ಸ್ವಂತ ಮನೆ ಹೊಂದುವ ಕನಸು ಕಂಡ ಅಂಧ ದಂಪತಿಗೆ ವಂಚನೆ: ತುಮಕೂರಿನಲ್ಲೊಂದು ಮನಕಲುಕುವ ಘಟನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 05, 2024 | 3:48 PM

ದಂಪತಿಯ ಅಂಧತ್ವವನ್ನೇ ಬಂಡವಾಳ ಮಾಡಿಕೊಂಡು 13 ಲಕ್ಷ ರೂಪಾಯಿ ಹಣ ಪಡೆದು ವಂಚನೆ ಮಾಡಿರುವಂತಹ ಘಟನೆ ತುಮಕೂರಿನ ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಂಧ ದಂಪತಿಯಿಂದ ಹಣ ಪಡೆದು ಬೇರೊಬ್ಬರಿಗೆ ಮನೆ ಮಾರಾಟ ಮಾಡುವ ಮೂಲಕ ಮೋಸ ಮಾಡಲಾಗಿದೆ.

ಸ್ವಂತ ಮನೆ ಹೊಂದುವ ಕನಸು ಕಂಡ ಅಂಧ ದಂಪತಿಗೆ ವಂಚನೆ: ತುಮಕೂರಿನಲ್ಲೊಂದು ಮನಕಲುಕುವ ಘಟನೆ
ಸ್ವಂತ ಮನೆ ಹೊಂದುವ ಕನಸು ಕಂಡ ಅಂಧ ದಂಪತಿಗೆ ವಂಚನೆ: ತುಮಕೂರಿನಲ್ಲೊಂದು ಮನಕಲುಕುವ ಘಟನೆ
Follow us on

ತುಮಕೂರು, ಅಕ್ಟೋಬರ್​ 05: ಸ್ವಂತ ಮನೆ ಹೊಂದುವ ಕನಸು ಕಂಡ ಅಂಧ ದಂಪತಿಯಿಂದ (blind couple) 13 ಲಕ್ಷ ರೂಪಾಯಿ ಹಣ ಪಡೆದು ವಂಚನೆ ಮಾಡಿರುವಂತಹ ಮನಕಲುಕುವ ಘಟನೆಯೊಂದು ನಗರದಲ್ಲಿ ನಡೆದಿದೆ. ಅಂಧತ್ವವನ್ನೇ ಬಂಡವಾಳ ಮಾಡಿಕೊಂಡ ಶಿಲ್ಪಾ ಎಂಬುವವರಿಂದ ಅಣ್ಣಪ್ಪ ಗಾದ್ರಿ ಹಾಗೂ ಮಮತಾ ದಂಪತಿ ವಂಚನೆಗೊಳಗಾಗಿದ್ದಾರೆ. ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಿದ್ದರು ಯಾವುದೇ ಪ್ರಯೋಜವಾಗಿಲ್ಲ. ಇತ್ತ ಹಣ ಕಳೆದುಕೊಂಡು, ಅತ್ತ ಮನೆಯೂ ಇಲ್ಲದೆ ಎರಡು ವರ್ಷದಿಂದ ಅಂಧ ದಂಪತಿ ಕಣ್ಣೀರಿಡುವಂತಾಗಿದೆ.

ಎಸ್​ಬಿಐ ಬ್ಯಾಂಕ್ ನೌಕರಾಗಿರುವ ಅಣ್ಣಪ್ಪ ಮತ್ತು ತುಮಕೂರು ಪಾಲಿಕೆಯಲ್ಲಿ ಕೆಲಸ ಮಾಡುವ ಮಮತಾ, ತುಮಕೂರಿನ ಗಾಂಧಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ತುಮಕೂರಿನ ಕ್ಯಾತಸಂದ್ರದ ಚಂದ್ರಮೌಳೇಶ್ವರ ಬಡಾವಣೆ ನಿವಾಸಿ ಶಿಲ್ಪಾ. ಮನೆ ಮಾರಾಟ ಮಾಡಲು ಶಿಲ್ಪಾ ಮುಂದಾಗಿದ್ದಾರೆ. ಈ ವೇಳೆ 60 ಲಕ್ಷ ರೂಪಾಯಿಗೆ ಮನೆ ಖರೀದಿಗೆ ಅಂಧ ಅಣ್ಣಪ್ಪನ ಕುಟುಂಬ ಮುಂದಾಗಿದೆ.

