ವರ್ತೂರು ಪ್ರಕಾಶ್​ ಕಿಡ್ನ್ಯಾಪ್ ಕೇಸ್​: ಕಾರ್​ನಲ್ಲಿ ಪತ್ತೆಯಾದ ವೇಲ್ ಬಟ್ಟೆ ಬಿಚ್ಚಿಟ್ಟ ರಹಸ್ಯವೇನು?

| Updated By: ಸಾಧು ಶ್ರೀನಾಥ್​

Updated on: Dec 02, 2020 | 12:20 PM

ಕಾರಿನಲ್ಲಿ ವೇಲ್​ ಪತ್ತೆಯಾದ ಬೆನ್ನಲ್ಲೇ ಇನ್ನೂ ಅನೇಕ ಪ್ರಶ್ನೆಗಳು ಎದ್ದಿವೆ. ವರ್ತೂರು ಪ್ರಕಾಶ್​ರನ್ನು ಯಾವುದಾದರೂ ಮಹಿಳೆಯ ವಿಚಾರಕ್ಕೆ ಅಪಹರಿಸಲಾಗಿತ್ತಾ? ಅಥವಾ ದುಡ್ಡಿಗಾಗಿ ಹನಿಟ್ರ್ಯಾಪ್ ಮಾಡಲಾಗಿತ್ತಾ? ಎಂಬ ಅನುಮಾನವೂ ಶುರುವಾಗಿದೆ.

ವರ್ತೂರು ಪ್ರಕಾಶ್​ ಕಿಡ್ನ್ಯಾಪ್ ಕೇಸ್​: ಕಾರ್​ನಲ್ಲಿ ಪತ್ತೆಯಾದ ವೇಲ್ ಬಟ್ಟೆ ಬಿಚ್ಚಿಟ್ಟ ರಹಸ್ಯವೇನು?
ಅಪಹರಣಕ್ಕೆ ಬಳಸಲಾದ ಕಾರು ಮತ್ತು ಪತ್ತೆಯಾದ ದುಪ್ಪಟ್ಟಾ.
Follow us on

ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್​ ಕಿಡ್ನ್ಯಾಪ್​ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್ ಸಿಕ್ಕಿದೆ. ಇತ್ತ ವರ್ತೂರು ಪ್ರಕಾಶ್​ ಗೃಹ ಸಚಿವರನ್ನು ಭೇಟಿಯಾಗಿ ಭದ್ರತೆಗೆ ಮನವಿ ಮಾಡಿದ್ದರೆ, ಅತ್ತ ಅವರು ಅಪಹರಣವಾಗಿದ್ದ ಕಾರಿನಲ್ಲಿ ಮಹಿಳೆಯರು ಬಳಸುವ ದುಪ್ಪಟ್ಟಾ ಮಾದರಿಯ ಬಟ್ಟೆಯೊಂದು ಪತ್ತೆಯಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಕಾರಿನಲ್ಲಿ ವೇಲ್​ ಪತ್ತೆಯಾದ ಬೆನ್ನಲ್ಲೇ ಇನ್ನೂ ಅನೇಕ ಪ್ರಶ್ನೆಗಳು ಎದ್ದಿವೆ. ವರ್ತೂರು ಪ್ರಕಾಶ್​ರನ್ನು ಯಾವುದಾದರೂ ಮಹಿಳೆಯ ವಿಚಾರಕ್ಕೆ ಅಪಹರಿಸಲಾಗಿತ್ತಾ? ಅಥವಾ ದುಡ್ಡಿಗಾಗಿ ಹನಿಟ್ರ್ಯಾಪ್ ಮಾಡಲಾಗಿತ್ತಾ? ಎಂಬ ಅನುಮಾನವೂ ಶುರುವಾಗಿದೆ. ಪೊಲೀಸರು ಕೂಡ ಈ ಆಯಾಮದಲ್ಲಿ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಆ ದುಪ್ಪಟ್ಟಾ ಹಿಂದಿನ ರಹಸ್ಯ ಏನು​ ಎಂಬುದು ತನಿಖೆ ನಂತರ ಗೊತ್ತಾಗಬೇಕಿದೆ. ಕೋಲಾರ ಪೊಲೀಸರು ವರ್ತೂರು ಪ್ರಕಾಶ್​ಗಾಗಿ ಕಾಯುತ್ತಿದ್ದಾರೆ.

ವರ್ತೂರು ಪ್ರಕಾಶ್​ ಅಪಹರಣದ ಹಿಂದೆ ಮಹಿಳೆ? ಮಾಜಿ ಸಚಿವರು ಹೇಳಿದ ಕಿಡ್ನಾಪ್​ ಪ್ರಸಂಗದ ಸುತ್ತ ಅನುಮಾನದ ಹುತ್ತ!