AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರ್ವಜನಿಕ ಶೌಚಾಲಯಕ್ಕೆ ಸಂಬಂಧಪಟ್ಟ ಹೈಕೋರ್ಟ್ ನಿರ್ದೇಶನಕ್ಕೆ ಬಿಬಿಎಂಪಿ ಸಿದ್ಧತೆ ಹೇಗಿದೆ ಗೊತ್ತಾ?

ಹೈಕೋರ್ಟ್​ ನಿದೇರ್ಶನದಂತೆ ಸಮೀಕ್ಷೆ ನಡೆಸುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಎಷ್ಟು ಶೌಚಾಲಯಗಳು ಬೇಕು, ಇರುವ ಶೌಚಾಲಯಗಳಲ್ಲಿ ಬಳಕೆಗೆ ಯೋಗ್ಯವಲ್ಲದವುಗಳು ಎಷ್ಟು, ಕಾಮಗಾರಿಯಲ್ಲಿ ಎಷ್ಟು ಶೌಚಾಲಯಗಳಿವೆ ಮತ್ತು ಬಳಕೆಗೆ ಯೋಗ್ಯವಾದ ಶೌಚಾಲಯಗಳು ಎಷ್ಟು ಎಂಬ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ವರದಿ ಸಿದ್ಧಪಡಿಸುತ್ತಿದ್ದೇವೆ ಎಂದು ಬಿಬಿಎಂಪಿ ವಿಶೇಷ ಆಯುಕ್ತರಾದ ರಂದೀಪ್ ಹೇಳಿದರು.

ಸಾರ್ವಜನಿಕ ಶೌಚಾಲಯಕ್ಕೆ ಸಂಬಂಧಪಟ್ಟ ಹೈಕೋರ್ಟ್ ನಿರ್ದೇಶನಕ್ಕೆ ಬಿಬಿಎಂಪಿ ಸಿದ್ಧತೆ ಹೇಗಿದೆ ಗೊತ್ತಾ?
Follow us
preethi shettigar
|

Updated on:Dec 02, 2020 | 12:08 PM

ಬೆಂಗಳೂರು: ಬೆಂಗಳೂರಿನಲ್ಲಿ ಒಟ್ಟು ಜನಸಂಖ್ಯೆಗೆ ಅಗತ್ಯವಿರುವಷ್ಟು ಸಾರ್ವಜನಿಕ ಶೌಚಾಲಯಗಳು ಇದೆಯೇ? ಅವುಗಳ ಸ್ಥಿತಿಗತಿಗಳು ಏನು? ಮತ್ತು ಇನ್ನೂ ಎಷ್ಟು ಶೌಚಾಲಯಗಳ ಅವಶ್ಯಕತೆ ರಾರ್ಜಧಾನಿಗೆ ಬೇಕಿದೆ? ಇದೆಲ್ಲದರ ಬಗ್ಗೆ ಸಮೀಕ್ಷೆ ನಡೆಸಿ, ಉತ್ತರಿಸುವಂತೆ ಬಿಬಿಎಂಪಿಗೆ (ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ) ಕರ್ನಾಟಕ ಹೈಕೋರ್ಟ್ ಸೋಮವಾರ ಸೂಚಿಸಿತ್ತು.

ಹೈಕೋರ್ಟ್ ನೀಡಿದ ನಿರ್ದೇಶನದಂತೆ ಜನವರಿ 9, 2021ರ ಒಳಗೆ ಬಿಬಿಎಂಪಿ ಸಾರ್ವಜನಿಕ ಶೌಚಾಲಯಗಳ ಕಾರ್ಯಯೋಜನೆಯ ಸಂಪೂರ್ಣ ವರದಿಯನ್ನು ಸಲ್ಲಿಸಬೇಕಿದೆ. ಹಾಗಿದ್ದರೆ ಹೈಕೋರ್ಟ್​ ಸೂಚನೆಗೆ ಬಿಬಿಎಂಪಿ ತಯಾರಿ ಹೇಗಿದೆ?

ಹೈಕೋರ್ಟ್​ ನಿದೇರ್ಶನದಂತೆ ಸಮೀಕ್ಷೆ ನಡೆಸುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಎಷ್ಟು ಶೌಚಾಲಯಗಳು ಬೇಕು? ಬಳಕೆಗೆ ಯೋಗ್ಯವಲ್ಲದ ಶೌಚಾಲಯಗಳು ಈಗ ಎಷ್ಟು ಇವೆ? ಕಾಮಗಾರಿ ನಡೆಯುತ್ತಿರುವ ಶೌಚಾಲಯಗಳು ಎಷ್ಟು? ಮತ್ತು ಬಳಕೆಗೆ ಯೋಗ್ಯವಾದ ಶೌಚಾಲಯಗಳು ಎಷ್ಟು? ಎಂಬೆಲ್ಲಾ ಮಾಹಿತಿಯನ್ನು ಸಂಗ್ರಹಿಸಿ ವರದಿ ಸಿದ್ಧಪಡಿಸುತ್ತಿದ್ದೇವೆ ಎಂದು ಬಿಬಿಎಂಪಿ ವಿಶೇಷ ಆಯುಕ್ತರಾದ ರಂದೀಪ್ ಟಿವಿ9 ಡಿಜಿಟಲ್​ಗೆ ಹೇಳಿದ್ದಾರೆ.

