ಸಮಾಧಾನಕರ ಸುದ್ದಿ: ತಾವರೆಕೆರೆಯ ಯಲಚಗುಪ್ಪೆ ಗ್ರಾಮ ಸಮೀಪ ಏಕಕಾಲದಲ್ಲಿ 25 ಶವ ಸುಡುವುದಕ್ಕೆ ವ್ಯವಸ್ಥೆ ಸಿದ್ಧವಾಯ್ತು!

| Updated By: Skanda

Updated on: Apr 23, 2021 | 4:05 PM

ರಾಮನಗರ:ಬೆಂಗಳೂರಿನಲ್ಲಿ ಕೊರೊನಾ ಕಾಟಕ್ಕಿಂತಲೂ ಅಲ್ಲಿನ ಚಿತಾಗಾರಗಳೇ ನರಕಸದೃಶವಾಗಿವೆ. ಕೊರೊನಾದಿಂದ ಮೃತಪಟ್ಟವರ ಬಂಧುಗಳ ನೋವು, ಅನುಭವಿಸುತ್ತಿರುವ ಕಾಟ ಒಂದಾ ಎರಡಾ? ಎಂಬಂತಾಗಿದೆ. ಇಂತಹ ದುರ್ಭರ ಪರಿಸ್ಥಿತಿಯಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಬಳಿಯ ಯಲಚಗುಪ್ಪೆ ಗ್ರಾಮದ ಕಡೆಯಿಂದ ತುಸು ಸಮಾಧಾನಕರ ಸುದ್ದಿಯೊಂದು ಕೇಳಿಬಂದಿದೆ. ಬೆಂಗಳೂರಿನ ಚಿತಾಗಾರಗಳಲ್ಲಿ ಶವಸಂಸ್ಕಾರಕ್ಕೆ ಸಮಸ್ಯೆಯುಂಟಾಗುತ್ತಿರುವ ಹಿನ್ನೆಲೆಯಲ್ಲಿ ಯಲಚಗುಪ್ಪೆ ಸಮೀಪ 4 ಎಕರೆ ಪ್ರದೇಶದಲ್ಲಿ ಸ್ಮಶಾನ ನಿರ್ಮಾಣವಾಗುತ್ತಿದೆ. ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಬಳಿಯ ಈ ಗ್ರಾಮದ ಸಮೀಪ ಏಕಕಾಲದಲ್ಲಿ 25 ಶವಗಳನ್ನು ಸುಡುವುದಕ್ಕೆ ಬೇಕಾದ […]

ಸಮಾಧಾನಕರ ಸುದ್ದಿ: ತಾವರೆಕೆರೆಯ ಯಲಚಗುಪ್ಪೆ ಗ್ರಾಮ ಸಮೀಪ ಏಕಕಾಲದಲ್ಲಿ 25 ಶವ ಸುಡುವುದಕ್ಕೆ ವ್ಯವಸ್ಥೆ ಸಿದ್ಧವಾಯ್ತು!
ಸಮಾಧಾನಕರ ಸುದ್ದಿ: ತಾವರೆಕೆರೆಯ ಯಲಚಗುಪ್ಪೆ ಗ್ರಾಮ ಸಮೀಪ ಏಕಕಾಲದಲ್ಲಿ 25 ಶವ ಸುಡುವುದಕ್ಕೆ ವ್ಯವಸ್ಥೆ ಸಿದ್ಧವಾಯ್ತು!
Follow us on

