ಯಾದಗಿರಿಯಲ್ಲಿ ಮೊಸಳೆ ಮೇಲೆ ಕಲ್ಲು ಎತ್ತಿಹಾಕಿ ಸಾಯಿಸಿರುವ ಅಪರಿಚಿತರು
ಬೈಕ್ನಲ್ಲಿ ಹೋಗುತ್ತಿದ್ದ ಇಬ್ಬರು ಗಾಬರಿಗೊಂಡ ಮಹಿಳೆಯರನ್ನು ವಿಚಾರಿಸಿದಾಗ ಮೊಸಳೆ ಇರುವುದು ತಿಳಿಸಿದ್ದಾರೆ. ಮೊಸಳೆ ಪೊದೆಯೊಳಗೆ ಹೋಗುತ್ತಿದ್ದಂತೆ ಅಲ್ಲೆ ಇದ್ದ ಕಲ್ಲು ಎತ್ತಿ ಹಾಕಿ ಗಾಯಗೊಳಿಸಿ ಸೆರೆ ಹಿಡಿಯಲು ಮುಂದಾಗಿದ್ದಾರೆ. ಕಲ್ಲಿನ ಹೊಡೆತಕ್ಕೆ ಮೊಸಳೆ ಸಾವನ್ನಪ್ಪಿರಬಹುದು ಅಂತ ಗ್ರಾಮಸ್ಥರು ಹೇಳುತ್ತಿದ್ದಾರೆ.
ಯಾದಗಿರಿ: ಜಿಲ್ಲೆಯ ವಡಗೇರ ತಾಲೂಕಿನ ಯಕ್ಷಿಂತಿ ಗ್ರಾಮದ ಸಣ್ಣ ಹಳ್ಳದಲ್ಲಿ ಮೊಸಳೆಯ ಮೃತದೇಹ ಪತ್ತೆಯಾಗಿದೆ. ಶನಿವಾರ ಹಳ್ಳದ ಕಡೆ ಹೋದವರು ಮೊಸಳೆ ಮೇಲೆ ಕಲ್ಲು ಎತ್ತಿ ಹಾಕಿದ್ದ ಕಾರಣ ಮೊಸಳೆ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಹಳ್ಳದಲ್ಲಿ ಮೊಸಳೆ ಕಂಡು ಮಹಿಳೆಯರು ಚಿರಾಡುತ್ತಾ ಓಡಿ ಬಂದಿದ್ದಾರೆ. ಅದೆ ವೇಳೆ ಬೈಕ್ನಲ್ಲಿ ಹೋಗುತ್ತಿದ್ದ ಇಬ್ಬರು ಗಾಬರಿಗೊಂಡ ಮಹಿಳೆಯರನ್ನು ವಿಚಾರಿಸಿದಾಗ ಮೊಸಳೆ ಇರುವುದು ತಿಳಿಸಿದ್ದಾರೆ. ಮೊಸಳೆ ಪೊದೆಯೊಳಗೆ ಹೋಗುತ್ತಿದ್ದಂತೆ ಅಲ್ಲೆ ಇದ್ದ ಕಲ್ಲು ಎತ್ತಿ ಹಾಕಿ ಗಾಯಗೊಳಿಸಿ ಸೆರೆ ಹಿಡಿಯಲು ಮುಂದಾಗಿದ್ದಾರೆ. ಕಲ್ಲಿನ ಹೊಡೆತಕ್ಕೆ ಮೊಸಳೆ ಸಾವನ್ನಪ್ಪಿರಬಹುದು ಅಂತ ಗ್ರಾಮಸ್ಥರು ಹೇಳುತ್ತಿದ್ದಾರೆ.
ತಾಲೂಕು ಪಶುವೈದ್ಯಾಧಿಕಾರಿ ಮೊಸಳೆ ಪಂಚನಾಮೆಯ ನಡೆಸಿದ್ದಾರೆ. ಮೊಸಳೆ ಯಾವ ರೀತಿ ಸತ್ತಿರಬಹುದು ಅಂತ ವಿಚಾರಣೆ ನಡೆಯುತ್ತಿದೆ ಎಂದು ಶಹಾಪುರ ಉಪ ವಲಯ ಅರಣ್ಯಾಧಿಕಾರಿ ಐ.ಬಿ.ಹೂಗಾರ ತಿಳಿಸಿದ್ದಾರೆ.
ಆತಂಕದಲ್ಲಿ ಜನರು ಮೊಸಳೆ ಸಾವನ್ನಪ್ಪಿದ್ದರೂ ಜನರು ಹಳ್ಳದ ಕಡೆ ಹೋಗುವುದ್ದಕ್ಕೆ ಭಯ ಪಡುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಣ್ಣ ಹಳ್ಳ ಪೂರ್ತಿ ಪರಿಶೀಲನೆ ನಡೆಸಬೇಕಾಗಿದೆ. ಜನರಲ್ಲಿ ಮನೆ ಮಾಡಿರುವ ಆತಂಕವನ್ನು ಹೋಗಲಾಡಿಸುವ ಅಗತ್ಯವಿದೆ ಅಂತ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬಾರದ ಪರಿಹಾರ ಯಕ್ಷಿಂತಿ ಗ್ರಾಮದ ಬಳಿ ಕೃಷ್ಣ ನದಿಯಲ್ಲಿ ಎರಡು ತಿಂಗಳ ಹಿಂದೆ ಮೊಸಳೆಗೆ ಬಳಿಯಾಗಿದ್ದ ಶಾರದಹಳ್ಳಿ ಹನುಮಂತ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 5 ಲಕ್ಷ ಪರಿಹಾರ ಇಂದಿಗೂ ಬಂದಿಲ್ಲ. ಕಡು ಬಡತನದಲ್ಲಿರುನ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಮತ್ತೊಮ್ಮೆ ಮೇಲಾಧಿಕಾರಿಗಳಿಗೆ ಮನವಿ ಮಾಡುತ್ತೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ
ಗದಗದ ಲಖಮಾಪುರ ಗ್ರಾಮಸ್ಥರಿಗೆ ಮತ್ತೆ ಎದುರಾದ ಪ್ರವಾಹ ಭೀತಿ; ಸಚಿವ ಸಿ.ಸಿ.ಪಾಟೀಲ್ ವಿರುದ್ಧ ಕಿಡಿ
Dandruff: ತಲೆಹೊಟ್ಟಿನ ಸಮಸ್ಯೆಗಾಗಿ ಇಲ್ಲಿದೆ ಪರಿಹಾರ; ನೈಸರ್ಗಿಕವಾಗಿ ಸಿಗುವ ವಸ್ತುಗಳ ಬಳಕೆಯೇ ಹೆಚ್ಚು ಸೂಕ್ತ
(A stranger thrown a stone on crocodile in Yadgir)