ವಿಜಯಪುರದಲ್ಲಿ ರೆಮ್ಡಿಸಿವಿರ್ ಇಂಜೆಕ್ಷನ್ ಮಾರಾಟ; ಹತ್ತು ಜನ ಬಂಧನ
ಪೊಲೀಸರು ಬಂಧಿತರಿಂದ 9 ರೆಮ್ಡಿಸಿವಿರ್ ವಯಲ್ಸ್ ವಶಕ್ಕೆ ಪಡೆದಿದ್ದು, ಗೋಲಗುಂಬಜ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರಕರಣ ಮತ್ತು ಗಾಂಧಿಚೌಕ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ವಿಜಯಪುರ: ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ. ಆದರೆ ಕೆಲವರು ಈ ಸಂದಿಗ್ಧ ಕಾಲದಲ್ಲಿ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ಒಂದು ಕಡೆ ಸೂಕ್ತ ಚಿಕಿತ್ಸೆ ಸಿಗದೆ ಜನರು ಪರದಾಟ ಪಡುತ್ತಿದ್ದಾರೆ. ಇನ್ನೊಂದು ಕಡೆ ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಇಂಜೆಕ್ಷನ್ ಮಾರಾಟವಾಗುತ್ತಿದೆ. ಹೀಗೆ ಅಕ್ರಮವಾಗಿ ರೆಮ್ಡಿಸಿವಿರ್ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದ ಸುಮಾರು 10 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಬಂಧಿತರಿಂದ 9 ರೆಮ್ಡಿಸಿವಿರ್ ವಯಲ್ಸ್ ವಶಕ್ಕೆ ಪಡೆದಿದ್ದು, ಗೋಲಗುಂಬಜ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರಕರಣ ಮತ್ತು ಗಾಂಧಿಚೌಕ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ರೆಮ್ಡಿಸಿವಿರ್ ಔಷಧಿಯ ಬೇಡಿಕೆ ಹೆಚ್ಚಾಗಿದೆ. ಈ ಔಷಧಿಯ ಡಿಮ್ಯಾಂಡ್ ಈಗ ಹೆಚ್ಚಾಗಿರುವ ಕಾರಣ ಇದನ್ನು ಈಗ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ನಿಜವಾಗಿ ಯಾರಿಗೆ ಔಷಧಿ ಅಗತ್ಯವಿದೆಯೋ ಅವರಿಗೆ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಇದನ್ನು ಮಾರಾಟ ಮಾಡಲಾಗುತ್ತಿದೆ. ಈ ಕುರಿತು ವಿಜಯಪುರ ಜಿಲ್ಲೆಯಲ್ಲಿ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಮೂರು ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಗಳಲ್ಲಿ ಖಾಸಗಿ ಆಸ್ಪತ್ರೆಯ ಸ್ಟಾಪ್ ನರ್ಸ್ಗಳು ಸಹಿತ ಶಾಮೀಲಾಗಿದ್ದಾರೆ ಎಂದು ಎಸ್ಪಿ ಅನುಪಮ್ ಅಗರ್ವಾಲ್ ಹೇಳಿದರು.
ರೋಗಿಗಳ ಹೆಸರು ಮೇಲೆ ಇಂಜೆಕ್ಷನ್ ಪಡೆದು ಬ್ಲ್ಯಾಕ್ ಮಾರ್ಕೆಟ್ನಲ್ಲಿ ಮಾರಾಟ ಮಾಡುತ್ತಿದ್ದಾರೆ. ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ಮಾರಾಟ ಮಾಡಿದ ಮೂರು ಪ್ರಕರಣ ಜಿಲ್ಲೆಯಲ್ಲಿ ದಾಖಲಿಸಲಾಗಿದೆ. ಒಟ್ಟು ಮೂರು ಪ್ರಕರಣಗಳ ಪೈಕಿ ಹತ್ತು ಜನರ ಬಂಧನ ಹಾಗೂ 9 ಇಂಜೆಕ್ಷನ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ
ಇಷ್ಟಕ್ಕೂ ಕೊರೊನಾ ಸೋಂಕಿತ ವ್ಯಕ್ತಿಗೆ ಆಕ್ಸಿಜನ್ ಎಷ್ಟು ಬೇಕು? ಆಕ್ಸಿಜನ್ ಕಾನ್ಸೆಂಟ್ರೇಟ್ ಮಾತ್ರವೇ ಸಾಕಾದೀತಾ?
ಚಾಮರಾಜನಗರ ರೋಗಿಗಳ ಸಾವು ಪ್ರಕರಣ; ಡೆತ್ ಆಡಿಟ್ ಕಮಿಟಿ ವರದಿ ಟಿವಿ9ಗೆ ಲಭ್ಯ
(Police arrested ten people who were illegally selling Remdesivir injection at Vijayapura)