ರಾಮನಗರ:ಬೆಂಗಳೂರಿನಲ್ಲಿ ಕೊರೊನಾ ಕಾಟಕ್ಕಿಂತಲೂ ಅಲ್ಲಿನ ಚಿತಾಗಾರಗಳೇ ನರಕಸದೃಶವಾಗಿವೆ. ಕೊರೊನಾದಿಂದ ಮೃತಪಟ್ಟವರ ಬಂಧುಗಳ ನೋವು, ಅನುಭವಿಸುತ್ತಿರುವ ಕಾಟ ಒಂದಾ ಎರಡಾ? ಎಂಬಂತಾಗಿದೆ. ಇಂತಹ ದುರ್ಭರ ಪರಿಸ್ಥಿತಿಯಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಬಳಿಯ ಯಲಚಗುಪ್ಪೆ ಗ್ರಾಮದ ಕಡೆಯಿಂದ ತುಸು ಸಮಾಧಾನಕರ ಸುದ್ದಿಯೊಂದು ಕೇಳಿಬಂದಿದೆ. ಬೆಂಗಳೂರಿನ ಚಿತಾಗಾರಗಳಲ್ಲಿ ಶವಸಂಸ್ಕಾರಕ್ಕೆ ಸಮಸ್ಯೆಯುಂಟಾಗುತ್ತಿರುವ ಹಿನ್ನೆಲೆಯಲ್ಲಿ ಯಲಚಗುಪ್ಪೆ ಸಮೀಪ 4 ಎಕರೆ ಪ್ರದೇಶದಲ್ಲಿ ಸ್ಮಶಾನ ನಿರ್ಮಾಣವಾಗುತ್ತಿದೆ.

ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಬಳಿಯ ಈ ಗ್ರಾಮದ ಸಮೀಪ ಏಕಕಾಲದಲ್ಲಿ 25 ಶವಗಳನ್ನು ಸುಡುವುದಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸಲು ಸ್ಥಳೀಯ ಆಡಳಿತ ಭರದಿಂದ ಕಾಮಗಾರಿ ನಡೆಸುತ್ತಿದೆ. ಅಲ್ಲೇ ಪಕ್ಕದಲ್ಲಿ ಮತ್ತೊಂದೆಡೆ ಶವಗಳನ್ನು ಇರಿಸಲು ಟೆಂಟ್​ಗಳ ನಿರ್ಮಾಣ ಕಾರ್ಯ ಸಹ ನಡೆದಿದೆ. ಸ್ಮಶಾನ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, 5 ಜೆಸಿಬಿಗಳ ಮೂಲಕ ಜಮೀನು ಸ್ವಚ್ಛಗೊಳಿಸುವ ಕಾರ್ಯ ನಡೆದಿದೆ.

ಪಕ್ಕದಲ್ಲಿ ಮತ್ತೊಂದೆಡೆ ಶವಗಳನ್ನು ಇರಿಸಲು ಟೆಂಟ್​ಗಳ ನಿರ್ಮಾಣ

ಬೆಂಗಳೂರು ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಈ ಸ್ಮಶಾನದಲ್ಲಿ ಏಕಕಾಲದಲ್ಲಿ 25 ಶವಗಳ ಅಂತ್ಯಸಂಸ್ಕಾರಕ್ಕೆ ಅವಕಾಶವಿದೆ. ಕೇವಲ ಸುಡಲು ಮಾತ್ರ ಇಲ್ಲಿ ಅವಕಾಶ ಕಲ್ಪಿಸಲಾಗುವುದು. ಶವಗಳನ್ನ ಇಡಲು ಬೃಹತ್ ತಾತ್ಕಾಲಿಕ ಶೆಡ್​ಗಳ ನಿರ್ಮಾಣ ಕಾರ್ಯವೂ ನಡೆದಿದೆ.

ಕೇವಲ ಸುಡಲು ಮಾತ್ರ ಇಲ್ಲಿ ಅವಕಾಶ ಕಲ್ಪಿಸಲಾಗುವುದು.


ಇದನ್ನೂ ಓದಿ
ಕೇವಲ ಯಲಹಂಕ ವಲಯದ ಕೋವಿಡ್ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಮಾತ್ರ ಇಲ್ಲಿ ಅವಕಾಶ: ಬಿಬಿಎಂಪಿ ಹೊಸ ರೂಲ್ಸ್​

ಇದನ್ನೂ ಓದಿ
ಹೆಣ ಸುಡೋಕು ಹೆಣಗಾಟ ಶುರು? ಬೇಡಿಕೆ ಈಡೇರಿಲ್ಲ ಅಂದರೆ ಹೋರಾಟ ಮಾಡ್ತೀವಿ ಎಂದ ಚಿತಾಗಾರ ಸಿಬ್ಬಂದಿ!

a big crematorium to come up in yalachaguppe near tavarekere in bangalore south