AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ: ಕಡಲ ತೀರದ ಅಲೆಗಳ ಅಬ್ಬರದಿಂದ ನಾಪತ್ತೆಯಾಗಿದ್ದ ಬೋಟ್ ಪತ್ತೆ

ಜಿಲ್ಲೆಯಲ್ಲಿ ತೌಕ್ತೆ ಚಂಡಮಾರುತದ ಅಬ್ಬರ ಜೋರಾಗಿದ್ದು ಅಲೆಗಳ ಅಬ್ಬರದಿಂದ ನಾಪತ್ತೆಯಾಗಿದ್ದ ಬೋಟ್​ ಪತ್ತೆಯಾಗಿದೆ.

ಉಡುಪಿ: ಕಡಲ ತೀರದ ಅಲೆಗಳ ಅಬ್ಬರದಿಂದ ನಾಪತ್ತೆಯಾಗಿದ್ದ ಬೋಟ್ ಪತ್ತೆ
ಕಡಲ ತೀರದ ಅಲೆಗಳ ಅಬ್ಬರದಿಂದ ನಾಪತ್ತೆಯಾಗಿದ್ದ ಬೋಟ್ ಪತ್ತೆ
shruti hegde
|

Updated on: May 16, 2021 | 3:38 PM

Share

ಉಡುಪಿ: ಜಿಲ್ಲೆಯಲ್ಲಿ ತೌಕ್ತೆ ಚಂಡಮಾರುತದ ಅಬ್ಬರ ಜೋರಾಗಿದ್ದು ಅಲೆಗಳ ಅಬ್ಬರದಿಂದ ನಾಪತ್ತೆಯಾಗಿದ್ದ ಬೋಟ್​ ಪತ್ತೆಯಾಗಿದೆ. ಬೋಟ್​ನಲ್ಲಿರುವವರು ಸೆಲ್ಫಿ ವಿಡಿಯೋ ಮಾಡುವ ಮೂಲಕ ರಕ್ಷಣೆ ಮಾಡುವಂತೆ ಕೇಳಿಕೊಂಡಿದ್ದರು. ಅಲೆಗಳ ಅಬ್ಬರ ಜೋರಾಗಿದ್ದರಿಂದ ರಕ್ಷಣೆ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.

ಕಾಪು ಬೀಚ್‌ನಿಂದ 25 ನಾಟಿಕಲ್ ಮೈಲ್ ದೂರದಲ್ಲಿ ಪತ್ತೆ ಬೋಟ್​ ಪತ್ತೆಯಾಗಿದೆ. ಬೋಟ್‌ನಲ್ಲಿರುವ 9 ಜನರು ಸುರಕ್ಷಿತವಾಗಿರುವ ಮಾಹಿತಿ ತಿಳಿದು ಬಂದಿದೆ. ಬೋಟ್‌ನಲ್ಲಿರುವ ಜನರ ರಕ್ಷಣೆಗೆ ಕೋಸ್ಟ್ ಗಾರ್ಡ್ಸ್ ಪ್ರಯತ್ನ ನಡೆಸಿದ್ದರೂ ರಕ್ಷಣಾ ಕಾರ್ಯಾಚರಣೆಗೆ ಅಲೆಗಳ ಅಬ್ಬರ ಅಡ್ಡಿಪಡಿಸಿತ್ತು. ಸಮುದ್ರ ಅಬ್ಬರ ಕಡಿಮೆಯಾದ ಬಳಿಕ ರಕ್ಷಣಾ ಕಾರ್ಯಚರಣೆ ನಡೆದಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಜಿ.ಜಗದೀಶ್, ಶಾಸಕರ ಲಾಲಾಜಿ ಮೆಂಡನ್, ಎಸ್‌ಪಿ ಎಸ್.ವಿಷ್ಣುವರ್ಧನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಟಗ್ ಮುಳುಗಡೆ ಪ್ರಕರಣ: ಪತ್ತೆಯಾದ 9 ಮಂದಿ ರಕ್ಷಣೆಗೆ ಗಾಳಿ ಮಳೆ ಅಡ್ಡಿ ತೌಕ್ತೆ ಚಂಡಮಾರುತದ ಅಬ್ಬರಕ್ಕೆ ನಾಪತ್ತೆಯಾಗಿದ್ದ ಎಮ್​ಆರ್​ಪಿಎಲ್​ನ ಒಂದು ಟಗ್ ಪತ್ತೆಯಾಗಿದೆ. ಆದರೆ ದುರಾದೃಷ್ಟವಷಾತ್ ಟಗ್ ಪತ್ತೆಯಾದರೂ ಭಾರೀ ಗಾಳಿ, ಮಳೆಯ ಕಾರಣದಿಂದ ಅದರ ರಕ್ಷಣಾ ಕಾರ್ಯ ಸಾಧ್ಯವಾಗುತ್ತಿಲ್ಲ. ಹೀಗಾಗಿ ಪತ್ತೆಯಾಗಿರುವ ಟಗ್ ಮತ್ತು 9 ಮಂದಿ ನೌಕರರನ್ನು ಇಂದು ಮುಂಜಾನೆ 5.30 ಸುಮಾರಿಗೆ ರಕ್ಷಣೆ ಮಾಡಲು ನಿರ್ಧರಿಸಲಾಗಿತ್ತು. ಅಲ್ಲಿಯವರೆಗೂ ಲಂಗರು ಹಾಕಿದ ಸ್ಥಳದಲ್ಲಿ ನಿಲ್ಲುವಂತೆ 9 ಜನರಿಗೆ ಸೂಚನೆ ನೀಡಲಾಗಿತ್ತು.

ಜೋರಾಗಿ ಸುರಿಯುತ್ತಿರುವ ಗಾಳಿ, ಮಳೆಯ ಕಾರಣದಿಂದ ಕೋಸ್ಟ್ ಗಾರ್ಡ್ಸ್​ಗೆ ಸ್ಥಳಕ್ಕೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯವರೆಗೆ ಲಂಗರು ಹಾಕಿದ ಸ್ಥಳದಲ್ಲೇ ಇರುವಂತೆ ಸೂಚನೆ ಕೊಡಲಾಗಿತ್ತು. ಟಗ್​ನಲ್ಲಿ ಇರುವ 9 ಮಂದಿ ನೌಕರರು ಪ್ರಾಣ ಕೈಯಲ್ಲಿ ಹಿಡಿದು ನಿಂತಿದ್ದರು. ಎಲ್ಲರಿಗೂ ಚಂಡಮಾರುತದ ಮಧ್ಯೆ ಸಮುದ್ರದಲ್ಲಿ ಇರುವ ಪರಿಸ್ಥಿತಿ ಎದುರಾಗಿತ್ತು. ಸುರತ್ಕಲ್​ನ 17 ನಾಟಿಕಲ್ ದೂರದಲ್ಲಿ ದುರಂತ ನಡೆದಿತ್ತು. ಇದನ್ನೂ ಓದಿ: ಟಗ್ ಮುಳುಗಡೆ ಪ್ರಕರಣ: ಪತ್ತೆಯಾದ 9 ಮಂದಿ ರಕ್ಷಣೆಗೆ ಗಾಳಿ ಮಳೆ ಅಡ್ಡಿ; ನಾಳೆ ಮುಂಜಾನೆವರೆಗೆ ಸಮುದ್ರದಲ್ಲೇ ಇರುವ ಅನಿವಾರ್ಯತೆ

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್