ಸಾರ್ವಜನಿಕ ಶೌಚಾಲಯದ ನಿರ್ವಹಣೆ ಹೊತ್ತ ಮಾರ್ಷೆಲ್:

ಸಾರ್ವಜನಿಕ ಶೌಚಾಲಯದ ಬಗ್ಗೆ ಮಾಹಿತಿಯನ್ನು ಕಲೆ ಹಾಕುವ ಜವಾಬ್ದಾರಿಯನ್ನು ರಸ್ತೆಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಮತ್ತು ನಿಯಮಗಳ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸುವ ಕಾರ್ಯದಲ್ಲಿ ತೊಡಗಿರುವ ಮಾರ್ಷೆಲ್​ಗಳಿಗೆ ವಹಿಸಲಾಗಿದೆ. ಅವರನ್ನ ಬಳಸಿಕೊಂಡು ಸಾರ್ವಜನಿಕ ಶೌಚಾಲಯಗಳು ಯಾವ ಎಲ್ಲಾ ಸ್ಥಳಗಳಲ್ಲಿ ಶಿಥಿಲಗೊಂಡಿದೆ, ಶೌಚಾಲಯಗಳ ಸ್ಥಿತಿ ಏನು ಮತ್ತು ಅವುಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ಕಾರ್ಯಗಳ ಬಗ್ಗೆ ಹಾಗೂ ಶೌಚಾಲಯಗಳ ದುರಸ್ಥಿಯ ಕುರಿತು ಮಾಹಿತಿ ಸಂಗ್ರಹಿಸಿ ವರದಿ ಮಾಡಲಾಗುತ್ತದೆ ಎಂದು ರಂದೀಪ್ ಹೇಳಿದರು.

ಬೆಂಗಳೂರಿನಲ್ಲಿ 500 ಸಾರ್ವಜನಿಕ ಶೌಚಾಲಯಗಳು ಇದೆ. ಅದರಲ್ಲಿ 418 ಶೌಚಾಲಯಗಳು ಬಳಕೆಗೆ ಯೋಗ್ಯವಾಗಿದೆ ಇನ್ನು ಉಳಿದವು ಶಿಥಿಲಗೊಂಡಿದೆ. ಹೀಗಾಗಿ ಜನಸಂಖ್ಯೆಗೆ ಅನುಗುಣವಾಗಿ ಇನ್ನು ಎಷ್ಟು ಶೌಚಾಲಯಗಳು ಬೇಕು ಎಂಬುದರ ಮಾಹಿತಿಯನ್ನು ನೀಡುವಂತೆ ನ್ಯಾಯಪೀಠ ತಿಳಿಸಿದೆ.

ಈ ನಿಟ್ಟಿನಲ್ಲಿ ನಾವು ಕೋರ್ಟ್​ಗೆ ಸರಿಯಾದ ಮಾಹಿತಿಯನ್ನು ತಲುಪಿಸುತ್ತೇವೆ, ಕೆಲವೊಂದು ನಮ್ಮ ಕೊರತೆಗಳಿದೆ ಅವುಗಳ ಬಗ್ಗೆಯೂ ತಿಳಿಸಿ ಸರಿಪಡಿಸುವಿಕೆಗೆ ಸಮಯಾವಕಾಶ ಪಡೆದುಕೊಳ್ಳುತ್ತೇವೆ ಹಾಗೂ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ ಸರ್ಕಾರದಿಂದ ಎಷ್ಟು ಅನುದಾನ ಬಂದಿದೆ ಎಂಬ ಕುರಿತು ವರದಿಯನ್ನು ಸಿದ್ಧಪಡಿಸಿಕೊಳ್ಳುತ್ತಿದ್ದೇವೆ ಎಂದು ರಂದೀಪ್ ಹೇಳಿದರು.

World Toilet Day 2020: ಪಾಳುಬಿದ್ದ BBMP ಸಾರ್ವಜನಿಕ ಶೌಚಾಲಯಗಳು

Published On - 12:03 pm, Wed, 2 December 20