ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ಜಪಾನ್ ಮೂಲದ ಮಿಯಾಜಾಕಿ ಮಾವಿನಹಣ್ಣು ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣಿನ ತಳಿಗಳಲ್ಲಿ ಒಂದಾಗಿದೆ. ಇದರ ಬೆಲೆ ಪ್ರತಿ ಕೆಜಿಗೆ 2.5 ಲಕ್ಷ ರೂಪಾಯಿಗಳವರೆಗೆ ತಲುಪುತ್ತದೆ. ಇಂತಹ ದುಬಾರಿ ದರದ ಮಾವು ತಳಿಯನ್ನು ಬೀದರ್ ನ ರೈತ ಬೆಳೆದು ಗಮನಸೆಳೆದಿದ್ದಾರೆ. ಹೌದು...ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಲ್ಬರ್ಗಾ ಗ್ರಾಮದ ರೈತ ಹಣಮಂತರಾವ್ ಶ್ರೀಮಾಳೆ ಅವರು ವಿಶ್ವದ ದುಬಾರಿ ಬೆಲೆಯ ಮಾವನ್ನ ಬೀದರ್ ನ ರೈತ ಬೆಳೆಸಿ ಸೈ ಎಣಿಸಿಕೊಂಡಿದ್ದಾರೆ. ವಿದೇಶಿ ತಳಿ ನಮ್ಮ ನೆಲದಲ್ಲಿ ಬೆಳೆಯುತ್ತಾ ಎಂದು ಹಣಮಂತರಾವ್ ಶ್ರೀಮಾಳೆ ಅವರಯ ತೋಟದಲ್ಲಿ ಪ್ರಾಯೋಗಿಕವಾಗಿ ಮಿಯಾಜಾಕಿ ಮಾವು ಬೆಳೆದಿದ್ದು, ಅದು ಇದೀಗ ಉತ್ತಮ ಫಲ ಕೊಟ್ಟಿದೆ.
ಬೀದರ್, (ಮೇ 22): ಜಪಾನ್ ಮೂಲದ ಮಿಯಾಜಾಕಿ ಮಾವಿನಹಣ್ಣು (Miyazaki Mango) ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣಿನ ತಳಿಗಳಲ್ಲಿ ಒಂದಾಗಿದೆ. ಇದರ ಬೆಲೆ ಪ್ರತಿ ಕೆಜಿಗೆ 2.5 ಲಕ್ಷ ರೂಪಾಯಿಗಳವರೆಗೆ ತಲುಪುತ್ತದೆ. ಇಂತಹ ದುಬಾರಿ ದರದ ಮಾವು ತಳಿಯನ್ನು ಬೀದರ್ ನ (Bidar) ರೈತ ಬೆಳೆದು ಗಮನಸೆಳೆದಿದ್ದಾರೆ. ಹೌದು…ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಲ್ಬರ್ಗಾ ಗ್ರಾಮದ ರೈತ ಹಣಮಂತರಾವ್ ಶ್ರೀಮಾಳೆ ಅವರು ವಿಶ್ವದ ದುಬಾರಿ ಬೆಲೆಯ ಮಾವನ್ನ ಬೀದರ್ ನ ರೈತ ಬೆಳೆಸಿ ಸೈ ಎಣಿಸಿಕೊಂಡಿದ್ದಾರೆ. ವಿದೇಶಿ ತಳಿ ನಮ್ಮ ನೆಲದಲ್ಲಿ ಬೆಳೆಯುತ್ತಾ ಎಂದು ಹಣಮಂತರಾವ್ ಶ್ರೀಮಾಳೆ ಅವರಯ ತೋಟದಲ್ಲಿ ಪ್ರಾಯೋಗಿಕವಾಗಿ ಮಿಯಾಜಾಕಿ ಮಾವು ಬೆಳೆದಿದ್ದು, ಅದು ಇದೀಗ ಉತ್ತಮ ಫಲ ಕೊಟ್ಟಿದೆ.
ಈ ಯಶಸ್ಸಿನಿಂದ ಪ್ರೇರಿತರಾಗಿ ಮುಂದಿನ ದಿನಗಳಲ್ಲಿ ಎರಡು ಎಕರೆ ಪ್ರದೇಶದಲ್ಲಿ ಮಿಯಾಜಾಕಿ ಮಾವು ಬೆಳೆಸಲು ರೈತ ನಿರ್ಧರಿಸಿದ್ದಾರೆ. ಜಪಾನ್ ದೇಶದಲ್ಲಿ ಹೆಚ್ಚಾಗಿ ಬೆಳೆಯುವ ಈ ಮಿಯಾಜಾಕಿ ಮಾವು ತನ್ನ ವಿಶಿಷ್ಟ ರುಚಿ ಮತ್ತು ಗುಣಮಟ್ಟದಿಂದ ವಿಶ್ವದ ಗಮನ ಸೆಳೆದಿದೆ. ಈ ಹಣ್ಣು ಅತ್ಯಂತ ಸಿಹಿಯಾಗಿದ್ದು, ದೇಹಕ್ಕೆ ಅಗತ್ಯವಾದ ಆಂಟಿ ಆಕ್ಸಿಡೆಂಟ್ಗಳು, ಬೀಟಾ ಕ್ಯಾರೋಟಿನ್ ಹಾಗೂ ಫೋಲಿಕ್ ಆಸಿಡ್ ಹೆಚ್ಚಿನ ಪ್ರಮಾಣದಲ್ಲಿರುವುದಾಗಿ ಹೇಳಲಾಗುತ್ತಿದೆ. ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಾಯಕವಾಗುತ್ತದೆ ಎನ್ನಲಾಗುತ್ತಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹಣ್ಣಿಗೆ ಭಾರೀ ಬೇಡಿಕೆ ಇದ್ದು, ಕೆಲವೆಡೆ ಕೆಜಿಗೆ ಲಕ್ಷಾಂತರ ರೂಪಾಯಿ ಬೆಲೆ ಸಿಗುತ್ತಿದೆ. ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಹೊಸ ತಳಿಗಳ ಬೆಳೆಗಳತ್ತ ರೈತರು ಆಸಕ್ತಿ ತೋರುತ್ತಿರುವುದು ಕೃಷಿಯಲ್ಲಿ ಹೊಸ ಆಶಾಭರವನ್ನ ಮೂಡಿಸಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ಸುರೇಶ್ ನಾಯಕ ಕೊಟ್ಟಿರುವ ಪ್ರತ್ಯೇಕ್ಷ ವರದಿ ಇಲ್ಲಿದೆ.

