ಆಕ್ಸಿಜನ್ ಪೂರೈಕೆ ವಿಚಾರ: ಮೈಸೂರು, ಚಾಮರಾಜನಗರ ಜಿಲ್ಲಾಡಳಿತಗಳ ಮಧ್ಯೆ ಕೋಲ್ಡ್ ವಾರ್!

ಆಕ್ಸಿಜನ್ ಪೂರೈಕೆಯಾಗಿಲ್ಲ ಎಂದಿರುವ ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್.ರವಿ ಪತ್ರಿಕಾಗೋಷ್ಠಿಯಲ್ಲಿ ಆಕ್ಸಿಜನ್ ಸಮಸ್ಯೆ ಇತ್ತು ಎಂದು ಹೇಳುತ್ತಿದ್ದಾರೆ. ಜೊತೆಗೆ ಭಾನುವಾರ ರಾತ್ರಿ 3 ಗಂಟೆಗೆ ಆಕ್ಸಿಜನ್ ಪೂರೈಕೆ ಮಾಡಿದ್ದಾರೆ. 30 ಸಿಲಿಂಡರ್ ಮೆಡಿಕಲ್ ಆಕ್ಸಿಜನ್ ಪೂರೈಕೆ ಮಾಡಿದ್ದಾರೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಹೇಳಿದರು.

ಆಕ್ಸಿಜನ್ ಪೂರೈಕೆ ವಿಚಾರ: ಮೈಸೂರು, ಚಾಮರಾಜನಗರ ಜಿಲ್ಲಾಡಳಿತಗಳ ಮಧ್ಯೆ ಕೋಲ್ಡ್ ವಾರ್!
ರೋಹಿಣಿ ಸಿಂಧೂರಿ
Follow us
sandhya thejappa
|

Updated on: May 04, 2021 | 10:09 AM

ಚಾಮರಾಜನಗರ: ನಿನ್ನೆ (ಮೇ 3) ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಘಟನೆ ಹಲವು ಚರ್ಚೆಗೆ ಗ್ರಾಸವಾಗಿದೆ. 24 ಗಂಟೆಯಲ್ಲಿ 24 ಜನ ಸೋಂಕಿತರು ಆಕ್ಸಿಜನ್ ಸಿಗದೆ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಜಿಲ್ಲಾಡಳಿತ ಸರಿಯಾದ ಸಾವಿನ ಸಂಖ್ಯೆಯನ್ನು ಕೊಡಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಈ ನಡುವೆ ಆಕ್ಸಿಜನ್ ಪೂರೈಕೆ ವಿಚಾರದಲ್ಲಿ ಮೈಸೂರು, ಚಾಮರಾಜನಗರ ಜಿಲ್ಲಾಡಳಿತಗಳ ಮಧ್ಯೆ ಕೋಲ್ಡ್ ವಾರ್ ನಡೆಯುತ್ತಿದ್ದು, ಮೈಸೂರು ಜಿಲ್ಲಾಡಳಿತ  ಪೂರೈಕೆ ಮಾಡಿದ್ದೇವೆ ಎಂದು ಹೇಳುತ್ತಿರುವ 200 ಆಕ್ಸಿಜನ್ ಸಿಲಿಂಡರ್​ ಎಲ್ಲಿಗೆ ಹೋಗಿವೆ ಎಂಬ ಅನುಮಾನ ವ್ಯಕ್ತವಾಗಿದೆ.

ಭಾನುವಾರ ಜಿಲ್ಲೆಗೆ ಆಕ್ಸಿಜನ್ ಪೂರೈಕೆಯಾಗಿಲ್ಲ ಎಂದಿರುವ ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್.ರವಿ ಪತ್ರಿಕಾಗೋಷ್ಠಿಯಲ್ಲಿ ಆಕ್ಸಿಜನ್ ಸಮಸ್ಯೆ ಇತ್ತು ಎಂದು ಹೇಳುತ್ತಿದ್ದಾರೆ. ಜೊತೆಗೆ ಭಾನುವಾರ ರಾತ್ರಿ 3 ಗಂಟೆಗೆ ಆಕ್ಸಿಜನ್ ಪೂರೈಕೆ ಮಾಡಿದ್ದಾರೆ. 30 ಸಿಲಿಂಡರ್ ಮೆಡಿಕಲ್ ಆಕ್ಸಿಜನ್ ಪೂರೈಕೆ ಮಾಡಿದ್ದಾರೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಹೇಳಿದರು. ಆದರೆ ಮೈಸೂರು ಜಿಲ್ಲಾಡಳಿತ ಭಾನುವಾರ 12 ಗಂಟೆಗೆ 250 ಸಿಲಿಂಡರ್ ಕೊಟ್ಟಿರುವುದಾಗಿ ಹೇಳಿಕೆ ನೀಡಿದೆ.

ನಿನ್ನೆ ಸಂಜೆ ವಾರ್ತಾ ಇಲಾಖೆಯಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಭಾನುವಾರ 12 ಗಂಟೆಗೆ 250 ಸಿಲಿಂಡರ್ ಕೊಟ್ಟಿರುವುದಾಗಿ ಹೇಳುತ್ತಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಹೇಳಿಕೆಯಿಂದ ಅನುಮಾನ ವ್ಯಕ್ತವಾಗಿದ್ದು, ಮೈಸೂರು ಜಿಲ್ಲಾಧಿಕಾರಿ ಕಳುಹಿಸಿ ಕೊಟ್ಟ ಸಿಲಿಂಡರ್ ಎಲ್ಲಿಗೆ ಹೋದವು? ಅಥವಾ ಮೈಸೂರು ಜಿಲ್ಲಾಧಿಕಾರಿ ತಪ್ಪನ್ನ ಮುಚ್ಚಿ ಹಾಕಲು ಗೂಬೆ ಕೂರಿಸುತ್ತಿದ್ದಾರೆಯೇ? ಎಂಬ ಪ್ರಶ್ನೆಗಳು ಮೂಡಿವೆ. ಈ ಮಧ್ಯೆ ಏಪ್ರಿಲ್ 24 ರಿಂದ ಪ್ರತಿನಿತ್ಯ 200 ಸಿಲಿಂಡರ್ ಕೊಡುತ್ತಿರುವುದಾಗಿ ಮೈಸೂರಿನ ಸರದನ್ ಮತ್ತು ಪದಕಿ ಸಿಲಿಂಡರ್ ಏಜೆನ್ಸಿ ಟಿವಿ9 ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ

ಕೊರೊನಾ ಕಾಟ: ಇನ್ನು ಉಳಿದ ಐಪಿಎಲ್​ ಪಂದ್ಯಗಳೆಲ್ಲವೂ ಸುರಕ್ಷಿತವಾಗಿ ಮುಂಬೈನಲ್ಲೇ? ಏನಿದು ಬಿಸಿಸಿಐ ಚಿಂತನೆ, ಇಲ್ಲಿದೆ ವಿವರ

ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಯಡವಟ್ಟು; ಮಾಯಪ್ಪನ ಶವವನ್ನು ಪಾಯಪ್ಪನ ಕುಂಟುಂಬಸ್ಥರಿಗೆ ಹಸ್ತಾಂತರ

(Cold War is taking place between Mysore and Chamarajanagar District Administration)