನ ಆತ್ಮಸ್ಥೈರ್ಯಕ್ಕೆ ವೈದ್ಯರಿಂದ ಮೆಚ್ಚುಗೆ
ಅಜ್ಜಿ ಚಿಕಿತ್ಸೆಗೆ ಸ್ಪಂದಿಸಿ ಇಂದು ಡಿಸ್ಚಾಜ್೯ ಆಗಿದ್ದಾರೆ. ವೈದ್ಯರ ಸತತ ಪ್ರಯತ್ನ ಮತ್ತು ಹೊನ್ನಮ್ಮನವರ ಧೈರ್ಯದಿಂದ 9 ದಿನಗಳ ನಂತರ ಕೊರೊನಾ ನೆಗೆಟಿವ್ ಬಂದಿದೆ. ಸತತ ವೈದ್ಯಕೀಯ ಚಿಕಿತ್ಸೆ ಹಾಗೂ ಇಳಿಯ ವಯಸ್ಸಿನಲ್ಲೂ ಕೂಡಾ ವೃದ್ಧೆ ತೋರಿದ ಆತ್ಮಸ್ಥೈರ್ಯ ಕೊವಿಡ್ ಅನ್ನು ಸೋಲಿಸುವಂತೆ ಮಾಡಿದೆ ಎಂದು ವೃದ್ಧೆಗೆ ಚಿಕಿತ್ಸೆ ನೀಡಿದ ವೈದ್ಯ ಡಾ.ದೀಪಕ ಕಲಾದಗಿ ತಿಳಿಸಿದ್ದಾರೆ.
ಹುಬ್ಬಳ್ಳಿ: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಸಾವು-ನೋವಿನ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದೆ. ಕೊರೊನಾ ಸೋಂಕು ಒಮ್ಮೆ ತಗುಲಿದರೆ ಮತ್ತೆ ಗುಣಮುಖರಾಗುವುದು ಬಹಳ ಕಷ್ಟ ಎನ್ನುವ ಮಾತು ಇತ್ತಿಚೇಗೆ ಕೇಳಿ ಬರುತ್ತಿದೆ. ಆದರೆ ಹುಬ್ಬಳ್ಳಿಯಲ್ಲಿ ಮಾತ್ರ ಜನರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಸನ್ನಿವೇಶವೊಂದು ಎದುರಾಗಿದ್ದು, ಕೊರೊನಾ ಸೋಂಕಿಗೆ ದೃತಿಗೆಡದೆ ಹೋರಾಡಿ ಎಂಬ ಸಂದೇಶ ರವಾನೆಯಾಗಿದೆ. ಇದಕ್ಕೆ ಕಾರಣ 88 ರ ವೃದ್ಧೆಯೊಬ್ಬರು ಕೊರೊನಾ ವಿರುದ್ಧ ಹೋರಾಡಿ ಗೆದ್ದು ಹೊಸ ಭರವಸೆ ಮೂಡಿಸಿದ್ದಾರೆ.
ಹುಬ್ಬಳ್ಳಿಯ ಕೇಶ್ವಾಪುರ ಮೂಲದ ಈ ಅಜ್ಜಿಯ ಹೆಸರು ಹೊನ್ನಮ್ಮ. ಕಳೆದ ಒಂಬತ್ತು ದಿನಗಳ ಹಿಂದೆ ಹೊನ್ನಮ್ಮನವರಿಗೆ ಕೊರೊನಾ ಧೃಡಪಟ್ಟಿತ್ತು. ಮೊದಲೆ 88 ವರ್ಷ ವಯಸ್ಸಾಗಿದ್ದರಿಂದ ಸಹಜವಾಗೇ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದರು. ಅಲ್ಲದೆ ಹುಬ್ಬಳ್ಳಿಯ ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಿದಾಗ ಹಿರಿಯ ಜೀವದ ಆಕ್ಸಿಜನ್ ಲೆವಲ್ 85 ಕ್ಕೆ ಬಂದಿತ್ತು. ಆಸ್ಪತ್ರೆಯ ವೈದ್ಯರಾದ ದೀಪಕ ಕಲಾದಾಗಿ ಎರಡೂ ದಿನಗಳ ಕಾಲ ಹೊನ್ನಮ್ಮನವರನ್ನು ವೆಂಟಿಲೆಟರ್ಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಿದ್ದರು.
