ಚಾಮರಾಜನಗರ ರೋಗಿಗಳ ಸಾವು ಪ್ರಕರಣ; ಡೆತ್ ಆಡಿಟ್ ಕಮಿಟಿ ವರದಿ ಟಿವಿ9ಗೆ ಲಭ್ಯ
ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟವರ ಪೈಕಿ ಯುವಕರೇ ಹೆಚ್ಚು ಎಂದು ತಿಳಿದುಬಂದಿದೆ. ಒಟ್ಟು ಹದಿಮೂರು ಜನ ಯುವಕರೆಂದು ಹೇಳಲಾಗುತ್ತಿದ್ದು, ಮೃತಪಟ್ಟವರಲ್ಲಿ 30 ರಿಂದ 40 ವಯಸ್ಸಿನವರು 10, 15 ರಿಂದ 3, 40 ರಿಂದ 50 ವಯಸ್ಸಿನವರು 4, 50 ರಿಂದ 60 ವಯಸ್ಸಿನವರು 4 ಮತ್ತು 60 ರಿಂದ 70 ವಯಸ್ಸಿನ 3 ಮಂದಿ ಸಾವನ್ನಪ್ಪಿದ್ದಾರೆ.

ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ 23 ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿ ದುರಂತದ ಡೆತ್ ಆಡಿಟ್ ಟಿವಿ9ಗೆ ಲಭ್ಯವಾಗಿದ್ದು, 23 ಜನ ಕೊರೊನಾದಿಂದಲೇ ಮರಣ ಹೊಂದಿದ್ದಾರೆಂದು ತಿಳಿದುಬಂದಿದೆ. 8 ಜನರಿಗೆ ಕೊರೊನಾ ಜೊತೆಗೆ ಇತರೆ ಕಾಯಿಲೆ ಕೂಡ ಇತ್ತು ಎಂದು ಡೆತ್ ಆಡಿಟ್ ಕಮಿಟಿ ಎರಡೇ ಸಾಲಿನಲ್ಲಿ ವರದಿ ಸಲ್ಲಿಸಿದೆ. ಆದರೆ ಆಕ್ಸಿಜನ್ ಕೊರತೆ ಸೇರಿದಂತೆ ಬೇರೆ ವಿಚಾರ ಪ್ರಸ್ತಾಪ ಮಾಡಿಲ್ಲ.
ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟವರ ಪೈಕಿ ಯುವಕರೇ ಹೆಚ್ಚು ಎಂದು ತಿಳಿದುಬಂದಿದೆ. ಒಟ್ಟು ಹದಿಮೂರು ಜನ ಯುವಕರೆಂದು ಹೇಳಲಾಗುತ್ತಿದ್ದು, ಮೃತಪಟ್ಟವರಲ್ಲಿ 30 ರಿಂದ 40 ವಯಸ್ಸಿನವರು 10, 15 ರಿಂದ 3, 40 ರಿಂದ 50 ವಯಸ್ಸಿನವರು 4, 50 ರಿಂದ 60 ವಯಸ್ಸಿನವರು 4 ಮತ್ತು 60 ರಿಂದ 70 ವಯಸ್ಸಿನ 3 ಮಂದಿ ಸಾವನ್ನಪ್ಪಿದ್ದಾರೆ.
ಡೆತ್ ಆಡಿಟ್ ರಿಪೋರ್ಟ್ ಅಧಿಕೃತ ಅಲ್ಲ: ಜಿಲ್ಲಾಧಿಕಾರಿ ಎಂ.ಆರ್.ರವಿ ಡೆತ್ ಆಡಿಟ್ ರಿಪೋರ್ಟ್ ಅಧಿಕೃತ ಅಲ್ಲ ಎಂದು ತಿಳಿಸಿದ ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್.ರವಿ ನಾನು ಸಹಿ ಮಾಡಿ ನೀಡುವ ವರದಿ ಮಾತ್ರ ಅಧಿಕೃತ. ವೈದ್ಯರು ಹೇಳಿದ ಮಾಹಿತಿ ಆಧರಿಸಿ ಸಚಿವರು ಹೇಳಿದ್ದಾರೆ. ಡೆತ್ ಆಡಿಟ್ ವರದಿಯಲ್ಲಿ ಸಂಪೂರ್ಣ ಮಾಹಿತಿ ಇರುತ್ತದೆ. ಯಾವಾಗ ಆಸ್ಪತ್ರೆಗೆ ದಾಖಲಾದರೂ, ಆರೋಗ್ಯ ಸಮಸ್ಯೆ, ಆಕ್ಸಿಜನ್ ಕೊರತೆ ಇತ್ತಾ ಎಲ್ಲವೂ ವರದಿಯಲ್ಲಿ ಇರಲಿದೆ ಎಂದು ಟಿವಿ9 ಗೆ ತಿಳಿಸಿದರು.
ಆಕ್ಸಿಜನ್ ವಿಚಾರದಲ್ಲಿ ಮೈಸೂರು ಜಿಲ್ಲಾಡಳಿತ ಸ್ಪಷ್ಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ರವಿ, ಇನ್ನೂ ಸ್ವಲ್ಪ ಸಮಯದಲ್ಲಿ ದಾಖಲೆ ಸಹಿತ ಸ್ಪಷ್ಟನೆ ನೀಡುವೆ. ಯಾರದ್ದೇ ಲೋಪವಿದ್ದರೂ ಅವರ ವಿರುದ್ಧ ಕ್ರಮವಾಗುತ್ತದೆ ಎಂದು ಹೇಳಿದರು.
ಆಸ್ಪತ್ರೆಯಲ್ಲಿ ತಪ್ಪದ ಬೆಡ್ ಆತಂಕ ಚಾಮರಾಜನಗರ ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ಬೆಡ್ ಕೊರತೆ ಇನ್ನು ತಪ್ಪಿಲ್ಲ. ಇರುವವರು ಡಿಸ್ಚಾರ್ಜ್ ಆದರೆ ಮಾತ್ರ ಹೊರ ರೋಗಿಗಳು ಆಸ್ಪತ್ರೆಗೆ ದಾಖಲು ಮಾಡಬಹುದು. ಕೊವಿಡ್ ಆಸ್ಪತ್ರೆಯಲ್ಲಿ 150 ಜನರಿಗೆ ಚಿಕಿತ್ಸೆ ನೀಡಬಹುದು. ಹೀಗಾಗಲೇ 168 ಸೋಂಕಿತರು ಆಸ್ಪತ್ರೆಯಲ್ಲಿ ಇದ್ದಾರೆ. 18 ಜನರಿಗೆ ಹೆಚ್ಚುವರಿಯಾಗಿ ದಾಖಲು ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ
ಇಷ್ಟಕ್ಕೂ ಕೊರೊನಾ ಸೋಂಕಿತ ವ್ಯಕ್ತಿಗೆ ಆಕ್ಸಿಜನ್ ಎಷ್ಟು ಬೇಕು? ಆಕ್ಸಿಜನ್ ಕಾನ್ಸೆಂಟ್ರೇಟ್ ಮಾತ್ರವೇ ಸಾಕಾದೀತಾ?
ಆಕ್ಸಿಜನ್ ಪೂರೈಕೆ ವಿಚಾರ: ಮೈಸೂರು, ಚಾಮರಾಜನಗರ ಜಿಲ್ಲಾಡಳಿತಗಳ ಮಧ್ಯೆ ಕೋಲ್ಡ್ ವಾರ್!
(TV9 received a report from Death Audit Committee on deaths of Chamarajanagar patients)
Published On - 11:45 am, Tue, 4 May 21