ಇದನ್ನೂ ಓದಿ: ಟೆಂಡರ್​ ಗೋಲ್ ಮಾಲ್: ಬಿಬಿಎಂಪಿ ಆರೋಗ್ಯಾಧಿಕಾರಿ ವಿರುದ್ಧ ಲಕ್ಷಾಂತರ ರೂ. ವಂಚನೆ ಆರೋಪ

ಮನೆ ತೋರಿಸಿದ ಶಿಲ್ಪಾ ಅಣ್ಣಪ್ಪನೊಂದಿಗೆ ಅಗ್ರಿಮೆಂಟ್ ಮಾಡಿಕೊಂಡಿದ್ದು, ಅಗ್ರಿಮೆಂಟ್ ವೇಳೆ 13 ಲಕ್ಷ ರೂಪಾಯಿ ಹಣ ಪಡಿದ್ದಾಳೆ. 2022ರಲ್ಲಿ ಅಣ್ಣಪ್ಪ ಖಾದ್ರಿ ಅವರಿಂದ ಶಿಲ್ಪಾ ಹಣ ಪಡೆದು ಬಳಿಕ ಮನೆಯನ್ನು ಬೇರೊಬ್ಬರಿಗೆ ಮಾರಾಟ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮನೆ ಅಗ್ರಿಮೆಂಟ್ ಪೇಪರ್​ನಲ್ಲೂ ಅಂಧ ದಂಪತಿಗೆ ವಂಚಿಸಿದ್ದಾರೆ. ಹಣವನ್ನು ಕೊಡದೆ, ದೂರವಾಣಿ ಕರೆಗೂ ಸಿಗದೆ ಸದ್ಯ ಶಿಲ್ಪಾ ಕಣ್ಮರೆಯಾಗಿದ್ದಾರೆ.

ಇದನ್ನೂ ಓದಿ: ಕೋಲಾರ: ಬಡ್ಡಿ ರಹಿತ ಸಾಲ ಕೊಡಿಸೋದಾಗಿ ಹಣ ಪಡೆದು ವಂಚನೆ; ಕಚೇರಿಗೆ ಮುತ್ತಿಗೆ ಹಾಕಿದ ಜನ

ಇಷ್ಟೆಲ್ಲಾ ಆದ ಬಳಿಕ ಶಿಲ್ಪಾ ವಿರುದ್ಧ ಕ್ಯಾತಸಂದ್ರ ಪೊಲೀಸರಿಗೆ ಅಣ್ಣಪ್ಪ ದೂರು ನೀಡಿದ್ದಾರೆ. ಶಿಲ್ಪಾಳನ್ನ ಠಾಣೆಗೆ ಕರೆಸಿದರೂ, ಪೊಲೀಸರು ಮಾತ್ರ ಹಣ ವಾಪಸ್ ಕೊಡಿಸಿಲ್ಲ ಎಂದು ಆರೋಪಿಸಿದ್ದಾರೆ. ಎರಡು ವರ್ಷದಿಂದ ಅಂಧ ದಂಪತಿ ಹಣಕ್ಕಾಗಿ ಅಲೆದಾಡುತ್ತಿದ್ದಾರೆ. ನ್ಯಾಯ ಕೊಡಿಸುವಂತೆ ಕ್ಯಾಮರ ಎದುರು ಕಣ್ಣೀರು ಹಾಕಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.