ಅಜ್ಜಿ ಚಿಕಿತ್ಸೆಗೆ ಸ್ಪಂದಿಸಿ ಇಂದು ಡಿಸ್ಚಾಜ್೯ ಆಗಿದ್ದಾರೆ. ವೈದ್ಯರ ಸತತ ಪ್ರಯತ್ನ ಮತ್ತು ಹೊನ್ನಮ್ಮನವರ ಧೈರ್ಯದಿಂದ 9 ದಿನಗಳ ನಂತರ ಕೊರೊನಾ ನೆಗೆಟಿವ್ ಬಂದಿದೆ. ಸತತ ವೈದ್ಯಕೀಯ ಚಿಕಿತ್ಸೆ ಹಾಗೂ ಇಳಿಯ ವಯಸ್ಸಿನಲ್ಲೂ ಕೂಡಾ ವೃದ್ಧೆ ತೋರಿದ ಆತ್ಮಸ್ಥೈರ್ಯ ಕೊವಿಡ್ ಅನ್ನು ಸೋಲಿಸುವಂತೆ ಮಾಡಿದೆ ಎಂದು ವೃದ್ಧೆಗೆ ಚಿಕಿತ್ಸೆ ನೀಡಿದ ವೈದ್ಯ ಡಾ.ದೀಪಕ ಕಲಾದಗಿ ತಿಳಿಸಿದ್ದಾರೆ.
ಈ ಬಾರಿಯ ಕೊರೊನಾದಿಂದಾಗಿ ಮಧ್ಯ ವಯಸ್ಸಿನವರು ಸಾವನ್ನಪ್ಪಿದ್ದಾರೆ. ಹೀಗಾಗಿ ಹೊನ್ನಮ್ಮನಿಗೆ ಕೊರೊನಾ ಎಂದಾಗ ಮನೆಯಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ ಈ ಆಸ್ಪತ್ರೆಗೆ ಬಂದ ಮೇಲೆ ಹೊನ್ನಮ್ಮ ಗುಣಮುಖವಾಗಿದ್ದಾರೆ. ಇಲ್ಲಿನ ವೈದ್ಯರು ನೀಡಿದ ಕಾಳಜಿ ಹಾಗೂ ಚಿಕಿತ್ಸೆ ಇವರನ್ನು ಕೊರೊನಾದಿಂದ ಗೆದ್ದು ಬರುವಂತೆ ಮಾಡಿದೆ. ಹೀಗಾಗೇ ವೈದ್ಯರು ನೀಡಿದ ಕಾಳಜಿಗೆ ಕುಟುಂಬಸ್ಥರು ಸದಾ ಋಣಿಯಾಗಿರುತ್ತೇವೆ ಎಂದು ಹೊನ್ನಮ್ಮ ಸಂಬಂಧಿ ನಾಗರಾಜ ಸಂತಸ ವ್ಯಕ್ತಪಡಿಸಿದ್ದಾರೆ.
ಸದ್ಯ ಇದೇ ಆಸ್ಪತ್ರೆಯಯಲ್ಲಿ 85 ವರ್ಷ ವಯಸ್ಸಿನ ಇನ್ನಿಬ್ಬರು ಚಿಕಿತ್ಸೆ ಪಡೆಯುತ್ತಿದ್ದು, ಇನ್ನೇರೆಡು ದಿನಗಳಲ್ಲಿ ಅವರನ್ನು ಕೂಡಾ ವೈದ್ಯರು ಡಿಸ್ಚಾಜ್೯ ಮಾಡುವ ಗುರಿ ಹೊಂದಿದ್ದಾರೆ. ಕೊರೊನಾ ಬಂದರೆ ಸಾಕು ಹಿರಿಯ ಜೀವಿಗಳಿಂದ ಹಿಡಿದು ಕಿರಿಯರವರೆಗೆ ನಲುಗುವ ಈ ಕಾಲದಲ್ಲಿ ಈ ವೃದ್ಧೆಯ ಆತ್ಮಸ್ಥೈರ್ಯ ಎಂತವರಿಗು ಕೂಡಾ ಹೊಸ ಭರವಸೆ ಮೂಡಿಸುವಂತಿದೆ.
ಇದನ್ನೂ ಓದಿ:
ಬೆಂಗಳೂರು; ಕೊರೊನಾ ಗೆದ್ದ 103ರ ಶತಾಯುಷಿ ಅಜ್ಜ
ಕೊರೊನಾ ವಿರುದ್ಧ ಹೋರಾಡಿ ಗೆದ್ದ 107 ವರ್ಷದ ವೃದ್ಧೆ; ಬೆಂಗಳೂರಿನ ಆಸ್ಪತ್ರೆಯಿಂದ ಇಂದು ಶತಾಯುಷಿ ಡಿಸ್ಚಾರ್ಜ್