ಕೊರೊನಾ ಶಂಕೆ: ಬಡ ಮಹಿಳೆಯ ಶವವನ್ನು ಜೆಸಿಬಿಯಲ್ಲಿಟ್ಟು ಆಸ್ಪತ್ರೆಗೆ ಸಾಗಿಸಿದ ಜನರು
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕುರುಟಹಳ್ಳಿ ಗ್ರಾಮದಲ್ಲಿ ಮಹಿಳೆ ಮೃತಪಟ್ಟಿದ್ದು, ಮಹಿಳೆಯ ಶವವನ್ನು ಜೆಸಿಬಿ ಬಕೆಟ್ನಲ್ಲಿಟ್ಟು ಚಿಂತಾಮಣಿ ನಗರ ಆಸ್ಪತ್ರೆಯ ಶವಾಗಾರಕ್ಕೆ ಸಾಗಾಟ ಮಾಡಲಾಗಿದೆ. ಏಪ್ರಿಲ್ 29ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಕೊರೊನಾ ಇರಬಹುದೆಂಬ ಸಂಶಯದಿಂದ ಶವವನ್ನು ಜೆಸಿಬಿಯಲ್ಲಿ ಸಾಗಾಟ ಮಾಡಿರುವುದು ತಿಳಿದುಬಂದಿದೆ.

ಚಿಕ್ಕಬಳ್ಳಾಪುರ: ಕೊರೊನಾ ಬಂದ ನಂತರ ಯಾರು ಯಾರನ್ನೂ ನಂಬುವಂತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸೋಂಕು ಹುಟ್ಟುಹಾಕಿದ ಭಯ ಎಷ್ಟೋ ಅಮಾಯಕ ಜೀವಗಳ ಪಾಲಿಗೆ ಕಂಟಕ ಆಗಿದೆ. ಬದುಕುವ ಎಲ್ಲಾ ಸಾಧ್ಯತೆಗಳು ಇದ್ದರೂ ಸೂಕ್ತ ಸಮಯದಲ್ಲಿ, ಸೂಕ್ತ ಚಿಕಿತ್ಸೆ ಸಿಗದೆ ಜೀವ ಬಿಟ್ಟವರ ಸಂಖ್ಯೆ ದೊಡ್ಡದಿದೆ. ಸತ್ತ ನಂತರ ಗೌರವಯುತ ಅಂತ್ಯ ಸಂಸ್ಕಾರ ಕಾಣದವರ ಪಟ್ಟಿಯೂ ದೊಡ್ಡದಿದೆ. ಸ್ವತಃ ಕುಟುಂಬಸ್ಥರೇ ಹಣ ಕೊಟ್ಟು ಬೇರೆಯವರಿಂದ ಅಂತ್ಯ ಸಂಸ್ಕಾರ ಮಾಡಿಸುವಂತಹ ಸನ್ನಿವೇಶ ನಿರ್ಮಾಣವಾಗಿರುವ ಈ ಕಾಲಘಟ್ಟದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ವಿಶ್ಲೇಷಿಸುವುದೂ ಕಷ್ಟವಾಗಿದೆ. ಚಿಕ್ಕಬಳ್ಳಾಪುರದಲ್ಲಿ ನಡೆದ ಘಟನೆಯೊಂದು ಇಂತಹದ್ದೇ ಸಂದಿಗ್ಧತೆಯನ್ನು ನೆನಪಿಸುತ್ತದೆ. ಕೊರೊನಾದಿಂದ ಮೃತಪಟ್ಟಿರಬಹುದು ಎಂಬ ಶಂಕೆಯ ಮೇಲೆ ಇಲ್ಲಿನ ಮಹಿಳೆಯೊಬ್ಬರ ಶವವನ್ನು ಜೆಸಿಬಿ ಮೂಲಕ ರವಾನಿಸಲಾಗಿದೆ.

ಮಹಿಳೆಯ ಶವವನ್ನು ಜೆಸಿಬಿ ಮೂಲಕ ಸಾಗಿಸಿದ ದೃಶ್ಯ
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕುರುಟಹಳ್ಳಿ ಗ್ರಾಮದಲ್ಲಿ ಮಹಿಳೆ ಮೃತಪಟ್ಟಿದ್ದು, ಮಹಿಳೆಯ ಶವವನ್ನು ಜೆಸಿಬಿ ಬಕೆಟ್ನಲ್ಲಿಟ್ಟು ಚಿಂತಾಮಣಿ ನಗರ ಆಸ್ಪತ್ರೆಯ ಶವಾಗಾರಕ್ಕೆ ಸಾಗಾಟ ಮಾಡಲಾಗಿದೆ. ಏಪ್ರಿಲ್ 29ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಕೊರೊನಾ ಇರಬಹುದೆಂಬ ಸಂಶಯದಿಂದ ಶವವನ್ನು ಜೆಸಿಬಿಯಲ್ಲಿ ಸಾಗಾಟ ಮಾಡಿರುವುದು ತಿಳಿದುಬಂದಿದೆ. 12 ವರ್ಷದ ಓರ್ವ ಹೆಣ್ಣು ಮಗಳನ್ನು ಹೊಂದಿದ್ದ ಮಹಿಳೆ ಯಾವ ಕಾರಣದಿಂದ ಮೃತಪಟ್ಟಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಕೊರೊನಾ ಸೃಷ್ಟಿ ಮಾಡಿದ ಭಯದಿಂದಾಗಿ ಯಾರಾದರೂ ಅನಾರೋಗ್ಯಕ್ಕೀಡಾಗಿದ್ದಲ್ಲಿ, ಸಾವಿಗೀಡಾದಲ್ಲಿ ಹತ್ತಿರ ಹೋಗಲು ಜನ ಭಯ ಪಡುವುದು ಸಾಮಾನ್ಯವಾಗಿದೆ. ಆದರೆ, ಕಡೇಪಕ್ಷ ಆ್ಯಂಬುಲೆನ್ಸ್ ವ್ಯವಸ್ಥೆಯನ್ನಾಗಲೀ, ಬೇರೆ ಯಾವುದೇ ರೀತಿಯ ಸೂಕ್ತ ವಾಹನದ ಮೂಲಕವಾಗಲೀ ಶವ ಸಾಗಿಸುವಷ್ಟು ಮಾನವೀಯತೆ ತೋರಿಸಬಹುದಿತ್ತು ಎಂದು ಅನೇಕರು ಮರುಗಿದ್ದಾರೆ.
ಇದನ್ನೂ ಓದಿ: ಚಿತಾಗಾರ ತುಂಬಿದೆ: ಸ್ಮಶಾನಗಳ ಮುಂದೆಯೂ ಹೌಸ್ಫುಲ್ ಬೋರ್ಡ್, ಬುಕ್ಕಿಂಗ್ ಫುಲ್ ಆದ ನಂತರ ಅವಕಾಶವಿಲ್ಲ