ದಾವಣಗೆರೆಯಲ್ಲಿ ಮುಸಿಯಾ ಉಪಟಳ; ವಾನರನನ್ನು ಹಿಡಿಯುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆ

ಮುಸಿಯಾದಿಂದ ಉಂಟಾದ ಸಮಸ್ಯೆ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಇಲಾಖೆಯ ಐವರು ಅಧಿಕಾರಿಗಳ ತಂಡ, ಪುರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಮುಸಿಯಾ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ದಾವಣಗೆರೆಯಲ್ಲಿ ಮುಸಿಯಾ ಉಪಟಳ; ವಾನರನನ್ನು ಹಿಡಿಯುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆ
ಮುಸಿಯಾ ಸೆರೆ ಹಿಡಿದ ದೃಶ್ಯ
Follow us
preethi shettigar
|

Updated on: May 04, 2021 | 10:57 AM

ದಾವಣಗೆರೆ: ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ಮುಸಿಯಾವೊಂದರ ಕಾಟ ಹೆಚ್ಚಾಗಿತ್ತು. ಇದರ ಉಪಟಳಕ್ಕೆ ಇದುವರೆಗೆ ಸುಮಾರು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮನೆಯಿಂದ ಹೊರ ಬಂದವರ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸುತಿತ್ತು. ಕೆಲವರು ಇದರಿಂದ ತಪ್ಪಿಸಿಕೊಂಡು ಹೋಗಲು ಹರಸಾಹಸಪಟ್ಟ ಸಾಕಷ್ಟು ನಿದರ್ಶನಗಳು ಇವೆ. ಸದ್ಯ ಹೊನ್ನಾಳಿ ಜನರ ನಿದ್ದೆ ಕೆಡಿಸಿದ್ದ ಮುಸಿಯಾವನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಗ್ರಾಮದಲ್ಲಿ ಮುಸಿಯಾ ಉಪಟಳಕ್ಕೆ ಹೆದರಿದ ಜನ ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸುತ್ತಿರಲಿಲ್ಲ. ಅಲ್ಲದೇ ಹುಚ್ಚಾಟ ನಡೆಸುತ್ತಿದ್ದ ಮುಸಿಯಾವನ್ನು ಹಿಡಿಯುವಂತೆ ಸ್ಥಳೀಯರು ಸಾಕಷ್ಟು ಬಾರಿ ಮನವಿ ಮಾಡಿದ್ದರು. ಆದರೆ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಜನರಲ್ಲಿ ದಿನೇ ದಿನೇ ಆತಂಕ ಹೆಚ್ಚಾಗುತ್ತಿತ್ತು.

ಮುಸಿಯಾದಿಂದ ಉಂಟಾದ ಸಮಸ್ಯೆ ಬಗ್ಗೆ ನಂತರ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಇಲಾಖೆಯ ಐವರು ಅಧಿಕಾರಿಗಳ ತಂಡ, ಪುರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಮುಸಿಯಾ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಈ ಕಾರ್ಯಾಚರಣೆ ಅಷ್ಟು ಸುಲಭವಾಗಿರಲಿಲ್ಲ ಎನ್ನುವುದು ಮಾತ್ರ ನಿಜ. ಅರಣ್ಯ ಇಲಾಖೆಯ ಸಿಬ್ಬಂದಿ ಜೀವಸಹಿತವಾಗಿ ಈ ಮುಸಿಯಾವನ್ನು ಹಿಡಿಯಲು ಬೋನು ಸಮೇತ ಬಂದಿದ್ದರು. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಮರಗಳಲ್ಲಿ ನೆಗೆಯುತ್ತಿದ್ದ ಮುಸಿಯಾ ಅರಣ್ಯ ಇಲಾಖೆಯ ಅಧಿಕಾರಿಗಳು ಬೆವರು ಸುರಿಸುವಂತೆ ಮಾಡಿತು. ಕೊನೆಗೆ ಅರವಳಿಕೆ ತಜ್ಞರು ಮದ್ದನ್ನು ಮುಸಿಯಾಕ್ಕೆ ಚುಚ್ಚಿದ್ದು, ಅದರ ಪ್ರಜ್ಞೆ ತಪ್ಪಿಸಿ ಮುಸಿಯಾವನ್ನು ಹಿಡಿಯಲಾಯಿತು. ಬಳಿಕ ಮುಸಿಯಾವನ್ನು ಶಿವಮೊಗ್ಗದ ಲಯನ್ ಸಫಾರಿಗೆ ಕಳುಹಿಸಿಕೊಡಲಾಯಿತು.

ಕಳೆದ ಐದು ತಿಂಗಳ ಹಿಂದೆಯೂ ಹೊನ್ನಾಳಿ ಪಟ್ಟಣದಲ್ಲಿ ಇದೇ ರೀತಿಯ ಕೋತಿ ಕಾಟಕೊಡುತಿತ್ತು. ಪುರಸಭೆ ಅಧಿಕಾರಿಗಳು, ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯರ ಮೇಲೂ ದಾಳಿ ಮಾಡಿದ್ದ ಕೋತಿ 40 ಜನರಿಗೆ ಕಚ್ಚಿ ಗಾಯಗೊಳಿಸಿತ್ತು. ಆ ಕೋತಿಯನ್ನು ಸಹ ಇದೇ ತಜ್ಞರ ತಂಡ ಹಿಡಿದಿತ್ತು.

ಇದನ್ನೂ ಓದಿ:

ಚಿಕ್ಕಬಳ್ಳಾಪುರದ ವಿದುರಾಶ್ವತ್ಥದಲ್ಲಿ ಕೋತಿಗಳ ಉಪಟಳ: ಓಡಿಸುವುದಕ್ಕೆ ಮಾರುವೇಷ ಧರಿಸಿದ ಅರಣ್ಯ ಸಿಬ್ಬಂದಿ

Viral Video: ಕೋತಿ ತರಕಾರಿ ಕತ್ತರಿಸುವ ಚೆಂದ..; ಮಹಿಳೆಗೆ ಸಹಾಯ ಮಾಡುವ ಮಂಗಕ್ಕೆ ಮನಸೋತ ನೆಟ್ಟಿಗರು !